ಸಚಿವ ಅಶ್ವಥನಾರಾಯಣ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು: ಆಜೂರ
ಶಿಗ್ಗಾವಿ 20: ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥನಾರಾಯಣ ಇವರ ಮೇಲೆ ಕಾನೂನು ಕ್ರಮ ಕೈಗೊಂಡು ಸಚಿವ ಸಂಪುಟದಿಂದ ವಜಾಗೋಳಿಸಬೇಕು ಎಂದು ತಾಲೂಕ ಬ್ಲಾಕ್ ಕಾಂಗ್ರೇಸ ಅಧ್ಯಕ್ಷ ಶಂಭುಲಿಂಗಪ್ಪ ಆಜೂರ ನೇತೃತ್ವದಲ್ಲಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ಶಂಭುಲಿಂಗಪ್ಪ ಆಜೂರ ವಿರೋಧ ಪಕ್ಷದ ನಾಯಕರು ಹಾಗೂ ನಮ್ಮ ನಾಯಕರಾದ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಪತ್ರಿಕಾ ಹೇಳಿಕೆ ನೀಡಿರುವ ಸಚಿವ ಅಶ್ವಥನಾರಾಯಣ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗೌರವ ಸಲ್ಲಿಸಿದಂತಾಗುತ್ತದೆ ಅಲ್ಲದೇ ಅಶಾಂತಿ ಉಂಟಾಗಿ ನಾಡಿನ ಪ್ರಜೆಗಳ ನೆಮ್ಮದಿಯ ಜೀವನಕ್ಕೆ ಭಂಗ ತಂದಂತಾಗುತ್ತದೆ ಅವರ ಈ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಎಂ.ಜೆ.ಮುಲ್ಲಾ, ಅತ್ತಾವುಲ್ಲಾ ಖಾಜೇಖಾನವರ, ಬಾಬಾರ ಬಾವೋಜಿ, ನಿಸಾರಹ್ಮದ ತೋಕಲ್ಲಿ, ಗದಿಗೆಪ್ಪ ಬಳ್ಳಾರಿ, ವಿ.ವಿ.ಪಾಟೀಲ, ಸುಭಾಸ ಮಜ್ಜಗಿ, ರುದ್ರೇಶ ಗುಡಗೇರಿ, ಮಲ್ಲಿಕಾರ್ಜುನ ಈಳಗೇರ, ಬಸವರಾಜ ರಾಗಿ, ಮಲ್ಲೇಶ ಹರಿಜನ, ಬಂಕಪ್ಪ ಬಾರಿಗಿಡದ, ಪೀರಸಾಬ ನಧಾಪ, ಸದ್ದಾಮಹುಸೇನ ದಿವಾನವರ, ಎಂ.ಎಂ.ದೊಡ್ಡಮನಿ, ಬೀರ್ಪ ಸಣ್ಣತಮ್ಮಣ್ಣವರ, ಮಹೇಶ ಪುಕಾಳೆ, ರವಿ ಕರಿಗಾರ, ಮಹ್ಮದಯೂಕುಬ್ ಚಾಂದಬಾಯಿ ಸೇರಿದಂತೆ ಇತರರು ಇದ್ದರು.