ಕಾರಿಮನಿ ಮಡಿವಾಳ ಮಾಚಿದೇವ ದೇವಸ್ಥಾನ ಸಮಗ್ರ ಅಭಿವೃದ್ಧಿಗಾಗಿ ಮನವಿ
ಮಡಿವಾಳ ಮಾಚಿದೇವ ದೇವಸ್ಥಾನ ಅಭಿವೃದ್ಧಿಗೆ ಮನವಿ
ಯರಗಟ್ಟಿ 25: ಸಮೀಪದ ಕಾರಿಮನಿ ಗ್ರಾಮದ ಮಡಿವಾಳ ಮಾಚಿದೇವ ದೇವಸ್ಥಾನ ಅಭಿವೃದ್ಧಿಗೆ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಆನಂದ್ ಸಿಂಗ ಮತ್ತು ಬೈಲಹೊಂಗಲ ಶಾಸಕಮಹಾಂತೇಶ ಕೌಜಲಗಿ ಅವರಿಗೆ ಸವದತ್ತಿ ತಾಲೂಕ ಕಾರಿಮನಿ ಗ್ರಾಮದ 12ನೇ ಶತಮಾನದ ಮಹಾಶರಣ ಮಡಿವಾಳ ಮಾಚಿದೇವ ದೇವಸ್ಥಾನ ಸಮಗ್ರ ಅಭಿವೃದ್ಧಿಗಾಗಿ ಮನವಿ ಸಲ್ಲಿಸಲಾಯಿತು.
ಉತ್ತರ ಕರ್ನಾಟಕ ಮಡಿವಾಳ ಸಂಘದ ಅಧ್ಯಕ್ಷ ಎಂ. ಕೆ. ಹನುಮಂತಪ್ಪ ಹಾಗೂ ಟ್ರಸ್ಟಿನ ಅಧ್ಯಕ್ಷ ಸಿ. ಬಿ. ಯಡಳ್ಳಿ ವಕೀಲರು ಟ್ರಸ್ಟಿನ ಕಾರ್ಯದರ್ಶಿಸೋಮು ಕೆಂಗಾನೂರ, ಸದಸ್ಯರಾದ ಡಾ. ಮಹಾಂತೇಶ್ ಬೆಂಡಿಗೇರಿ ಹಾಗೂ ಕಾನೂನು ಸಲಹೆಗಾರರು ಹಾಗೂ ಸದಸ್ಯರಾದ ಮಹಾಂತೇಶ ಮಡಿವಾಳರ ವಕೀಲರು ಸವದತ್ತಿ. ಬೆಳಗಾವಿ ಜಿಲ್ಲೆ, ಉತ್ತರ ಕರ್ನಾಟಕ ಮಡಿವಾಳರ ಸಂಘದ ಬೆಳಗಾವಿ ವಿಭಾಗದ ಅಧ್ಯಕ್ಷರಾದ ಶಿವಾನಂದ ಮಡಿವಾಳರ ಬೆಳಗಾವಿ ಜಿಲ್ಲಾ ಮುಖಂಡರಾದ ಈಶ್ವರ ಮಡಿವಾಳರ ಹಾಗೂ ರಾಕೇಶ ಮಡಿವಾಳರ, ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ಮಹಿಳಾ ಅಧ್ಯಕ್ಷರಾದ ಸುಗುಣ ಕೃಷ್ಣಪ್ಪ ಅವರು ಮತ್ತು ಕೇಶವ ಪ್ರಸಾದ ಜೆಡಿಎಸ್ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಮತ್ತು ಚಿಕ್ಕೋಡಿಯ ಬಸವರಾಜ ಮಡಿವಾಳರ, ಗದಗ ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷರಾದ ಫಕೀರ್ಪ ಮಡಿವಾಳರ, ಧಾರವಾಡ ಜಿಲ್ಲಾ ಅಧ್ಯಕ್ಷ ಬಾಬಣ್ಣ ಮಡಿವಾಳರ ಉತ್ತರ ಕರ್ನಾಟಕ ಸಂಘದ ಕಾರ್ಯದರ್ಶಿ ಸಾಯಬಣ್ಣ ಮಡಿವಾಳರ, ನಿಂಬಣ್ಣ ಮಡಿವಾಳರ ಗದಗ, ಗುಲ್ಬರ್ಗದ ಚಂದ್ರಶೇಖರ್ ಮಡಿವಾಳರ, ಮಲ್ಲಣ್ಣ ಮಡಿವಾಳ, ಬಸವರಾಜ ಬೆಳಗಲಿ ಹುಬ್ಬಳ್ಳಿ, ವಿಜಯಪುರದ ಮಲ್ಲಣ್ಣ ಅಣ್ಣಪ್ಪನವರ, ಮುತ್ತಣ್ಣ ಮಡಿವಾಳರ, ಪ್ರಭು ಮಡಿವಾಳರ, ಪ್ರಶಾಂತ ಕುಮಾರ ಅಗಸರ, ಅಶೋಕ ಮಡಿವಾಳರ ಬೆಂಗಳೂರು ಉಪಸ್ಥಿತರಿದ್ದರು.