ಜಮಖಂಡಿ

ವಿದ್ಯುತ್ ತಂತಿ ತಗುಲಿ ನರಳಾಡುತ್ತಿದ್ದ ಮಂಗನ ರಕ್ಷಣೆ

ವಿದ್ಯುತ್ ತಂತಿ ತಗುಲಿ ನರಳಾಡುತ್ತಿದ್ದ ಮಂಗನ ರಕ್ಷಣೆ

ಮಾನವೀಯತೆ ಮೆರೆದ ಪತ್ರಕರ್ತರ ಕಾರ್ಯಕ್ಕೆ ಶ್ಲಾಘನೆ 

ಜಮಖಂಡಿ 14: ವಿದ್ಯುತ್ ಕಂಬದ ತಂತಿ ಮಂಗನಿಗೆ ತಗುಲಿದ ಪರಿಣಾಮ ಕಾಲುಗಳ ಸ್ವಾಧೀನ ಕಳೆದುಕೊಂಡ ನರಳಾಡುತ್ತಿರುವದನ್ನು ಕಂಡ ಪತ್ರಕರ್ತರು ಚಿಕಿತ್ಸೆ ಕೊಡಿಸಿ ಮಾನವೀಯತೆಯನ್ನು ಮೆರೆದಿದ್ದಾರೆ. 

ನಗರದ ಹುನ್ನೂರ ರಸ್ತೆಯ ಜಿಎಲ್‌ಬಿಸಿ ಹತ್ತಿರದಲ್ಲಿ ಇರುವ ಗಿಡಮರಗಳಲ್ಲಿ ಮಂಗಗಳು ಆಟವಾಡುವ ಸಮಯದಲ್ಲಿ ಕಾಲು ಜಾರಿ ವಿದ್ಯುತ್ ಕಂಬದ ತಂತಿ ತಗುಲಿ ಸಾವು, ಬದುಕಿನ ಮಧ್ಯ ಹೋರಾಟ ಮಾಡುವ ಸಂದರ್ಭದಲ್ಲಿ ನಾಲ್ಕು ಕಾಲುಗಳ ಸ್ವಾಧೀನವನ್ನು ಕಳೆದುಕೊಂಡು ಕೆಳಗೆ ಬಿದ್ದು ನರಳಾಡುವದನ್ನು ಕಂಡ ಪತ್ರಕರ್ತ ಶಶಿಕಾಂತ ತೇರದಾಳ, ಅಪ್ಪು ಪೋತರಾಜ, ರವಿ ಶಿಂಗೆ ಸೇರಿಕೊಂಡು ಅದನ್ನು ರಕ್ಷಣೆ ಮಾಡಿ ಮಾನವೀಯತೆಯನ್ನು ಮೆರೆದಿದ್ದಾರೆ. 

ಸರಕಾರಿ ಪಶು ಇಲಾಖೆಯ ಸಿಬ್ಬಂದಿಗಳ ಸಹಾಯದಿಂದ ಕಾಲುಗಳ ಸ್ವಾಧೀನ ಕಳೆದುಕೊಂಡ ಮಂಗನಿಗೆ ಚುಚ್ಚುಮದ್ದು ಕೊಡಿಸಿ ಹಾಗೂ ಮುಖಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದು ರಕ್ತ ಸ್ರಾವಕ್ಕೆ ಮುಲಾಮು ನೀಡಲಾಯಿತು. ನಂತರ ಮಂಗವು ಚೇತರಿಸಿಕೊಂಡ ಬಳಿಕ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮಂಗವನ್ನು ಸುರಕ್ಷಿತ ಸ್ಥಳಕ್ಕೆ ರಕ್ಷಣೆ ಮಾಡಿ ಬಿಡಲು ಒಪ್ಪಿಸಿದ್ದರು. 

ಪೋಲಿಸ್ ಪೇದೆ ಒಣ್ಣಜೋಳ ಹಾಗೂ ಪಶು ಇಲಾಖೆಯ ಸಿಬ್ಬಂದಿಗಳು, ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಸಹ ಮಂಗನ ರಕ್ಷಣೆಗೆ ಕೈ ಜೋಡಿಸಿದ್ದಾರೆ. ಅಂತು ಇಂತು ಸಾವು ಬದುಕಿನ ಮಧ್ಯ ಹೋರಾಟ ನಡೆಸಿದ ಮಂಗನನ್ನು ರಕ್ಷಣೆ ಮಾಡಿದ ಪತ್ರಕರ್ತರು ಮಾನವೀಯತೆಯನ್ನು ಮೆರದಿದ್ದಾರೆ. 


ಸುದ್ದಿ ಓದಿ