ಗುಳೇಗುಡ್ಡ

ಕಲಾವಿದರಿಗೆ ಉತ್ತೇಜನ ಅಗತ್ಯ: ಶೆಲ್ಲಿಕೇರಿ

ಕಲಾವಿದರಿಗೆ ಉತ್ತೇಜನ ಅಗತ್ಯ: ಶೆಲ್ಲಿಕೇರಿ
ತಾಲೂಕಿನ ಕಟಗೇರಿ ಗ್ರಾಮದಲ್ಲಿ ಜಾನಪದ ಕಲಾವಿದರಿಗೆ ಆಹಾರ ಕಿಟ್ ವಿತರಿಸಲಾಯಿತು.

ಗುಳೇದಗುಡ್ಡ 29: ಕಲಾವಿದರು ಲಾಕ್‌ಡೌನ್‌ದಿಂದ ತತ್ತರಿಸಿ ಹೋಗಿದ್ದಾರೆ. ಅವರ ಆಸರೆಗೆ ದಾನಿಗಳು ಹಾಗೂ ಜನಪ್ರತಿನಿಧಿಗಳು ಮುಂದೆ ಬರಬೇಕಾಗಿದೆ. ಸಂಕಷ್ಟದಲ್ಲಿರುವ ಅವರ ಬದುಕಿನ ಆಸರೆಗೆ ಇಂತಹ ಸಂದರ್ಭದಲ್ಲಿ ಕಲಾವಿದರಿಗೆ ಉತ್ತೇಜನ ನೀಡಬೇಕಿದೆ  ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.   

ಅವರು ಸೋಮವಾರ ತಾಲೂಕಿನ ಕೊಂಕಣಕೊಪ್ಪ, ಕಟಗೇರಿ, ಲಕ್ಕಸಕೊಪ್ಪ ಗ್ರಾಮಗಳಲ್ಲಿಯ ಜಾನಪದ ಕಲಾವಿದರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು. 

ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ತಿಮ್ಮೆಗೌಡ ಹಾಗೂ ವಿಧಾನಪರಿಷತ್ ಸದಸ್ಯ ಎಚ್‌.ಆರ್‌.ನಿರಾಣಿಯವರ ಸಹಕಾರದೊಂದಿಗೆ ಬಾಗಲಕೋಟ ಜಿಲ್ಲೆಯ ಸುಮಾರು 400 ಜನ ಜನಪದ ಕಲವಿದರಿಗೆ ಆಹಾರಧಾನ್ಯ ಕಿಟ್‌ಗಳನ್ನು  ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಕಲಾವಿದರು ನಾಡಿನ ಸಾಂಸ್ಕೃತಿಕ ಲೋಕದ ವಾರಸುದಾರರು. ಆಧುನಿಕತೆಯ ಪರಿಣಾಮದಿಂದಾಗಿ ಅನೇಕ ಕಲೆಗಳು ನಶಿಸಿ ಹೋಗಿವೆ. ಅಳಿದುಳಿದ ಕಲೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕಿದೆ. ಈ ದಿಶೆಯಲ್ಲಿ ಕಲಾವಿದರಿಗೆ ಉತ್ತೇಜನ ನೀಡಬೇಕಿದೆ ಎಂದು  ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.  

 ಬಾದಾಮಿ ತಾಲೂಕಾ ಮಾಜಿ ಕ.ಸಾ.ಪ ಮಾಜಿ ಅಧ್ಯಕ್ಷ ಶಂಕರ ಹೂಲಿ ಬಾದಾಮಿ ತಾಲೂಕಾ ಕಜಾಪ ಅಧ್ಯಕ್ಷ ನಾಗನೂರ, ಕಲಾವಿದರಾದ ಲಿಂಗಪ್ಪ ಮಲ್ಲಾಡದ, ಶಿಕ್ಷಕ ಎಂ.ಬಿ.ಕೋಟಿ, ಬಿ.ಸಿ.ಪ್ಯಾಟಿ, ತಮ್ಮಣ್ಣ ನಾಯಕ, ರಾಮಾರೂಢ ಬಡಿಗೇರ, ಯಲ್ಲಪ್ಪ ಕಟಗೇರಿ ಸೇರಿದಂತೆ  ಕಲಾವಿದರು ಹಾಜರಿದ್ದರು. 

ಸುದ್ದಿ ಓದಿ