ರಸ್ತೆ ದುರಸ್ತಿಗೆ ಆಗ್ರಹಿಸಿ ರೈತರಿಂದ ಮನವಿ
ಇಂಡಿ 20: ತಾಲೂಕಿನ ಲಚ್ಯಾಣ ಗ್ರಾಮದ ಬಳಿ ಹಾದು ಹೋದ ಉಪಕಾಲುವೆ ಬದಿಯ ರಸ್ತೆ ದುರಸ್ತಿಗೆ ಆಗ್ರಹಿಸಿ ರೈತರು ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಎಸ್.ಎಂ.ಅಲ್ದಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
15 ಅಡಿ ಎತ್ತರದ ಲ್ಯಾಟ್ರಿಲ್ ನಂ 2 ರ ಕಾಲುವೆಯ ಬದಿಯ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆಯಲ್ಲಿ ತಗ್ಗು ಗುಂಡಿಗಳು ತುಂಬಿವೆ.ಮಳೆಯ ನೀರು ಮಡುಗಟ್ಟಿ ನಿಲ್ಲುತ್ತದೆ. ಅಂಕು ಡೊಂಕಾದ ಈ ರಸ್ತೆಯಲ್ಲಿ ಬೈಕ್ ಸವಾರರು ಸಂಚರಿಸುವದು ದುರಸ್ತಿವಾಗಿದೆ ಎಂದು ರೈತರು ದೂರಿದ್ದಾರೆ.
ಈ ಕಾಲುವೆ ರಸ್ತೆಯ ಪಕ್ಕದಲ್ಲಿ ಮುಳ್ಳು ಕಂಟಿಗಳು ದೈತ್ಯಾಕಾರದಲ್ಲಿ ಬೆಳೆದು ನಿಂತ ಪರಿಣಾಮ ಈ ರಸ್ತೆಯ ಇನ್ನಷ್ಟು ಇಕ್ಕಟಾಗಿದೆ.ಮತ್ತೊಂದೆಡೆ ವಿಷ ಜಂತುಗಳ ಹಾವಳಿ ಬೇರೆ. ಈ ರಸ್ತೆಯ ಮೂಲಕ ಶಾಲಾ ಮಕ್ಕಳುಸಂಚರಿಸಲು ಹಿಂದೇಟು ಹಾಕುತ್ತಿದ್ದು ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸಂಬಂದಿಸಿದ ಯು.ಕೆ.ಪಿ ಅಧಿಕಾರಿಗಳು ಇತ್ತ ಗಮನಿಸಿ ಮುಳ್ಳು ಕಂಟಿ ತೆರವುಗೊಳಿಸಿ, ರಸ್ತೆ ದುರಸ್ತಿಗೊಳಿಸಿ,ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಕಾಲುವೆ ರಸ್ತೆ ಅವಲಂಬಿತ, ರೈತರು,ವಯೋವೃದ್ದರು, ಶಾಲಾ ಮಕ್ಕಳು, ವಾಹನ ಸವಾರರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಲಚ್ಯಾಣ ಯುವ ರೈತ ಮಹಾಂತೇಶ ಕೊತಲಿ, ಸಿದ್ದರಾಮ ಕಲ್ಯಾಣಿ, ಶಿವಾನಂದ ಕೊತಲಿ, ಪ್ರಕಾಶ ನಾಗಣಸೂರ ಹಾಗೂ ಮಲಕಪ್ಪ ಹೂಗಾರ ಮತ್ತಿತರಿದ್ದರು.