ಮೋಟಾರ್ ಸೈಕಲ್ ಆರೋಪಿಗಳ ಬಂಧನ: ಪೊಲೀಸ್ ಕಾರ್ಯಾಚರಣೆ ಯಶ್ವಸಿ
ಜಮಖಂಡಿ 08: ನಗರದ ಬಸ್ ನಿಲ್ದಾಣದ ಹತ್ತಿರ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ. ಆತನು ಕಳ್ಳತನ ಮಾಡಿರುವ 14 ಮೋಟರ್ ಸೈಕಲ್ಗಳ ಕಳ್ಳತನವಾಗಿದ್ದನ್ನು ಸುಮಾರು 7 ಲಕ್ಷ ರೂ, ಕಿಮ್ಮತ್ತಿನ ಮೋಟರ್ ಸೈಕಲ್ಗಳನ್ನು ಶಹರ ಪೊಲೀಸರು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಶಹರ ಪೊಲೀಸ್ ಠಾಣಿಯ ವ್ಯಾಪ್ತಿಯಲ್ಲಿ ಮೋಟಾರ್ ಸೈಕಲ್ ಕಳ್ಳತನಗಳು ಹೆಚ್ಚಾಗಿ ವರದಿಯಾಗುತ್ತಿದ್ದು ಕಾರಣ ಕಳುವಾದ ಮೋಟಾರ್ ಸೈಕಲ್ ಹಾಗೂ ಆರೋಪಿಗಳನ್ನು ಪತ್ತೆ ಹಚ್ಚಲು ಜಿಲ್ಲಾ ಎಸ್,ಪಿ, ಜಯಪ್ರಕಾಶ, ಡಿ.ಎಸ್.ಪಿ. ಶಾಂತವೀರ, ಸಿಪಿಐ ಗುರುನಾಥ ಚವ್ಹಾಣ ಮಾರ್ಗದರ್ಶನದಲ್ಲಿ ಪಿಎಸ್ಐ ಬಸವರಾಜ ಕೊಣ್ಣೂರ ಅವರ ನೇತೃತ್ವದಲ್ಲಿ ಅಪರಾಧ ತನಿಖಾ ತಂಡವನ್ನು ರಚಿಸಲಾಗಿತ್ತು. ವಿಜಯಪೂರ ಜಿಲ್ಲೆಯ ಇಚಿಡಿ ತಾಲೂಕಿನ ಸಾತಲಗಾಂವ ಗ್ರಾಮದ ಆರೋಪಿ ಅನೀಲ ಶ್ರೀಮಂತ ವಡ್ಡಿ (23) ಇತನನು ಬಂಧಿಸಿ. ತನಿಖೆಗೆ ಒಳಪಡಿಸಿದಾಗ. ಕಳ್ಳತನ ಮಾಡಿರುವದನ್ನು ಒಪ್ಪಿಕೊಂಡಿದ್ದಾನೆಂದು ಡಿಎಸ್ಪಿ ಶಾಂತವೀರ ತಿಳಿಸಿದರು.
ಕಳೆದ ಒಂದು ವರ್ಷದಿಂದ ಜಿಲ್ಲೆಯ ಜಮಖಂಡಿ ಶಹರ, ಬೀಳಗಿ, ಸಾವಳಗಿ, ಬದಾಮಿ, ಬೆಳಗಾವಿ ಜಿಲ್ಲೆಯ ಅಥಣಿ ಮತ್ತು ವಿಜಯಪೂರ ಜಿಲ್ಲೆಯ ತಿಕೋಟಾ, ಬಬಲೇಶ್ವರ ಠಾಣೆಯ ವ್ಯಾಪ್ತಿಯಲ್ಲಿ ಒಟ್ಟು 14 ವಿವಿಧ ಕಂಪನಿಯ ಅಂದಾಜು 7 ಲಕ್ಷ ರೂ, ಮೌಲ್ಯದ ಮೋಟಾರ ಸೈಕಲ್ಗಳನ್ನು ಕಳ್ಳತನ ಮಾಡಿರುವದನ್ನು ಒಪ್ಪಿಕೊಂಡಿದ್ದು ಆರೋಪಿತನಿಗೆ ದಸ್ತಗೀರ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.
ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಪಿಎಸ್ಐ ಬಸವರಾಜ ಕೊಣ್ಣೂರೆ, ಎಎಸ್.ಐಗಳಾದ ಶೇಖರ ಘಾಟಗೆ, ಎಚ್.ಎಸ್.ಮಂಡಗಾರ, ಸಿಬ್ಬಂದಿಗಳಾದ ಎಚ್,ಜಿ,ಬಂಗಿ, ಎಸ್,ಬಿ,ಹನಗಂಡಿ, ಎಮ್.ಎಸ್.ನಿಂಗವ್ವಗೋಳ, ಜೆ ಸಿ ದಳವಾಯಿ, ಆರ್,ಕೆ,ಗಸ್ತಿ, ಬಿ,ಎಂ, ಜಂಬಗಿ ಕಾರ್ಯಾಚರಣೆಯಲ್ಲಿ ಇವರು ಭಾಗವಹಿಸಿದ್ದರು ಎಂದು ತಿಳಿಸಿದರು. ಇವರ ಕಾರ್ಯ ವೈಖರಿಯನ್ನು ಮೆಚ್ಚುಗೆ ವ್ಯಕ್ತ ಪಡಿಸಿ. ಅವರನ್ನು ಶ್ಲಾಂಘನಿಸಿ ಡಿ,ಎಸ್,ಪಿ ಶಾಂತವೀರ ಅವರು ನಗದು 10ಸಾವಿರ ರು, ಸೂಕ್ತ ಬಹುಮಾನವನ್ನು ನೀಡಿ. ಪ್ರೋತ್ಸಾಹಿಸಿದರು.