ಉಪಸಭಾಪತಿಗಳಿಗೆ ಬಿಜೆಪಿ ಶಾಸಕರ ಅಗೌರವ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ
ಲೋಕದರ್ಶನ ವರದಿ
ಶಿಗ್ಗಾವಿ : ವಿಧಾನಸಭಾ ಉಪಸಭಾಪತಿಗಳಿಗೆ ಅಗೌರವ ತೋರಿರುವ ಬಿಜೆಪಿಯ ಶಾಸಕರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆಯನ್ನು ಬಂಜಾರ ಸಮಾಜ ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಪಟ್ಟಣದಲ್ಲಿ ತಹಶಿಲ್ದಾರ ಸಂತೋಷ ಹಿರೇಮಠ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಜುಲೈ 19 ರಂದು ಬುಧವಾರ ನಡೆದ ವಿಧಾನಸಭಾ ಭಾವಿಯಲ್ಲಿ ವಿರೋಧಪಕ್ಷ ಬಿಜೆಪಿಯ ಶಾಸಕರುಗಳು ಸದನದಲ್ಲಿ ಬಿ ಪ್ರತಿಯನ್ನು ಹರಿದು ಹಾಕಿದ್ದಲ್ಲದೇ ಉಪಸಭಾಪತಿ ರುದ್ರಪ್ಪ ಲಮಾಣಿಯವರ ಮುಖಕ್ಕೆ ಎರಚಿ ಸದನದ ಶಿಷ್ಟ್ಟಾಚಾರವನ್ನು ಉಲ್ಲಂಘನೆ ಮಾಡಿರುತ್ತಾರೆ.
ಈ ಕೃತ್ಯವನ್ನು ರಾಜ್ಯದ ಸಮಸ್ತ ಬಂಜಾರ ಸಮಾಜ ಉಗ್ರವಾಗಿ ಖಂಡಿಸುತ್ತದೆ. ಪ್ರಜಾಪ್ರಭುತ್ವದ ದೇಗುಲ ಎಂದೆನಿಸಿಕೊಂಡಿರುವ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಸಭಾಧ್ಯಕ್ಷರ ಸ್ಥಾನದಲ್ಲಿ ಕುಳಿತಿದ್ದ ಉಪಸಭಾಪತಿ ರುದ್ರಪ್ಪ ಲಮಾಣಿಯವರ ಮೇಲೆ ಸದನದ ಪ್ರತಿಗಳನ್ನು ಎಸೆಯುತ್ತಾ ಹಲ್ಲೆ ಮಾಡಲು ಪ್ರಯತ್ನಿಸಿ ಸದನದ ನೀತಿಯನ್ನು ಉಲ್ಲಂಘನೆ ಮಾಡಿರುವುದು ಅತ್ಯಂತ ಹೀನಾಯ ಹಾಗೂ ಖಂಡನೀಯವಾಗಿದೆ,
ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿಯವರ ಮೇಲೆ ನಡೆದ ಈ ಕೃತ್ಯ ಪ್ರಜಾಪ್ರಭುತ್ವ ಸಂವಿಧಾನಕ್ಕೆ ಹಾಗೂ ದಲಿತ ಸಮುದಾಯಗಳಿಗೆ ಮಾಡಿದ ಅಪಮಾನ, ಈ ದುಷ್ಕ್ರತ್ಯಕ್ಕೆ ಕಾರಣೀಕರ್ತರಾದ ಮುಂಚೂಣಿ ಶಾಸಕರಾದ ಆರ್.ಅಶೋಕ, ಸಿ.ಎನ್, ಅಶ್ವಥ್ ನಾರಾಯಣ್, ಆರಗ ಜ್ಞಾನೇಂದ್ರ, ಸುನಿಲ್, ಬಮಾರ್, ಅರವಿಂದ ಬೆಲ್ಲದ, ವೇದವಾದ ಕಮತ್, ಯಶಪಾಲ್, ಸುವರ್ಣ ಧೀರಜ್, ಮುನಿರಾಜು, ಭರತ್ ಶೆಟ್ಟಿ, ಉಮಾನಾಥ ಕೊಟ್ಯಾನ್ ಮತ್ತು ಇದರಲ್ಲಿ ಭಾಗಿಯಾದ ಎಲ್ಲಾ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದರು.
ದಲಿತರು, ಅಲೆಮಾರಿಗಳು ಮತ್ತು ತುಳಿತಕ್ಕೆ ಒಳಗಾದ ಸಮಾಜದವರು ಮೇಲ್ಮಟ್ಟದ ಅಧಿಕಾರದಲ್ಲಿ ಇರುವುದನ್ನು ಬಿಜೆಪಿ ಪಕ್ಷದವರು ಸಹಿಸುವುದಿಲ್ಲ ಎಂಬುದು ಇವರ ಕೆಳಮಟ್ಟದ ವರ್ತನೆಯಿಂದ ಮೇಲ್ನೋಟಕ್ಕೆ ಕಂಡು ಬರುತ್ತದೆ. ಹಾಗಾಗಿ ಈ ಕೃತ್ಯವನ್ನು ಖಂಡಿಸಿ ಇಂದು ಶಿಗ್ಗಾವಿ ನಗರದಲ್ಲಿ ಪ್ರತಿಭಟನೆಯನ್ನು ಬಂಜಾರ ಯುವಕ ಸಂಘದ ಜಿಲ್ಲಾ ಅಧ್ಯಕ್ಷ ಸುಧೀರ ಲಮಾಣಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಬಂಜಾರ ಯುವಕರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಗೀರೀಶ ಡಿ.ಆರ್, ಭೀಮಣ್ಣಾ ಹೊಟ್ಟೂರ, ಎಸ್.ಎಫ್.ಮಣಕಟ್ಟಿ, ಬೋವಿ ಸಮಾಜದ ರಾಜ್ಯ ಯುವ ಉಪಾಧ್ಯಕ್ಷ ರವಿ, ಡಿಎಸ್ಎಸ್ ತಾಲೂಕಾ ಅಧ್ಯಕ್ಷ ಭೀಮಣ್ಣಾ. ಮುದಕಪ್ಪ ಹೋಸಪೇಟಿ, ಮುಸ್ತಾಕ ಮುಲ್ಲಾ, ಆನಂದ ಲಾಮಾಣಿ, ಮಾಲತೇಶ ಬಿದರಗಟ್ಟಿ, ಪ್ರವೀಣ ಚವ್ಹಾಣ, ತುಕಾರಾಮ ಲಮಾಣಿ, ಸಂತೋಷ ಲಮಾಣಿ, ರಮೇಶ ಲಮಾಣಿ ಮುಂತಾದವರು ಉಪಸ್ಥಿತರಿದ್ದರು