ಬಳ್ಳಾರಿ

ಜಯತೀರ್ಥರ ಆರಾಧನೆ ಮಹೋತ್ಸವ: ವಿಶೇಷ ಪೂಜೆ

ಜಯತೀರ್ಥರ ಆರಾಧನೆ ಮಹೋತ್ಸವ: ವಿಶೇಷ ಪೂಜೆ

ಬಳ್ಳಾರಿ09: ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಶ್ರೀಮದುತ್ತರಾಧಿಮಠದಲ್ಲಿ ಶುಕ್ರವಾರ ಜಯತೀರ್ಥರ ಆರಾಧನೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. 

ಶ್ರೀಮಠದಲ್ಲಿ ಬೆಳಿಗ್ಗೆ ವಿಶೇಷ ಪೂಜೆ, ಪಂಚಾಮೃತಾಬಿಷೇಕ, ವಿಶೇಷ ಅಲಂಕಾರ, ಮಹಾನೈವೇದ್ಯ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ಶ್ರೀಮಠದ ಪಂ.ನವೀನ್ ಆಚಾರ್, ಪಂ.ಪ್ರವೀಣ್ ಆಚಾರ್ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆದವು. ಇದಕ್ಕೂ ಮುನ್ನ ಹನುಮಸಾಗರದ ಪಂ.ಪ್ರಮೋದಾಚಾರ್ ಪುಜಾರ್ ಅವರಿಂದ ಉಪನ್ಯಾಸ ನಡೆಯಿತು. ಹಂಸನಾಮಕ ಭಗವಂತನಿಂದ ಸ್ಥಾಪಿತವಾದ ಜಗದ್ಗುರು ಶ್ರೀಮನ್ಮದ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾಧಿಮಠಾಧೀಶರಾದ, ಭಕ್ತರ ಅಭೀಕ್ಷೆಯನ್ನು ನಿರಂತರದಲ್ಲಿಯೂ  ಪೂರೈಸುವ, ಕಲ್ಪವೃಕ್ಷ, ಕಾಮಧೇನು, ಚಿಂತಾಮಣಿಯಂದು ವಿಖ್ಯಾತರಾಗಿರುವ  ಇಂದ್ರಾಂಶ ಸಂಭೂತರಾದ ಶೇಷದೇವರ ಆವೇಶವಿರುವ ದುರ್ಗಾದೇವಿಯ ವಿಶೇಷ ಅನುಗ್ರಹವಿರುವ ಟೀಕಾಕೃತ್ಪಾದರು ಎಂದು ಪ್ರಸಿದ್ಧಿಯಾಗಿರುವ ಜಯತೀರ್ಥರ ಆರಾಧನಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ಪ್ರತಿಯೊಬ್ಬರೂ ಗುರುಗಳನ್ನು ಸ್ಮರಿಸಿದರೇ ಆವರಿಸುವ ಸಕಲ ಕಷ್ಟಗಳು ನಿವಾರಣೆಯಾಗಲಿವೆ ಎಂದರು. 

ನಗರ ಸೇರಿದಂತೆ ನಾನಾ ಕಡೆಯಿಂದ ನೂರಾರು ಭಕ್ತರು ಶ್ರೀಮಠಕ್ಕೆ ಆಗಮಿಸಿ ಟೀಕಾರಾಯರ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿ ಭಕ್ತಿ ಸಮರ್ಪಿಸಿದರು. ನಂತರ ಭಕ್ತರಿಗೆ ತೀರ್ಥ ಪ್ರಸಾದ ಕಲ್ಪಿಸಲಾಗಿತ್ತು 

ಸುದ್ದಿ ಓದಿ