ಕಾಗವಾಡ

ಸಂಚಾರಿ ಪಶುಸಂಗೋಪನ ವಾಹನ ನೀಡಲು ಒಪ್ಪಿಗೆ

ಸಂಚಾರಿ ಪಶುಸಂಗೋಪನ ವಾಹನ ನೀಡಲು ಒಪ್ಪಿಗೆ

ಕಾಗವಾಡ 21: ಮತ ಕ್ಷೇತ್ರದಲ್ಲಿ ಸಂಚಾರಿ ಪಶುಸಂಗೋಪನ ವಾಹನ ನೀಡಬೇಕೆಂದು ಕ್ಷೇತ್ರ ಶಾಸಕ ಶ್ರೀಮಂತ ಪಾಟೀಲರು ವಿಧಾನಸಭೆಯಲ್ಲಿ ಪಶುಸಂಗೋಪನಾ ಸಚಿವ ಪ್ರಭೂ ಚವಾಣ ಇವರಿಗೆ ಮನವಿ ಮಾಡಿಕೊಂಡಿದ್ದರಿಂದ ಸಚಿವರು ವಾಹನ ನೀಡುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ. 

ಸೋಮವಾರದಂದು ವಿಧಾನಸಭೆಯಲ್ಲಿ ಕಾಗವಾಡ ಕ್ಷೇತ್ರ ಶಾಸಕ ಶ್ರೀಮಂತ ಪಾಟೀಲ್ ಇವರು ಕಾಗವಾಡ ಕ್ಷೇತ್ರದಲ್ಲಿ ಹೈನುಗಾರಿಕೆ ಹೆಚ್ಚಿನ ಪ್ರಮಾಣದಲ್ಲಿ ಇದೆ. ಜಾನವಾರಗಳಿಗೆ ಉಪಚರಿಸಲು  ವೈದ್ಯರ ಕೊರತೆ ಇದೆ. ಸಂಚಾರಿ ಪಶುಸಂಗೋಪನಾ ವಾಹನ ನೀಡಬೇಕೆಂದು ಕೇಳಿಕೊಂಡಿದ್ದರು. ಇಲ್ಲಿಯ ಸಮಸ್ಯೆಗಳನ್ನು ಆಲಿಸಿ ವಾಹನ ನೀಡುವುದಾಗಿ  ಸಚಿವರು ಒಪ್ಪಿಕೊಂಡಿದ್ದಾರೆ ಎಂದು ಇಲಾಖೆ ವತಿಯಿಂದ ಮಾಹಿತಿ ನೀಡಿದರು. 


ಸುದ್ದಿ ಓದಿ