ಅಪ್ಪು ಸಮಾಜಮುಖಿ ಕಾರ್ಯಗಳು ಪ್ರತಿಯೊಬ್ಬರಿಗೂ ಪ್ರೇರಣೆ ; ಶಾಸಕ ಭೀಮಾನಾಯ್ಕ್ ಅಭಿಮತ: ಪುನೀತ್ ರಾಜ್ ಕುಮಾರರವರ 8 ಅಡಿ ಪುತ್ಥಳಿ ಅನಾವರಣ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 19: ಅಪ್ಪು ಕೇವಲ ಕನ್ನಡ ಚಿತ್ರ ರಂಗಕ್ಕಷ್ಟೇ ಸೀಮಿತವಾಗಿರದೇ ಸಮಾಜ ಮುಖಿ ಕಾರ್ಯಗಳನ್ನು ಮಾಡಿ ಬಡ, ನಿಸ್ಸಾಹಯಕರ ಪಾಲಿಗೆ ಅಕ್ಷಯಪಾತ್ರೆಯಾಗಿದ್ದರು, ಅವರು ನಡೆದ ದಾರಿ ನಮಗೆಲ್ಲ ಆದರ್ಶವಾಗಿದೆ. ಡಾ.ರಾಜ್ ಕುಟುಂಬದ ಅಭಿಮಾನಿಯಾಗಿ ಪುನೀತ್ ರಾಜ್ಕುಮಾರ್ ರವರ 08 ಅಡಿ ಎತ್ತರದ ಪುತ್ಥಳಿ ಅನಾವರಣ ಮಾಡಿದ್ದೆನೆ ಇದರಲ್ಲಿ ರಾಜಕೀಯ ಬೇರೆಕೆ ಇಲ್ಲ ಎಂದು ಶಾಸಕ ಎಸ್. ಬೀಮಾನಾಯ್ಕ್ ಹೇಳಿದರು.
ಪಟ್ಟಣದ ತಾಲೂಕು ಕಛೇರಿಯ ಜೋಡು ಸೇತುವೆ ಬಳಿ ಕರುನಾಡಿನ ಹೆಮ್ಮೆಯ ನಟ ಕರ್ನಾಟಕ ರತ್ನ ದಿ. ಪುನೀತ್ ರಾಜ್ಕುಮಾರ್ ಅವರ ಜನ್ಮ ದಿನದ ನಿಮಿತ್ತ ಅವರ ಪುತ್ಥಳಿ ಉದ್ಘಾಟನೆ ಮಾಡಿ ಮಾತನಾಡಿ ಕರುನಾಡು ಎಂದೆಂದೂ ಮರೆಯದ ಮಾಣಿಕ್ಯ, ಕನ್ನಡ ಚಿತ್ರ ರಂಗದ ಹೆಮ್ಮೆಯ ನಟ, ಕೊಡುಗೈ ದಾನಿ ಅಪ್ಪು ನಮ್ಮನ್ನಗಲಿ ಒಂದೂವರೆ ವರ್ಷವಾಗಿದೆ, ಆದರೆ ಅವರ ಆದರ್ಶಗಳು ಇಂದಿಗೂ ಪ್ರತಿಯೊಬ್ಬರಿಗೂ ಪ್ರೇರಣೆ ಹಾಗೂ ಅನುಕರಣೆ ಮಾಡುವಂತಹ ಕೆಲಸಗಳಾಗಿವೆ. ಅವರು ಮಾಡಿರುವ ಸಮಾಜಮುಖಿ ಕಾರ್ಯಗಳು ಎಲ್ಲಿಯೂ ಮುಖ್ಯ ವಾಹಿನಿಗೆ ಬಾರದೇ ಇರುವುದು ನೋಡಿದರೆ ಅವರ ಸರಳ ಹಾಗೂ ಸಜ್ಜನಿಕೆ ಎಷ್ಟಿದೆಯಂದು ತಿಳಿಯಬಹುದು. ಪ್ರಸ್ತುತ ದಿನಗಳಲ್ಲಿ ಸಣ್ಣ ಸಹಾಯ ಮಾಡಿದರೆ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವ ಪ್ರಸ್ತುತ ದಿನಗಳಲ್ಲಿ ತಮ್ಮ ಸಂಭಾವನೆಯ ಅರ್ದದಷ್ಟು ದಾನ ನೀಡಿದ ಮಹಾನ್ ವ್ಯಕ್ತಿಯಾಗಿದ್ದರು. ಇಂತಹ ಮಹಾನ್ ವ್ಯಕ್ತಿಯ ಪುತ್ಥಳಿ ಅನಾವರಣ ಮಾಡುಡತ್ತಿರುವುದು ನಿಜಕ್ಕೂ ನನ್ನ ಪುಣ್ಯವಾಗಿದೆ. ಹಾಗೂ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಮಹಾತ್ಮಾ ಗಾಂಧಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ವಾಲ್ಮೀಕಿ ಮಹರ್ಷಿ ರವರ ಪುತ್ಥಳಿ ನಿರ್ಮಾಣಕ್ಕೆ 50 ಲಕ್ಷ ಅನುದಾನವನ್ನು ನೀಡಲಾಗಿದೆ, ಮುಂದಿನ ದಿನಗಳಲ್ಲಿ ಕ್ಷೇತ್ರದ ಕೊಟ್ಟೂರು ಹಾಗೂ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಅಪ್ಪುವಿನ 8 ಅಡಿಯ ಪುತ್ಥಳಿಯನ್ನು ನಿರ್ಮಿಸುವ ಭರವಸೆ ನೀಡಿದರು.
ಅಪ್ಪು ಜನ್ಮ ದಿನದ ನಿಮಿತ್ತ ಅಶೋಕ ಭಿಮಾನಾಯ್ಕ್ ಅಭಿಮಾನಿ ಬಳಗದ ವತಿಯಿಂದ ತಾಲೂಕು ಕಛೇರಿ ಬಳಿ ಸ್ವಾಮಿ ವಿವೇಕಾನಂದ ರಕ್ತ ಬಂಢಾರ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಏರಿ್ಡಸಲಾಗಿತ್ತು. 110 ಜನ ರಕ್ತದಾನ ಮಾಡಿದರು.
ಸಮಾಜ ಸೇವಕ, ಯುವ ನಾಯಕ ಅಶೋಕ ಭೀಮಾನಾಯ್ಕ್, ಪುರಸಭೆ ಸದಸ್ಯ ಮರಿರಾಮಪ್ಪ,ಮಾಜಿ ಸದಸ್ಯ ಅಲ್ಲಭಕ್ಷಿ, ಮುಖಂಡ ದೇವೇಂದ್ರ್ಪ, ಕೋರಿ ಗೋಣಿ ಬಸಪ್ಪ, ಕೊಟ್ಟೂರು ದ್ವಾರಕೀಶ್, ಸೆರೆಗಾರ ಹುಚ್ಚಪ್ಪ ಹಾಗೂ ಅಪ್ಪು ಅಭಿಮಾನಿಗಳು ಇದ್ದರು.