ಬೈಲಹೊಂಗಲ

ವಿವಿಧ ಬೇಡಿಕೆ ಒತ್ತಾಯಿಸಿ ಉಪವಿಭಾಗಾದಿಕಾರಿಗಳಿಗೆ ಮನವಿ

ವಿವಿಧ ಬೇಡಿಕೆ ಒತ್ತಾಯಿಸಿ ಉಪವಿಭಾಗಾದಿಕಾರಿಗಳಿಗೆ ಮನವಿ

ಬೈಲಹೊಂಗಲ 04: ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ ನಂ. 23 ರ ನಿವಾಸಿಗಳು ಉದ್ಯಾವನ,  ಕ್ರೀಡಾ ಮೈದಾನ ಮತ್ತು ಸಮುದಾಯ ಭವನ ವಂಚಿತರಾಗಿದ್ದು  ಈ ಭಾಗದಲ್ಲಿ ಪುರಸಭೆಯು ಸಾರ್ವಜನಿಕ ಉಪಯೋಗಕ್ಕೆ ಬಿಟ್ಟಿರುವ ಜಾಗೆಯಲ್ಲಿ ಈ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಪುರಸಭೆ ಸದಸ್ಯ ವಿಜಯ ಬೋಳಣ್ಣವರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಪಡಿಸಿದರು.  

 ವಾರ್ಡ 23 ರ ರಹವಾಸಿಗಳೊಂದಿಗೆ ಪ್ರತಿಭಟಿಸಿದ ವಿಜಯ ಬೋಳಣ್ಣವರ ಅವರು ಪಟ್ಟಣದಲ್ಲಿ ಸಾರ್ವಜನಿಕರ ಅನೂಕೂಲಕ್ಕಾಗಿ ಇರುವ ಪುರಸಭೆಯ ಉದ್ಯಾವನಕ್ಕೆ ಮಿಸಲಿಟ್ಟಿರುವ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಮಿಸಲಿಟ್ಟಿರುವ ಜಾಗೆಗಳಲ್ಲಿ ಕೂಡಲೇ ಸೌಲಭ್ಯ ಒದಗಿಸಬೇಕು. ಸಾರ್ವಜನಿಕರಿಂದ ಈ ಸೌಲಭ್ಯಗಳಿಗಾಗಿ ತೆರಿಗೆಯನ್ನು ಸಂಗ್ರಹಿಸಿದ್ದರು ಸೌಲಭ್ಯಗಳಿಂದ ವಂಚಿತರಾಗಬೇಕಾಗಿದೆ. ಪುರಸಭೆಯವರು ಕೂಡಲೇ ತೆರಿಗೆ ಸಂಗ್ರಹ ಹಣದಲ್ಲಿ ಕ್ರೀಡಾಂಗಣ, ಉದ್ಯಾವನ, ಸಮುದಾಯ ಭವನ ನಿರ್ಮಿಸಲಿ ಈ ಕೆಲಸ ತಮ್ಮಿಂದಾಗದಿದ್ದಲ್ಲಿ ನಾವು ಸಾರ್ವಜನಿಕವಾಗಿ ಹಣ ಸಂಗ್ರಹಿಸಿ ತಮಗೆ ಕೊಡುವದಾಗಿ ಪರೊಕ್ಷವಾಗಿ ಎಚ್ಚರಿಕೆ ನೀಡಿದರು.  ಈ ಬಗ್ಗೆ ಶಾಸಕರಿಗೆ, ಮುಖ್ಯಾಧಿಕಾರಿಗಳಿಗೆ ಮನವಿ ಅರ​‍್ಿಸಲಾಗಿದ್ದು ಪೌರಾಡಳಿತ ಸಚಿವರ ಗಮನ ಸೆಳೆಯುವದಾಗಿ ತಿಳಿಸಿದರು.  

ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ, ಸುರೇಶ ತಳವಾರ, ಎಚ್‌.ಪಿ.ಬಳಿಗಾರ, ರಿಜವಾನ ದೊಡವಾಡ, ತಿಪ್ಪಣ್ಣ ಶಾಹಪೂರ, ಸಂತೋಷ ಕೌಜಲಗಿ, ಸುರೇಶ ಪಾಟೀಲ, ವಿನಾಯಕ ಕಬ್ಬಲಗಿ, ತಿಪ್ಪಣ್ಣ ರಾಯಚೂರ, ಪಕ್ರುಸಾಬ ಹಾದಿಮನಿ ಅಲ್ಲದೇ ವಾರ್ಡನಂ 23 ರ ರಹವಾಸಿಗಳು ಇದ್ದರು. 


ಸುದ್ದಿ ಓದಿ