ಚಿತ್ರಕಲಾ, ಮಕ್ಕಳ ಕಲೋತ್ಸವ ಸ್ಪರ್ಧೆ: ರಾಜ್ಯಮಟ್ಟದಲ್ಲಿ ಪ್ರಥಮ
ಲೋಕದರ್ಶನ ವರದಿ
ಬೈಲಹೊಂಗಲ 08: ಬಣ್ಣದಮನೆ ಸಾಂಸ್ಕೃತಿಕ ವೇದಿಕೆ ಗದಗ, ಕರ್ನಾಟಕ ಬಾಲವಿಕಾಸ ಆಕಾಡೆಮಿ ಧಾರವಾಡ ಇವರ ಸಂಯಕ್ತ ಆಶ್ರಯದಲ್ಲಿ ಗದಗ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಚಿತ್ರ ಕಲೋತ್ಸವದಲ್ಲಿ ಪಟ್ಟಣದ ಮತಕ್ಷೇತ್ರದ ಮಾದರಿ ಶಾಲೆ ನಂ.4 ರ ಆಂಗ್ಲ ಮಾಧ್ಯಮದ 4 ನೇ ತರಗತಿಯ ವಿದ್ಯಾರ್ಥಿನಿ ಸೋನಾಲಿ ಮಲ್ಲೇಶಪ್ಪ ಇಂಚಲ ವಿದ್ಯಾರ್ಥಿನಿ ಚಿತ್ರಕಲಾ ಸ್ಪರ್ಧೆಯಲ್ಲಿ ಮಕ್ಕಳ ಕಲೋತ್ಸವ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ವಿದ್ಯಾರ್ಥಿನಿಯ ಸಾಧನೆಗೆ ಮುಖ್ಯೋಪಾಧ್ಯಾಯ ಸಿ.ಎಸ್.ಧರೆಪ್ಪನವರ, ಐ ಬಿ ಹಿರೇಮಠ, ಎಸ್ ಎಫ ನದಾಫ, ಬಿ ಜಿ ಸಾಲಿ, ಪಿ ಜಿ ಖೇಮಲಾಪುರೆ ಎಸ್.ಎಚ್.ಭಜಂತ್ರಿ ಹಾಗೂ ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.