ನೂತನ ಅಧ್ಯಕ್ಷರಾಗಿ ಮಹೇಶ ಅಡಿವಪ್ಪನವರ ನೇಮಕ
ರಾಣೇಬೆನ್ನೂರ29: ಕನರ್ಾಟಕದಲ್ಲಿರುವ ಸರ್ಕಾರ ಅಸ್ತಿತ್ವಕ್ಕೆ ಬರಲು ಪಕ್ಷೇತರ ಶಾಸಕನಾಗಿದ್ದ ನಾನು ಎಲ್ಲ ಹಂತದಲ್ಲೂ ಬೆಂಬಲ ನೀಡಿದ್ದು, ಸರ್ಕಾರ ಬಂದ ನಂತರ ಪಕ್ಷ ಮತ್ತು ಸರ್ಕಾರ ನನಗೆ ಬಹಳಷ್ಟು ಅನ್ಯಾಯ ಮಾಡಿದ್ದು, ಮುಂದೆ ಸಚಿವ ಸಂಪುಟ ವಿಸ್ತರಣೆಯಾದರೆ ನನಗೂ ಸಹ ಸಚಿವ ಸ್ಥಾನ ನೀಡುವುದರ ಮೂಲಕ ಪ್ರಥಮ ಆದ್ಯತೆ ನೀಡಬೇಕು ಎಂದು ಮಾಜಿ ಸಚಿವ ಹಾಗೂ ವಿಪ ಸದಸ್ಯ ಆರ್. ಶಂಕರ್ ಹೇಳಿದರು
ಬುಧವಾರದಂದು ಇಲ್ಲಿನ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಹೇಶ (ರಾಜು) ಅಡಿವಪ್ಪನವರ ಇವರನ್ನು ಅಭಿನಂದಿಸಿ ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಆಡಳಿತರೂಢ ಸರ್ಕಾರಕ್ಕೆ ಮತ್ತು ಬಿಜೆಪಿ ಪಕ್ಷಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿದ್ದರೂ ನನ್ನನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡುವ ಮುನ್ನಾರ ನಡೆದಿರುವುದು ವಿಷಾಧಕರ ಸಂಗತಿಯಾಗಿದೆ. ಸಚಿವ ಸಂಪುಟ ವಿಸ್ತರಣೆಯಾದರೆ ರಮೇಶ ಜಾರಕಿಹೊಳಿ ಮತ್ತು ಕೆ ಎಸ್ ಈಶ್ವರಪ್ಪನವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಮುನ್ನ ಮೊದಲ ಆದ್ಯತೆ ನೀಡಿ ನನಗೆ ಸಚಿವ ಸ್ಥಾನ ನೀಡಬೇಕೆಂದು ಶಂಕರ ಒತ್ತಾಯಿಸಿದರು.
ಸರ್ಕಾರ ಮತ್ತು ಪಕ್ಷದ ಮೇಲೆ ನನಗೆ ಈಗಲೂ ನಂಬಿಕೆ ಇದೆ, ನನಗಾದ ಸ್ಥಾನಮಾನದ ಅನ್ಯಾಯವನ್ನು ಸರಿಪಡಿಸಿ ನನಗೆ ಸಚಿವ ಸ್ಥಾನ ನೀಡಬೇಕು, ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಸಮಯ ಬಂದಾಗ ಎಲ್ಲದರ ಬಗ್ಗೆ ಎಲ್ಲಾ ರಹಸ್ಯವನ್ನು ಬಿಚ್ಚಿಡುತ್ತೇನೆ ಎಂದು ಆಕ್ರೋಶಗೊಂಡರು.
ನನ್ನನ್ನು ಹಾಗೂ ನನ್ನ ಅಭಿಮಾನಿಗಳನ್ನು, ಕಾರ್ಯಕರ್ತರನ್ನು ಸ್ಥಳೀಯ ಶಾಸಕರು ಕಡೆಗಣಿಸಿದ್ದು ನಮ್ಮೆಲ್ಲರನ್ನು ವ್ಯವಸ್ಥಿತವಾಗಿ ದೂರವಿಡುವುದರ ಮೂಲಕ ಮೂಲೆಗುಂಪು ಮಾಡುವ ಹುನ್ನಾರವನ್ನು ಮಾಡುತ್ತಿರುವುದು ಕೇಳಿ ಬರುತ್ತಿದ್ದು, ಅದೆಲ್ಲವನ್ನು ತಾಳ್ಮೆಯಿಂದ ಸಹಿಸಿಕೊಂಡಿರುವೆ. ಇದು ಹಿಗೆಯೇ ಮುಂದುವರೆದರೆ ಅವರಿಗೆ ಕಾಲವೇ ಉತ್ತರಿಸಲಿದೆ . ನಾನು ಹಣಕ್ಕಾಗಿ ರಾಜಕೀಯ ಮಾಡುತ್ತಿದ್ದೇನೆ, ದುಡ್ಡು ಮಾಡಿದ್ದೇನೆ ಎಂದು ಆರೋಪಿಸುವವರು ಸಾಕ್ಷ ಸಮೇತ ಸಾಭೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಭಾವುಕರಾಗಿ ಶಂಕರ ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪಧರ್ಿಸುವುದು ಖಚಿತ ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇರುವುದಿಲ್ಲ , ಪಕ್ಷ ಇಲ್ಲವೇ ಪಕ್ಷೇತರವಾದರೂ ಸ್ಪರ್ಧೆ ಮಾಡುವುದು ಶತಸಿದ್ಧ ಎಂದವರು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಕ್ಷೇತ್ರದ ಸವರ್ಾಂಗೀಣ ಅಭಿವೃದ್ಧಿಗೆ ಸಚಿವನಾಗಿದ್ದಾಗ ಹಾಗೂ ಶಾಸಕರಾಗಿದ್ದಾಗ ಹೆಚ್ಚಿನ ಅನುದಾನ ತರುವುದರ ಮೂಲಕ ಅಭಿವೃದ್ಧಿ ಮಾಡಿರುವೆ, ಮುಂದೆಯೂ ಸಹ ಅಭಿವೃದ್ಧಿಗೆ ಆದ್ಯತೆ ನೀಡುವುದರ ಮೂಲಕ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ಅನಿವಾರ್ಯ ಎಂದವರು ಹೇಳಿದರು. ಪ್ರಾಧಿಕಾರದ ನೂತನ ಅಧ್ಯಕ್ಷ ಮಹೇಶ್ ಆಡೆವೆಪ್ಪನವರ ಮಾತನಾಡಿ ಇಂದು ನಾನು ಸ್ವೀಕರಿಸಿದ ಅಧಿಕಾರ ಶಂಕರ್ ಅವರು ನೀಡಿದ ಕೊಡುಗೆಯಾಗಿದೆ , ಪಕ್ಷ ಮತ್ತು ಸಕರ್ಾರವು ಅವರಿಗೆ ಅನ್ಯಾಯ ಮಾಡಿದ್ದು ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಶಂಕರ್ ಅವರನ್ನು ಸಚಿವರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ನಗರಸಭೆ ಅಧ್ಯಕ್ಷ ರೂಪಾ ರಾಘವೇಂದ್ರ ಚಿನ್ನಿಕಟ್ಟೆ, ಕೆ. ಶಿವಲಿಂಗಪ್ಪ, ಭಾರತಿ ಜಂಬಿಗಿ, ಧನಲಕ್ಷ್ಮಿ ಶಂಕರ, ಕೃಷ್ಣಮೂತರ್ಿ ಸುಣಗಾರ, ರತ್ನಾಕರ ಕುಂದಾಪುರ , ರತ್ನಮ್ಮ ಅಡಿವಪ್ಪನವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು