ಇಂಡಿ

ನಕಲಿ ಪತ್ರಕರ್ತರ ಹಾವಳಿ ಕಡಿವಾಣಕ್ಕಾಗಿ ಪೊಲೀಸ ಅಧಿಕಾರಿಗೆ ಮನವಿ

ನಕಲಿ ಪತ್ರಕರ್ತರ ಹಾವಳಿ ಕಡಿವಾಣಕ್ಕಾಗಿ ಪೊಲೀಸ ಅಧಿಕಾರಿಗೆ ಮನವಿ


ಇಂಡಿ: ಇತ್ತೀಚಿನ ದಿನಗಳಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಅವರು ಹಗಲು ದರೋಡೆ ನಡೆಸುತ್ತಿದ್ದಾರೆ ಅವುಗಳಿಗೆ ಕಡಿವಾಣ ಹಾಕಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲಾಲೂ ರಾಠೋಡ ಹೇಳಿದರು. 

ಅವರು ಸೋಮವಾರ ಪಟ್ಟಣದ ಪೊಲೀಸ್ ಉಪವಿಭಾಗಿ ಅಧಿಕ್ಷಕ ಶ್ರೀಧರ ದೋಡಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. 

ಹೆಚ್ಚು ಪತ್ರಕರ್ತರಿದ್ದಷ್ಟು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬಹುದು ಎನ್ನುದ್ದಾದರೆ, ಪತ್ರಿಕೆಗಳೇ ಇಲ್ಲದ ಪತ್ರಕರ್ತರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವುದರಿಂದ ಜನಸಾಮಾನ್ಯರು ಹುಬ್ಬೇರಿಸುವಂತಾಗಿರುವುದಂತೂ ಸತ್ಯ.  

ಪ್ರತಿ ತಾಲೂಕಿಗೆ ಇರಬೇಕಾದ ಪತ್ರಕರ್ತರು ರಾಜ್ಯ ಪತ್ರಿಕೆಗಳ ವರದಿಗಾರಾರರು ಹಾಗೂ ಪ್ರಾದೇಶಿಕ ವರದಿಗಾರರು ಹೊರತುಪಡಿಸಿ 50ಕ್ಕೂ ಹೆಚ್ಚು ಪತ್ರಕರ್ತರು ಇದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಪರೀಶೀಲನೆ ಮಾಡಿ ಅನು ಮಾಡಿ ಕೊಡಬೇಕೆಂದು ಆಗ್ರಹಿಸಿದ್ದರು. 

ರಾಜಕೀಯ ಮುಖಂಡರು ಏರಿ​‍್ಡಸುವ ಸಭೆ, ಸಮಾರಂಭ, ಪತ್ರಿಕಾಗೋಷ್ಠಿ ಚುನಾವಣಾ ಸಂದರ್ಭದಲ್ಲಿ ಪತ್ರಿಕೆಗಳೆ ಇಲ್ಲದ ಪತ್ರಕರ್ತರು ಕಾಣಿಸಿಕೊಳ್ಳುತ್ತಾರೆ. ಪತ್ರಕರ್ತರ ಹುದ್ದೆಗೆ ಕಳಂಕವನ್ನು ತರುವ ಕೆಲವರು ಸರ್ಕಾರಿ ಕಛೇರಿಗಳಲ್ಲಿ ಹಫ್ತಾ ವಸೂಲಿ ದಂಧೆ ಕಾಯಕವನ್ನೆ ಮಾಡಿಕೊಂಡಿದ್ದಾರೆ ಎಂದರು. 

ಪ್ರಾಮಾಣಿಕ ಪತ್ರಕರ್ತರು ವೃತ್ತಯಲ್ಲಿ ಹೊಂದಾಣಿಕೆ ಮಾಡಿಕೊಳ್ಳದೆ, ಅಡಚಣೆಗಳನ್ನು ಎದುರಿಸಿ ಮುಂದುವರಿಯುತ್ತಾರೆ. ಆದರೆ ಕೆಲವರೂ ಅವುಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಭ್ರಷ್ಟರಿಗೆರ ಅನುಕೂಲ ಮಾಡಿಕೊಡುತ್ತಾರೆ ಎಂದರು. 

ಕೆಲವರು ಪ್ರೆಸ್ಸ್‌ ಪದ ದುರ್ಬಳಿಕೆ ಮಾಡಿಕೊಳ್ಳುತ್ತಿರುವ ಜೀಪ, ದ್ವಿಚಕ್ರ ವಾಹನಗಳಿಂದ ಹಿಡಿದು ಮುಂತಾದ ವಾಹನಗಳ ಮೇಲೆ ರಾರಾಜಿಸುತ್ತಿರುವ ಪ್ರೆಸ್ಸ್‌ ಪದಬಳಕೆ ಸಂಬಂಧಪಟ್ಟ ಪೊಲೀಸ್ ಇಲಾಖೆ ಮೂಲಕ ಅನಾವಶ್ಯಕ ಪ್ರೆಸ್ಸ್‌ ಬಳಕೆಗೆ ಕಡಿವಾಣ ಹಾಕಬೇಕಾದ್ದು ಅವಶ್ಯವಾಗಿದೆ. 

ಈ ಸಂದರ್ಭದಲ್ಲಿ ರಾಜಕುಮಾರ ಚಾಬುಕಸವರ, ಯಲಗೊಂಡ ಬೇವನೂರ, ಅಬುಶಾಮ ಹವಾಲದಾರ, ವಿನೋದ ಸಿಂಗೆ, ಜೈಭಿಮ್, ಸದ್ದಾಂ ಜಮಾದಾರ,  ಅಲ್ಲಾಭಕ್ಷ ಗೋರೆ, ಪಾರುಕ್ ಬೋರಾಮಣಿ, ಮುದ್ದಿನ ನದಾಫ್ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ