24ರಂದು ಡಿಸ್ಟಿಕ್ಟ್‌ನಲ್ಲಿ ಆರ್ಯಭಟ ಸೆಕೆಂಡ್ ಟ್ಯಾಲೆಂಟ್ ಟೆಸ್ಟ್
ರಾಣಿಬೆನ್ನೂರ 24: ಇಲ್ಲಿನ ಮೃತ್ಯುಂಜಯನಗರದ ಮೃತ್ಯುಂಯ ಕಲ್ಯಾಣ ಮಂಟಪ ಬಳಿ ಇರುವ ಎಂ.ಕೆ ಪದವಿ ಪೂರ್ವ ಕಾಲೇಜಿನಲ್ಲಿ ಜ.28 ರಂದು ಬೆಳಿಗ್ಗೆ 11 ಗಂಟೆಯಿಂದ 12 ಗಂಟೆ ವರೆಗೆ ಮೋಸ್ಟ್ ಕಾಂಪಿಟೇಟಿವ್ಸ್ ಮತ್ತು ಎಕ್ಸಟಿಂಗ್ ಟ್ಯಾಲೆಂಟ್ ಟೆಸ್ಟ್ ಇನ್ ಹಾವೇರಿ ಡಿಸ್ಟಿಕ್ಟ್‌ನಲ್ಲಿ ಆರ್ಯಭಟ ಸೆಕೆಂಡ್ ಟ್ಯಾಲೆಂಟ್ ಟೆಸ್ಟ್ ನಡೆಸಲಾಗುವುದು. ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಥಮ ಬಹುಮಾನ 10 ಸಾವಿರ, ದ್ವಿತೀಯ ಬಹುಮಾನ 7 ಸಾವಿರ, ಮತ್ತು ತೃತೀಯ ಬಹುಮಾನ 5ಸಾವಿರ ರೂ ಬಹುಮಾನ ಮತ್ತು 14 ಲಕ್ಷದ ವರೆಗೂ ಸ್ಕಾಲರ್‌ಶಿಪ್ ನೀಡಲಾಗುವುದು ಎಂದು ಎಂ.ಕೆ. ಶಿಕ್ಷಣ ಸಂಸ್ಥೆಯ ಮುಖ್ಯ ಟ್ರಷ್ಟಿ ಡಾ.ಆರ್.ಎಸ್. ಯಲಿ ಹೇಳಿದರು.
ಇಲ್ಲಿನ ಮೃತ್ಯುಂಜಯನಗರದ ಎಂ.ಕೆ. ಪಿಯು ಕಾಲೇಜಿನ ಕ್ಯಾಂಪಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಳ್ಳಬಹುದು. ಜ. 28 ರಂದು ಬೆಳಿಗ್ಗೆ 9.30 ರಿಂದ 10.30 ರವರೆಗೆ ರೆಸಿಸ್ಟ್ರೇಶನ್, 10.30 ರಿಂದ 11 ಗಂಟೆ ವರೆಗೆ ಇಂಟ್ರಡಕ್ಸನ್, 11 ರಿಂದ 12 ಗಂಟೆ ವರೆಗೆ ಆರ್ಯಭಟ ಟ್ಯಾಲೆಂಟ್ ಟೆಸ್ಟ್ ನಡೆಸಲಾಗುವುದು ಎಂದರು.
ಮಧ್ಯಾಹ್ನ 12 ರಿಂದ 1 ಗಂಟೆ ವರೆಗೆ ಸಂಪ್ಮೂಲ ವ್ಯಕ್ತಿಗಳಿಂದ ಸ್ಪರ್ಧಾ ಮನೋಭಾವ ಮೂಡಿಸುವುದು. ಎಸ್‌ಎಸ್‌ಎಸ್‌ಸಿ ನಂತರ ಮುಂದೇನು, ಎಸ್‌ಎಸ್‌ಎಸ್‌ಸಿ ನಂತರ ಕೋರ್ಸ್‌ಗಳನ್ನು ಆಯ್ಕೆ ಮಾಡುವುದು ಉತ್ತಮ, ಹೇಗೆ ಕುರಿತು ಉಚಿತ ತರಬೇತಿ ನೀಡಲಾಗುವುದು. ವಾರ್ಷಿಕ ಪರೀಕ್ಷೆ ಮುಗಿದ ಮೇಲೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್ ಮಾಡುತ್ತೇವೆ. ರೆಡಿ ರಿಕನರ್ ಬುಕ್‌ಲೆಟ್ ನೀಡಲಾಗುವುದು ಎಂದರು.
ಮಧ್ಯಾಹ್ನ 1.30 ರಿಂದ 2 ಗಂಟೆಗೆ ಫಲಿತಾಂಶ ಘೋಷಣೆ ನಂತರ 2 ಗಂಟೆಗೆ ಊಟ ಹಾಗೂ ಉಪಹಾರ ನೀಡಲಾಗುವುದು ಎಂದರು. ಹೆಚ್ಚಿನ ಮಾಹಿತಿಗಾಗಿ ಮೊ.ನಂ: 8431932060, 9108841422 ಇವರನ್ನು ಸಂಪರ್ಕಿಸಬಹುದು. ಪ್ರಾಚಾರ್ಯ ಗಣೇಶ ಹೆಗಡೆ, ಪ್ರಾಧ್ಯಾಪಕ ಕುಂಠೆ ಇದ್ದರು.