ದಲಿತರಿಗೆ ನಿವೇಶನಗಳನ್ನು ಮಂಜೂರು ಮಾಡಿಕೊಡಲು ಜಿಲ್ಲಾಧಿಕಾರಿಗಳಿಗೆ ಮನವಿ
ರಾಣೇಬೆನ್ನೂರು,03 : ಸತಾಲೂಕಿನ ಕೋಟಿಹಾಳ ಗ್ರಾಮದ ದಲಿತರ ಸ್ಥಿತಿಗತಿ ಹೇಳತೀರದ್ದಾಗಿದೆ. ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ಈ ಗ್ರಾಮದಲ್ಲಿ ದಲಿತರಿಗೆ ಇರಲು ಮನೆಯಿಲ್ಲ. ಗ್ರಾಮದ ಸಣ್ಣ ಸಣ್ಣ ಮನೆಯಲ್ಲಿ ಮೂರ್ನಾಲ್ಕು ಕುಟುಂಬಗಳು ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಕ್ಕಳನ್ನು ಮದುವೆ ಮಾಡುತ್ತಿಲ್ಲ, ಮದುವೆ ಮಾಡಿದರೆ ಜೀವನ ನಡೆಸಲು ಮನೆಗಳಿಲ್ಲ. ಒಂದೇ ಮನೆಯಲ್ಲಿ ಅಡ್ಡ ಸೀರೆ ಪರದೆ ಕಟ್ಟಿಕೊಂಡು ವಾಸ ಮಾಡುತ್ತಿದಾರೆ. ಖಾಲಿ ನಿವೇಶನಗಳಿದ್ದರೆ ಹೇಗಾದರೂ ಚಪ್ಪರ ನರೆಕೆ ಕಟ್ಟಿಕೊಂಡು ಬದುಕಬಹುದಿತ್ತು. ಆದರೆ ನಿವೇಶನಗಳೇ ಇಲ್ಲ. ಹೀಗಾಗಿ ಇಂತಹ ಸಮಸ್ಯೆ ಇರುವುದಕ್ಕೆ ಮನೆಯಲ್ಲಿ ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನು ಸಂಬಂಧಿಕರ ಮನೆಯಲ್ಲಿಯೇ ಇಟ್ಟು ಅಲ್ಲಂದಲೇ ಮದುವೆ ಮಾಡಿ ಕಳಿಸುವ ನಾಚಿಕೆಗೇಡಿನ, ಮರ್ಯಾದೆಗೇಡಿನ ಪರಿಸ್ಥಿತಿ ಈ ಗ್ರಾಮದ ದಲಿತರದ್ದಾಗಿದೆ.
ಮಳೆ ಬಂದರೆ ಸಾಕು ಈಗಿರುವ ಚಿಕ್ಕ ಚಿಕ್ಕ ಮನೆಗಳು ಸಂಪೂರ್ಣ ಜಲಾವೃತವಾಗಿ ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳೆಲ್ಲರೂ ಸೇರಿ ನೀರನ್ನು ಹೊರಗೆ ಹಾಕಿಯೇ ಜೀವನ ಮಾಡಬೇಕು ಎಂದು ರಾಜ್ಯ ದಲಿತ ಸಂಪರ್ಕ ಸಮಿತಿ ರಾಜ್ಯಾಧ್ಯಕ್ಷ ಶಿವಪುತ್ರ ಮಲ್ನಾಡದ ಹೇಳಿದರು. ನಗರದ ಮಿನಿ ವಿಧಾನಸೌಧ ಮುಂದೆ ಪ್ರತಿಭಟನೆ ಮಾಡಿ ತಾಲೂಕ ದಂಡಾಧಿಕಾರಿಗಳಾದ ಆರ್ ಎಚ್ ಭಗವಾನ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಕೋಟಿಹಾಳ ಗ್ರಾಮದ ದಲಿತರಿಗೆ ನಿವೇಶನಗಳನ್ನು ಮಂಜೂರು ಮಾಡಿಕೊಡಲು ಪರೀಶೀಲಿಸಿ ತತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿಗಳು ತಮಗೆ ಸೂಚಿಸಿದ್ದು, ತಾವುಗಳು ಗ್ರಾಮಕ್ಕೆ ಆದಷ್ಟು ಬೇಗ ಬೇಟೀನೀಡಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಗ್ರಾಮದಲ್ಲಿ ದಲಿತರು ಶೌಚಾಲಯಕ್ಕೆ ಹೋಗಬೇಕಾದರೆ ಜಾಗವಿಲ್ಲ. ಅತ್ಯಂತ ಕೀಳು ಜೀವನ ನಡೆಸುವಂತ ಕೆಟ್ಟ ದುಸ್ಥಿತಿ ಈ ಗ್ರಾಮದ ದಲಿತರದ್ದಾಗಿದೆ ಎಂದರು.ಸಮಾಜಕ್ಕಾಣ ಇಲಾಖೆ, ಹಾಗೂ ಎಸ್.ಸಿ ಎಸ್ಟಿ ಇಲಾಖೆ ಮತ್ತು ಸಂಬಂದಿಸಿದ ಯಾವ ಇಲಾಖೆಗಳು ಈ ಕುರಿತು ಗಮನ ಹರಿಸಿಲ್ಲ, ಆದ್ದರಿಂದ ಸ್ವಾಭಿಮಾನಿ ದಲಿತರಾಗಿ ಬದುಕಬೇಕೆಂದು ತೀರ್ಮಾನಿಸಿ ಮನವಿ ಸಲ್ಲಿಸುತ್ತಿದ್ದೇವೆ. ತತಕ್ಷಣ ನಮ್ಮ ಗ್ರಾಮಕ್ಕೆ ಬೇಟಿಕೊಟ್ಟು ನಮ್ಮ ನೈಜ ಪರಿಸ್ಥಿತಿಯನ್ನು ನೋಡಲೇಬೆಕು. ಜಿಲ್ಲಾಧಿಕಾರಿಗಳು ಈಗಾಗಲೇ ನಮ್ಮ ಮನವಿಗೆ ಸ್ಪಂದಿಸಿದ್ದಾರೆ.
ತಾಲೂಕ ಅಧಿಕಾರಿಗಳು ಸ್ಪಂದನೆ ಮಾಡಿ ವರದಿಯನ್ನು ನೀಡಿದರೆ ಈ ಗ್ರಾಮಸ್ಥರಲ್ಲಿ ಪುನರ್ಜನ್ಮ ಬಂದಂತಾಗುತ್ತದೆ. ಗ್ರಾಮದ ದಲಿತರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಗುತ್ಯಮ್ಮ ಹಳದಾಳ, ಶಾಂತಮ್ಮ ಹತ್ತೂರ, ಸಿದ್ದಮ್ಮ ಲಕ್ಕೊಳ, ಅನುಸೂಯ, ಹೊನ್ನಮ್ಮ, ಸಾವಿತ್ರ, ಸುಮಿತ್ರಾ, ದುರಗಮ್ಮ, ಮಲ್ಲಮ್ಮ, ಪದ್ಮಾ, ಜೋತಿ, ತಿಪ್ಪೇಶಪ್ಪ ಹಳದಾಳ, ಗಾಯತ್ರಿ, ಕರಬಸಮ್ಮ,, ಮಂಜಪ್ಪ, ಹನುಮಂತಪ್ಪ, ಬಸವರಾಜ, ಕುಸಮ್ಮವ್ವ,ನಾಗಮ್ಮ ಹಾಗೂ ಮತ್ತಿತರ ಮಹಿಳೆಯರು, ಹ ಮುಖಂಡರು ಪಾಲ್ಗೊಂಡಿದ್ದರು