ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ರಾಣಿಬೆನ್ನೂರ 03: ತಾಲೂಕಾ ಕುರುಬ ನೌಕರರ ಸಂಘದ ವತಿಯಿಂದ 537 ನೇ ಭಕ್ತ ಶ್ರೇಷ್ಠ ಕನಕದಾಸರ ಜಯಂತ್ಯೋತ್ಸವದ ಅಂಗವಾಗಿ ಅ.27 ರಂದು ಶ್ರೀ ಬೀರೇಶ್ವರ ಹೊರಗುಡಿ ಆವರಣದಲ್ಲಿ ನಡೆಯುವ ತಾಲ್ಲೂಕಾ ಮಟ್ಟದ ಕುರಬ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
2024ರ ಮಾರ್ಚ, ಎಪ್ರೀಲ್, ಮೇ, ಜೂನ್ ಮತ್ತು ಜುಲೈ ತಿಂಗಳ ಪರೀಕ್ಷೆಗಳಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಹಾಗೂ ಪದವಿ (ವಾಣಿಜ್ಯ, ಕಲಾ ಹಾಗೂ ವಿಜ್ಞಾನ) ತರಗತಿಗಳಲ್ಲಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದವರಿಗೆ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು 20-10-2024ರ ರೊಳಗೆ ಈ ಕೆಳ ಕಾಣಿಸಿದ ವಿಳಾಸದಲ್ಲಿ ತಮ್ಮ ಇತ್ತೀಚಿನ ಭಾವಚಿತ್ರ ಹಾಗೂ ಅಂಕಪಟ್ಟಿ ಮತ್ತು ವರ್ಗಾವಣೆ ಪ್ರಮಾಣಪತ್ರಗಳ ಝೆರಾಕ್ಸ ಪ್ರತಿಯೊಂದಿಗೆ ನಿಗದಿತ ನಮೂನೆಯನ್ನು ಪಡೆದುಕೊಂಡು ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು ಸುಭಾಸಚಂದ್ರ ಡಿ. ಕುರುಬರ ಮೋ: 9964030702 ಕಾರ್ಯದರ್ಶಿ ಕರಬಸಪ್ಪ ಲೋ. ಚಿನ್ನಿಕಟ್ಟಿ ಮೊ: 9449422854 ಹಾಗೂ ಉಪಾಧ್ಯಕ್ಷ ಎಚ್. ಎನ್. ಮೆಳ್ಳಿ ಮೋ: 9886963393 ಇವರನ್ನು ಸಂಪರ್ಕಿಸಲು ತಿಳಿಸಲಾಗಿದೆ.
ಉಚಿತ ಅರ್ಜಿ ಸಿಗುವ ಮತ್ತು ಸಲ್ಲಿಸುವ ಸ್ಥಳ: ಮೈಲಾರಲಿಂಗೇಶ್ವರ ಝರಾಕ್ಸ ಸೆಂಟರ್ ಪೋಸ್ಟ್ ಸರ್ಕಲ್ ರಾಣೇಬೆನ್ನೂರ.ಮೋ: 9844629058 ಶ್ರೀಶೈಲ ್ರಿಂಟರ್ಸ ಬಸ್ ನಿಲ್ದಾಣದ ಹತ್ತಿರ ರಾಣೇಬೆನ್ನೂರ ಮೋ. 7406509669 ಕಾರ್ಯದರ್ಶಿಗಳು ಕಂಬಳಿ ಸೊಸೈಟಿ ಪಿ.ಬಿ. ರಸ್ತೆ ರಾಣೇಬೆನ್ನೂರ ಮೋ. 9448224192ಗೆ ಸಂಪರ್ಕಿಸಬಹುದು ಎಂದು ಸಂಘದ ಅಧ್ಯಕ್ಷ ಸುಭಾಸಚಂದ್ರ ಡಿ. ಕುರುಬರ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.-04-