ಮಾ. 15ರಂದು ರಾಣೇಬೆನ್ನೂರಿಗೆ ಬಸವರಾಜ ಬೊಮ್ಮಾಯಿ ಆಗಮನ
ರಾಣೇಬೆನ್ನೂರ 15: ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಮತ್ತು ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಅವರು ಮಾ. 15ರಂದು ಶುಕ್ರವಾರ ನಗರಕ್ಕೆ ಆಗಮಿಸಲಿದ್ದಾರೆ ಎಂದು ಬಿಜೆಪಿ ನಗರಾಧ್ಯಕ್ಷ ರಮೇಶ್ ಗುತ್ತಲ ಮತ್ತು ಗ್ರಾಮೀಣ ಅಧ್ಯಕ್ಷ ಪರಮೇಶ್ ಗೂಳಣ್ಣನವರ ಹೇಳಿದರು. ಅವರು ಗುರುವಾರದಂದು ಬಿಜೆಪಿ ಕಾರ್ಯಾಲಯದಲ್ಲಿ ಏರಿ್ಡಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಅಂದು ಮುಂಜಾನೆ 11 ಘಂಟೆಗೆ ಪಿ.ಬಿ. ರಸ್ತೆಯ, ಮಾಗೋಡ ಕ್ರಾಸ್ ಬಳಿ ಲಲಿತ್ ಭವನ ದಿಂದ ನೂರಾರು ಬೈಕುಗಳೊಂದಿಗೆ ಬೊಮ್ಮಾಯಿಯನ್ನು ಸ್ವಾಗತಿಸುವ ಮೂಲಕ ಬೃಹತ್ ಬೈಕ್ ರ್ಯಾಲಿ ನಡೆಸಲಾಗುವುದು. ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ತೆರಳಿ ಆನಂತರ ಬಿಜೆಪಿ ಕಾರ್ಯಾಲಯಕ್ಕೆ ತಲುಪಲಿದೆ. ಅಂದು ಮದ್ಯಾಹ್ನ ,1 ಗಂಟೆಗೆ ಬಿಜೆಪಿ ಕಾರ್ಯಾಲಯದ ಆವರಣದಲ್ಲಿ ಸಾರ್ವಜನಿಕ ಸಮಾರಂಭ ಏರ್ಡಲಿದ್ದು ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಅವರು ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಎಸ್.ಎಸ್. ರಾಮಲಿಂಗಣ್ಣನವರ, ಭಾರತಿ ಜಂಬಗಿ, ಶಿವಕುಮಾರ್ ಮುದ್ದಪ್ಪಳವರ, ಬಸವರಾಜ್ ಹುಲ್ಲತ್ತಿ, ಪ್ರಕಾಶ್ ಪೂಜಾರ್, ಅಮೋಘ ಬಾದಾಮಿ ದೀಪಕ್ ಹರಪನಹಳ್ಳಿ ಮಂಜುನಾಥ್ ಓಲೇಕಾರ್ ಸೇರಿದಂತೆ ಮತ್ತಿತರರು ಇದ್ದರು.