ಜಮಖಂಡಿ

ಆನಂದ ನ್ಯಾಮಗೌಡರಿಗೆ ಲೋಕಸಭಾ ಟಿಕೇಟ್ ನೀಡಲು ಒತ್ತಾಯ

ಆನಂದ ನ್ಯಾಮಗೌಡರಿಗೆ ಲೋಕಸಭಾ ಟಿಕೇಟ್ ನೀಡಲು ಒತ್ತಾಯ

ಜಮಖಂಡಿ 04: ಮಾಜಿ ಶಾಸಕ ಕೆಪಿಸಿಸಿ ವಕ್ತಾರ ಆನಂದ ನ್ಯಾಮಗೌಡ ಅವರಿಗೆ ಬಾಗಲಕೋಟೆ ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ನೀಡಬೇಕೆಂದು ಜಿಲ್ಲಾ ದಲಿತ ಮುಖಂಡ ಮುತ್ತಣ್ಣ ಮೇತ್ರಿ ವರಿಷ್ಠರನ್ನು ಒತ್ತಾಯಿಸಿದ್ದಾರೆ.  

ಬಾಗಲಕೋಟೆ ಜಿಲ್ಲೆಗೆ ದಿವಂಗತ ಸಿದ್ದು ನ್ಯಾಮಗೌಡರ ಕೊಡುಗೆ ಅಪಾರವಾಗಿದ್ದು. ಅವರ ಸುಪುತ್ರ ಮಾಜಿ ಶಾಸಕ ಆನಂದ ನ್ಯಾಮಗೌಡರು ಯುವಕರಾಗಿದ್ದು. ಜಿಲ್ಲೆಯಲ್ಲಿ ಯುವಕರ ಬೆಂಬಲವು ಹೆಚ್ಚಾಗಿದ್ದು. ಜಮಖಂಡಿ ಕ್ಷೇತ್ರಕ್ಕೆ ಶಾಸಕರಿದಾಗ ದಲಿತ, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಹಾಗೂ ರೈತರ ನೂರಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರಿಗೆ ಲೋಕಸಭಾ ಟಿಕೆಟ್ ನೀಡಿದರೆ ಗೆಲವು ನಿಶ್ಚಿತ, ಕಾಂಗ್ರೆಸ್ ಪಕ್ಷದ ವರಿಷ್ಠರು ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ. 


ಸುದ್ದಿ ಓದಿ