ಕಾಗವಾಡ

ಶಾಸಕ ವಿರುದ್ಧ ನೀಡಿದ ಪ್ರಕರಣ ರದ್ದುಗೊಳಿಸಲು ಆಗ್ರಹಿಸಿ ಮನವಿ

ಶಾಸಕ ವಿರುದ್ಧ ನೀಡಿದ ಪ್ರಕರಣ ರದ್ದುಗೊಳಿಸಲು ಆಗ್ರಹಿಸಿ ಮನವಿ

ಶೇಡಬಾಳ 30: ಕಾಗವಾಡ ತಾಲೂಕಿನ ಕೆಲ ದಲಿತರು ವಿಶೇಷವಾಗಿ ನವಲಿಹಾಳ ಗ್ರಾಮದ ದಲಿತ ಕುಟುಂಬದವರು ದೌರ್ಜನ್ಯ ತಡೆ ಕಾನೂನನ್ನು ತಮ್ಮ ಸ್ವಾರ್ಥ ಮತ್ತು ಸ್ವಹಿತಕ್ಕಾಗಿ ಹಣಕಾಸಿನ ಲಾಭಗೊಸ್ಕರ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಖಂಡನೀಯವಾಗಿದೆ. ಇತ್ತಿಚಿಗೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಮತ್ತು ಅವರ ಮಕ್ಕಳು ಹಾಗೂ ಇನ್ನುಳಿದ 15 ಜನರ ಮೇಲೆ ಸುಳ್ಳು ಅರೋಪಗಳನ್ನು ಮಾಡಿ, ದೈಹಿಕ ತೊಂದರೆಗಳನ್ನು ನೀಡಿದ್ದಾರೆ ಎಂದು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಸಂಬಂಧಪಟ್ಟ ಪೋಲಿಸ್ ಇಲಾಖೆ ಅಧಿಕಾರಿಗಳು ಅದನ್ನು ರದ್ದುಪಡಿಸಿ ದೂರು ನೀಡಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕಾಗವಾಡ ತಾಲೂಕಾ ವಿವಿಧ ದಲಿತಪರ ಸಂಘಟನೆಗಳ ಮುಖಂಡರಗಳು ಕಾಗವಾಡ ಪಿಎಸ್‌ಐ - ಬಿ. ಎಮ್‌. ರಬಕವಿ ಅವರಿಗೆ ಶನಿವಾರ ದಿ. 30 ರಂದು ಮನವಿ ಅರ​‍್ಿಸಿ ಒತ್ತಾಯಿಸಿದರು.  

ದಲಿತ ಮುಖಂಡರುಗಳಾದ ಸುಭಾಷ ಢಾಲೆ ಹಾಗೂ ಪ್ರಕಾಶ ಧೊಂಡಾರೆ ಮೊದಲಾದ ಮುಖಂಡರು ಮಾತನಾಡಿ ಶಾಸಕ ಶ್ರೀಮಂತ ಪಾಟೀಲರು ಕಾಗವಾಡ ಮತಕ್ಷೇತ್ರದ ದಲಿತರ ಕನ್ಮಣಿಗಳಾಗಿದ್ದು ದಲಿತರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಾರೆ. ಶಾಸಕರು ಮತ್ತು ಅವರ ಮಕ್ಕಳು ಸುಮಾರು 20 ವರ್ಷಗಳಿಂದ ದಲಿತ ಜನಾಂಗದ ಜೊತೆ ಅನ್ಯೋನ್ಯವಾಗಿ ಸಾಮರಸ್ಯದಿಂದ ಬಾಳುತ್ತಿದ್ದಾರೆ. ಶಾಸಕ ಮತ್ತು ಅವರ ಮಕ್ಕಳು ಹಾಗೂ ಇನ್ನುಳಿದ 15 ಜನರ ಮೇಲೆ ಸುಳ್ಳು ಅರೋಪಗಳನ್ನು ಮಾಡಿ, ದೈಹಿಕ ತೊಂದರೆಗಳನ್ನು ನೀಡಿದ್ದಾರೆ ಎಂದು ಸುಳ್ಳು ದೂರು ನೀಡಿದ್ದು, ಇದು ಅವರ ಸ್ವಾರ್ಥಕ್ಕಾಗಿ ವಿಶೇಷವಾಗಿ ರಾಜಕೀಯ ಮತ್ತು ಹಣದ ಆಸೆಗಾಗಿ ಸುಳ್ಳು ಆರೋಪ ಮಾಡಿದ್ದಾರೆ. ಇದನ್ನು ಸಮಸ್ತ ದಲಿತ ಸಮುದಾಯ ಖಂಡಿಸುತ್ತದೆ. ದಲಿತ ದೌರ್ಜನ್ಯ ಕಾನೂನನ್ನು ದುರುಪಯೋಗ ಪಡಿಸಿಕೊಂಡು ದಲಿತ ಸಮಾಜಕ್ಕೆ ಮೊಸ ಮಾಡುತ್ತಿರುವ ಇಂಥ ವ್ಯಕ್ತಿಗಳು ಸುಳ್ಳು ದೂರು ನೀಡಲು ಬಂದಾಗ ಕುಲಂಕುಷವಾಗಿ ಸ್ಥಾನಿಕ ಚೌಕಶಿ ಮಾಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. 

ಸುಭಾಷ ಢಾಲೆ, ಪ್ರಕಾಶ ಧೋಂಡಾರೆ, ಸಚೀನ ಕಾಂಬಳೆ, ಪಿಂಟು ಕಾಂಬಳೆ, ಅಣ್ಣಾಸಾಹೇಬ ಕಾಂಬಳೆ, ಸಂತೋಷ ಚಿತಳೆ, ವಿನಾಯಕ ಕಾಂಬಳೆ, ಕೃಷ್ಣಾ ಕಾಂಬಳೆ, ವಿನೋದ ಶಿರಗಾವೆ, ಬಾಳಸಾಹೇಬ ಕಾಂಬಳೆ, ದಯಾನಂದ ಕಾಂಬಳೆ, ಸುನೀಲ ಕಾಂಬಳೆ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ