ಚಳಿಗಾಲ ಅಧಿವೇಶನಕ್ಕೂ ಮೊದಲೆ ಸಹಾಯಕರನ್ನು ಕಾಯಂಗೊಳಿಸಿ
ಯರಗಟ್ಟಿ 02: ಪಟ್ಟಣದ ಶ್ರೀಮಠದಲ್ಲಿ ಗ್ರಾಮ ಸಹಾಯಕರನ್ನು ಕಾಯಂಗೊಳಿಸಬೇಕೆಂದು ಕರ್ನಾಟಕ ರಾಜ್ಯ ಗ್ರಾಮ ಸಹಾಯಕ ಸಮನ್ವಯ ಸಂಘ ಆಗ್ರಹಿಸಿದೆ. ಸಮನ್ವಯ ಸಂಘದ ರಾಜ್ಯಾಧ್ಯಕ್ಷ ಮಡಿವಾಳಪ್ಪ ವನ್ನೂರು, ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಹಕ್ಕೊತ್ತಾಯ ಮಾಡಿದರು.
ರಾಜ್ಯದಾದ್ಯಂತ ಗ್ರಾಮ ಸಹಾಯಕರು ಸರ್ಕಾರದ ವಿವಿಧ ಯೋಜನೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೃಷಿ, ತೋಟಗಾರಿಕೆ, ಪಶು ಸಂಗೋಪನಾ ಇಲಾಖೆ, ನೀರಾವರಿ, ಮುಜರಾಯಿ ಇಲಾಖೆಗಳಲ್ಲಿ ಒಪ್ಪಿಸಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಬರುವ ಚಳಿಗಾಲ ಅಧಿವೇಶನಕ್ಕೂ ಮೊದಲೆ ಸರ್ಕಾರ ತನ್ನ ನಿರ್ಧಾರ ಬದಲಿಸಿ, ಗ್ರಾಮ ಸಹಾಯಕರ ಹುದ್ದೆ ಕಾಯಂಗೊಳಿಸಿ, ಸೇವಾ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ಮಹಾದೇವಪ್ಪ ಇಂಗಳಗಿ, ಉಪಾಧ್ಯಕ್ಷ ಶೌಕತ್ಅಲಿ ಸನದಿ, ಸುನೀಲ ಕೋಳಕಾರ, ಯಮನಪ್ಪ ಸನದಿ, ಮಲ್ಲಿಕಾರ್ಜುನ ನರಗುಂದ, ಪ್ರಕಾಶ ತಳವಾರ, ಸಂತೋಷ ಕೋತ್, ಭೀಮಶಿ ಸೋರಗಾವಿ, ಎಮ್. ಆರ್. ಪಾಟೀಲ, ಅಬ್ದುಲ್ ಸತಾರ, ಮಲ್ಲಿಕಾರ್ಜುನ ಸನದಿ ಸೇರಿದಂತೆ ಕರ್ನಾಟಕ ರಾಜ್ಯ ಗ್ರಾಮ ಸಹಾಯಕ ಸಮನ್ವಯ ಸಂಘ ಇತರರಿದ್ದರು.