ಬೇಡ-ಜಂಗಮ ಖೊಟ್ಟಿ ಜಾತಿ ಪ್ರಮಾಣ ಪತ್ರ ರದ್ದುಪಡಿಸಲು ಮನವಿ
ಬೈಲಹೊಂಗಲ 17: ಬೇಡ- ಜಂಗಮ ಖೊಟ್ಟಿ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಅವುಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಕರ್ನಾಟಕ ಜೈ ಭೀಮ ಸಂಘರ್ಷ ಸಮಿತಿಯ ತಾಲೂಕು ಘಟಕ ಹಾಗೂ ರಾಜ್ಯ ಘಟಕದ ಸದಸ್ಯರು ಉಪವಿಭಾಗಾಧಿಕಾರಿ ಕಛೇರಿಯಲ್ಲಿ ಮಂಗಳವಾರ ಪ್ರತಿಭಟಿಸಿ, ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯಾಧ್ಯಕ್ಷ ರಮೇಶ ರಾಯಪ್ಪಗೋಳ ಮಾತನಾಡಿ, ಖೊಟ್ಟಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ವಿತರಿಸಿ ಪರಿಶಿಷ್ಟ ಜಾತಿ ಜನರಿಗೆ ಅನ್ಯಾಯ ಮಾಡಿದ್ದಾರೆ. ಈ ಬಗ್ಗೆ ಹಲವಾರು ಸಲ ಸಂಭಂದಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವೂದೇ ಕ್ರಮ ಕೈಗೊಂಡಿರುವುದಿಲ್ಲ. ಕೂಡಲೇ ಖೊಟ್ಟಿ ಝಾತಿ ಪ್ರಮಾಣ ಪತ್ರ ನಿಡಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರುದ್ರ್ಪ ಮುಂದಿನವರ, ಫಕೀರ್ಪ ಅಮ್ಮವಗೋಳ, ಫಕೀರ್ಪ ನಾಗಮೇತ್ರಿ, ಶ್ರೀನಿವಾಸ ಭರಮನ್ನವರ, ರಾಜು ತಳವಾರ, ಪ್ರಕಾಶ ಹೊಸಮನಿ, ನಾಗಪ್ಪ ಭರಮನ್ನವರ, ಸೋಮು ಬಡ್ಲಿ, ಕರೇಪ್ಪ ಬುಡರಕಟ್ಟಿ, ಗಂಗಪ್ಪ ಬದ್ಲಿ, ಮಂಜುನಾಥ ಹಂಚಿನಮನಿ, ಪ್ರವೀಣ ಬಡ್ಲಿ, ಅಜ್ಜಪ್ಪ ಅಂಬಲಿ, ಶಿವಾನಂದ ಹರಿಜನ, ನವೀನ ಹೊಸಮನಿ, ನಿಂಗಪ್ಪ ಮಾವರಕರ, ಹಣಮಂತರ ಹಳೇಮನಿ, ಮಾರುತಿ ಹರಿಜನ ಹಾಗೂ ಸಂಘದ ಸದಸ್ಯರು ಇದ್ದರು.