ಧಾರವಾಡ - ಹುಬ್ಬಳ್ಳಿ

ಅವಳಿ ನಗರದಲ್ಲಿನ ಸೈಬರ್ ಕ್ರೈಮ್ ತಡೆಗೆ ಅರವಿಂದ ಬೆಲ್ಲದ ಆಗ್ರಹ

ಅವಳಿ ನಗರದಲ್ಲಿನ ಸೈಬರ್ ಕ್ರೈಮ್ ತಡೆಗೆ ಅರವಿಂದ ಬೆಲ್ಲದ ಆಗ್ರಹ

ಧಾರವಾಡ ಹುಬ್ಬಳ್ಳಿ 13: ಧಾರವಾಡದಲ್ಲಿ ಅವಳಿ ನಗರದಲ್ಲಿನ ಸೈಬರ್ ಕ್ರೈಮ್‌ಗಳನ್ನು ತಡೆಯಬೇಕು ಎಂದು ವಿಧಾನಸಭೆಯ  ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಆಗ್ರಹಿಸಿದ್ದಾರೆ. 

ಈ ಕುರಿತು ಪ್ರಕಟಣೆ ನೀಡಿರುವ ಶಾಸಕ ಬೆಲ್ಲದ ಅವರು ಹುಬ್ಬಳ್ಳಿ-ಧಾರವಾಡದ ಅವಳಿ ನಗರದಲ್ಲಿ ದಿನೇ ದಿನೇ ಸೈಬರ್ ಕ್ರೈಮ್ ಸಂಖ್ಯೆ ಜಾಸ್ತಿಯಾಗುತ್ತಿದೆ. ಪ್ರತಿನಿತ್ಯ ಸುಮಾರು 11 ಲಕ್ಷ ರೂಪಾಯಿಯಷ್ಟು ಹಣವನ್ನು ಈ ಸೈಬರ್ ಕ್ರೈಮ್ ನಿಂದ ಜನರು ಕಳೆದುಕೊಳ್ಳುತ್ತಿರುವುದು ಆಘಾತಕಾರಿ ವಿಷಯ.  

ವಿಪರ್ಯಾಸ ಏನಂದ್ರೆ, ನಮ್ಮ ಭಾಗದಲ್ಲಿ ಇಂತಹ ಸ್ಕಾ-್ಯಮ್ ಗಳ ವಿರುದ್ಧ ದೂರು ನೀಡಲು ಕರೆ ಮಾಡಿದಾಗ ಉತ್ತರಿಸುವ ಸಹಾಯವಾಣಿಗಳು ಚಾಲ್ತಿಯಲ್ಲಿಲ್ಲ. ಹಾಗಾಗಿ ಪೋಲೀಸ್ ಇಲಾಖೆ ಕೂಡಲೇ 1903 ಹೊರತಾಗಿ, ಹುಬ್ಬಳ್ಳಿ- ಧಾರವಾಡಕ್ಕೆ ಒಂದು ನಿರ್ದಿಷ್ಟ ನಂಬರ್ ಅಥವಾ ಸಹಾಯವಾಣಿಯನ್ನು ಮೀಸಲಿರಿಸಬೇಕು. ಆನ್ಲೈನ್ ಸ್ಕಾ-್ಯಮ್ ಬಗ್ಗೆ ಜನಜಾಗೃತಿ ಮೂಡಿಸಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಒತ್ತಾಯಿಸಿದ್ದಾರೆ. 

ಇತ್ತ ನಾಗರಿಕರೂ ಕೂಡ ಎಚ್ಚರಿಕೆ ವಹಿಸಬೇಕು. ಈ ಕುರಿತು ತಾವೂ ಕೂಡ ಈಗಾಗಲೇ ಪೋಲೀಸ್ ಆಯುಕ್ತರೊಂದಿಗೆ ಚರ್ಚಿಸಿದ್ದು, ಶೀಘ್ರವೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿರುವೆ. ಈ ವಿಷಯದಲ್ಲಿ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಸಚಿವರ ಬೆಂಬಲ ನಮಗೆ ಅವಶ್ಯಕವಾಗಿದೆ ಎಂದಿದ್ದಾರೆ. 


ಸುದ್ದಿ ಓದಿ