ಬೈಲಹೊಂಗಲ

ಕರ್ನಾಟಕ ಜೈಭೀಮ ಸಂಘರ್ಷ ಸಮಿತಿ ಆರೋಪ ಖಂಡಿಸಿ ಮನವಿ

ಕರ್ನಾಟಕ ಜೈಭೀಮ ಸಂಘರ್ಷ ಸಮಿತಿ ಆರೋಪ ಖಂಡಿಸಿ ಮನವಿ

ಲೋಕದರ್ಶನ ವರದಿ 


ಬೈಲಹೊಂಗಲ 18: ಬೇಡ ಜಂಗಮ ಸಮಾಜದವರು 98 ಖೊಟ್ಟಿ ಜಾತಿ ಪ್ರಮಾಣ ಪತ್ರ ಪಡೆದಿರುವರು ಎಂದು ಕರ್ನಾಟಕ ಜೈಭೀಮ ಸಂಘರ್ಷ ಸಮಿತಿ ಆರೋಪ ಮಾಡಿರುವುದನ್ನು ಖಂಡಿಸಿ ಅಖಿಲ ಕರ್ನಾಟಕ ಡಾ.ಬಿ.ಆರ್‌.ಅಂಬೇಡ್ಕರ ಬೇಡ ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ತಹಸೀಲ್ದಾರ, ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು. 

       ಜಿಲ್ಲಾ ಘಟಕದ ಅಧ್ಯಕ್ಷ ಬಸಲಿಂಗಯ್ಯ ಚಿಕ್ಕಮಠ, ದುರ್ಗಾದೇವಿ ಆರಾಧಕ  ಡಾ.ಮಹಾಂತಯ್ಯ ಶಾಸ್ರ್ತಿ ಆರಾದ್ರಿಮಠ ಮಾತನಾಡಿ, ಜಾತಿ ಪ್ರಮಾಣ ಪತ್ರ ನೀಡುವ  ಗ್ರೇಡ-2 ತಹಸೀಲ್ದಾರ ಕರ್ನಾಟಕ ಎಸ್ ಸಿ, ಎಸ್ ಟಿ ಕಾಯ್ದೆಯಡಿ ಪರೀಶೀಲನೆ ಮಾಡಿ ಬೇಡ ಜಂಗಮರಿಗೆ ಬೇಡ ಜಂಗಮ ಪ್ರಮಾಣ ಪತ್ರ  ನೀಡಿದ್ದಾರೆ. ಹೊರತು ಖೊಟ್ಟಿ ಪ್ರಮಾಣ ಪತ್ರ ನೀಡಿರುವುದಿಲ್ಲ. ಆರೋಪ ಮಾಡಿರುವ ಅವರು ದೂರಿನ ಜೊತೆಗೆ ಸೂಕ್ತ ದಾಖಲಾತಿ ಹಚ್ಚಿ ಕೊಡದೇ ಒಂದೂ ದೂರಿನ ಅರ್ಜಿ ಸಲ್ಲಿಸಿದರೆ ಅದಕ್ಕೆ ಮೌಲ್ಯವಿರದು. ನಾವು ಬೇಡ ಜಂಗಮರಲ್ಲ ಎಂದು ಪುರಾವೆಗಳನ್ನು ದೃಢಪಡಿಸಲು ಅವಕಾಶ ನೀಡಿದಲ್ಲಿ ಸಮಾಜದ ಪದಾಧಿಕಾರಿಗಳು ಎಲ್ಲ ದಾಖಲೆಗಳ ಜೊತೆ ನಾವು ಸಿದ್ಧರಿದ್ದೆವೆ ಎಂದರು. 

     ತಾಲೂಕು ಅಧ್ಯಕ್ಷ ಸಂತೋಷ ಪಶುಪತಿಮಠ, ಉಪಾಧ್ಯಕ್ಷ ರಾಚಯ್ಯ ರೊಟ್ಟಯ್ಯನವರಮಠ, ಕಿತ್ತೂರು ತಾಲೂಕು ಉಪಾಧ್ಯಕ್ಷ ಸಿದ್ದಯ್ಯ ಹೊಸಮಠ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗುರುಶಾಂತ ತೆಂಗಿನಮಠ, ಶ್ರೀಶೈಲ ಕಲ್ಮಠ, ಸಂಚಾಲಕ ಶ್ರಿಶೈಲ ಏಣಗಿಮಠ, ರುದ್ರಯ್ಯ ಚರಂತಿಮಠ, ಮುಖಂಡರಾದ ಕುಮಾರ ಮಠಪತಿ, ಸೋಮಯ್ಯ ಪೂಜೇರ, ಶಿವಯ್ಯ ಪುರಾಣಿಕಮಠ, ಸೋಮು ಬೆಂಡಿಗೇರಿಮಠ, ಸಂತೋಷ ಹಿರೇಮಠ, ಪತ್ರಯ್ಯ ದಂಡಾವತಿಮಠ ಮೊದಲಾದ ಅನೇಕರು ಹಾಗೂ ಸವದತ್ತಿ, ಕಿತ್ತೂರು, ಬೈಲಹೊಂಗಲ ಜಂಗಮ ಸಮಾಜದ ಮುಖಂಡರು ಇದ್ದರು. 


ಸುದ್ದಿ ಓದಿ