ಕಾಗವಾಡ

ತಹಶೀಲ್ದಾರ ಮೇಲೆ ಹಲ್ಲೆ ಖಂಡಿಸಿ ಮನವಿ

ತಹಶೀಲ್ದಾರ ಮೇಲೆ ಹಲ್ಲೆ ಖಂಡಿಸಿ ಮನವಿ

ಲೋಕದರ್ಶನ ವರದಿ 


ಕಾಗವಾಡ: ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ತಹಶೀಲ್ದಾರ ಡಾ.ಪ್ರದೀಪಕುಮಾರ ಹಿರೇಮಠ ರವರ ಮೇಲಿನ ಹಲ್ಲೆ ಖಂಡಿಸಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾಗವಾಡ ಘಟಕದ ವತಿಯಿಂದ ಕಾಗವಾಡದ ತಹಶೀಲ್ದಾರ ಕಚೇರಿ ಎದರು ದಿ. 29ಎಂದು ಪ್ರತಿಭಟನೆ ಕೈಗೊಂಡು ಅಧ್ಯಕ್ಷ ಗೌಡಪ್ಪಾ ಸಡ್ಡಿ ಇವರಿಂದ ತಹಶೀಲ್ದಾರ ರಾಜೇಶ ಬುರ್ಲಿ ಅವರಿಗೆ ಮನವಿ ಅರ​‍್ಿಸಿದರು.  

ತಹಶೀಲ್ದಾರರಾದ ಡಾ.ಪ್ರದೀಪರುಮಾರ ಹಿರೇಮಠ ರವರು ಕರ್ತವ್ಯನಿರತ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಯನ್ನು ಮಾಡಿರುವುದು ಅತ್ಯಂತ ಅಮಾನವೀಯ ಘಟನೆಯಗಿದ್ದು ಇದನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ತೀವ್ರವಾಗಿ ಖಂಡಿಸಿದರು. 

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳು, ನೌಕರರು ಅನೇಕ ಒತ್ತಡಗಳ ಮಧ್ಯೆ ಕಾರ್ಯ ನಿರ್ವಹಿಸುತ್ತಿದಾರೆ. ತಾಲೂಕಿನ ಆಡಳಿತದ ದಂಢಾದಿಕಾರಿಗಳ ಮೇಲೆಯೇ ಇಂತಹ ಅಮಾನವೀಯ ಘಟನೆಗಳು ಜರುಗುತ್ತಿರುವುದರಿಂದ, ಉಳಿದ ಸರ್ಕಾರಿ ನೌಕರರು ಭಯಭೀತಿಯಿಂದ ಕರ್ತವ್ಯ ನಿರ್ವಹಿಸುವಂತಾಗಿದೆ. ಇಂತಹ ಹೇಯ ಕೃತ್ಯ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ಶಿಕ್ಷೆ ವಿಧಿಸಬೆಕೆಂದು ಮನವಿ ಮೂಲಕ ಒತ್ತಾಯಿಸಿದರು.  

  ಮೇಲಿಂದ ಮೇಲೆ ಇಂತಹ ಅಹಿತಕರ ಘಟನೆಗಳು ಜರುಗುತ್ತಿರುವುದರಿಂದ ಸರ್ಕಾರಿ ಅಧಿಕಾರಿಗಳು, ನೌಕರರು ಭಯಭೀತಿಯಿಂದ ಕಾರ್ಯನಿರ್ವಹಿಸುವಂತಾಗಿದೆ. ರಾಜ್ಯದ ಸಮಸ್ತ ಸರ್ಕಾರಿ ಅಧಿಕಾರಿಗಳು, ನೌಕರರ ಹಿತರಕ್ಷಣೆಗಾಗಿ. ಸೂಕ್ತ ಕಠಿಣ ಕಾನೂನು ರೂಪಿಸಿ ರಾಜ್ಯದ ಸಮಸ್ತ ಸರ್ಕಾರಿ ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಅನುವು ಮಾಡಿದರು. 

ತಾಲುಕ ಘಟ್ಟಕದ ಅದ್ಯಕ್ಷ ಗೌಡಪಾ ಸಡ್ಡಿ, ಎ.ಇ.ಒ ಈರನಗೌಡ ಐಗನಗೌಡರ, ಸಿ.ಡಿ.ಪಿ.ಓ ಸಂಜುಕುಮಾರ್ ಸದಲಗೆ, ಗೌತಮ್ ಶಿರ್ಗಾವೆ, ಸಂಜು ಕೋಳಿ, ಎಫ್‌.ಎಸ್ ತಿಳಗಂಜಿ, ಎಂ.ಟಿ ತಳ್ವಾರ್, ರಾಮ ಪಾಟೀಲ, ಎಂ.ಎಲ್ ಹವಾಲೆಗೋಳ ಸೇರಿದಂತ್ತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ