ನೂತನ ಅಧ್ಯಕ್ಷ ವಿದ್ಯಾ ವಂಟಮುರಿ ನೇಮಕ
ಧಾರವಾಡ 15: ಕನ್ನಡ ಸಾಹಿತ್ಯ ಪರಿಷತ್ ಹುಬ್ಬಳ್ಳಿ ನಗರ ಘಟಕದ ನೂತನ ಅಧ್ಯಕ್ಷರಾಗಿ ವಿದ್ಯಾ ವಂಟಮುರಿ ಅವರನ್ನು ನೇಮಕ ಮಾಡಿರುವುದಾಗಿ ಕಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ ತಿಳಿಸಿದರು. ನಗರದ ಕಸಾಪ ಜಿಲ್ಲಾ ಕಚೇರಿಯಲ್ಲಿ ಭಾನುವಾರ ವಿದ್ಯಾ ಒಂಟಮೋರಿ ಅವರಿಗೆ ನೇಮಕಾತಿ ಪತ್ರ ವಿತರಿಸಿದ ಅವರು, ಕಸಾಪ ನಿಯಮಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಸಲಹೆ ನೀಡಿದರು. ಅಲ್ಲದೇ, ನಗರ ಘಟಕದ ಅಧ್ಯಕ್ಷರ ಅವಧಿ ಒಂದು ವರ್ಷ. ಕನ್ನಡ ನಾಡು, ನುಡಿ ಅಭಿವೃದ್ಧಿ, ಸಾಹಿತ್ಯ, ಸಂಸ್ಕೃತಿ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸರ್ವರನ್ನು ಒಗ್ಗೂಡಿಸಿಕೊಂಡ ಕೆಲಸ ಮಾಡಲು ಹೇಳಿದರು.
ನೇಮಕಾತಿ ಪತ್ರ ಸ್ವೀಕರಿಸಿದ ವಿದ್ಯಾ ಒಂಟಿಮೋರಿ, ಹುಬ್ಬಳ್ಳಿ ನಗರ ಘಟಕ ಅಧ್ಯಕ್ಷಗಿರಿ ಆಕಸ್ಮಿಕವಾಗಿ ಒಲಿದಿದೆ. ನನ್ನ ಸೇವೆ ಗುರುತಿಸಿ, ಜವಾಬ್ದಾರಿ ನೀಡಿರುವ ಜಿಲ್ಲಾಧ್ಯಕ್ಷಗರಿಗೆ ಕೃತಜ್ಞೆ ಸಲ್ಲಿಸಿದರು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಜಿಲ್ಲಾಧ್ಯಕ್ಷರ ಮಾರ್ಗದರ್ಶನದಲ್ಲಿ ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆ ಶ್ರಮಿಸಲು ಹುಬ್ಬಳ್ಳಿ ಕಸಾಪದ ಸರ್ವರ ಸಹಕಾರವೂ ಕೋರಿದರು. ಇದೇ ಸಂದರ್ಭದಲ್ಲಿ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಜನ್ಮದಿನ ಪ್ರಯುಕ್ತ ವಿಶ್ವೇಶ್ವರಯ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವಿಸಲಾಯಿತು. ಎಸ್.ಎಸ್.ದೊಡಮನಿ, ಮಹಾಂತೇಶ ನರೇಗಲ್ಲ, ವೆಂಕಟೇಶ ಮರೆಗುದ್ದಿ, ಪ್ರಮೀಳಾ ಜಕ್ಕಣ್ಣವರ, ಗಿರಿಜಾ ಚಿಕ್ಕಮಠ, ಸಂಧ್ಯಾ ದೀಕ್ಷಿತ್, ಜಯಪ್ರಕಾಶ ಟೆಂಗಿನಕಾಯಿ, ಎಸ್.ಕೆ.ಆದಪನವರ ಸಿದ್ದಮ್ಮ ಅಡಿವೆಣ್ಣವರ ಇದ್ದರು.