ಬರಪರಿಹಾರದ ಹಣ ರೈತರಿಗೆ ವಿತರಣೆ ಮಾಡಬೇಕೆಂದು ಆಗ್ರಹಿಸಿ ಮನವಿ
ರಾಣಿಬೆನ್ನೂರು 28: ಬರ ಪರಿಹಾರ ಅವೈಜ್ಞಾನಿಕ ವಿತರಣೆಯಲ್ಲಿ ಆಗಿರುವ ತಾರತಮ್ಮ್ಯ ಮತ್ತು ಲೋಪದೋಷ ಸರಿಪಡಿಸಿ ವೈಜ್ಞಾನಿಕ ರೀತಿಯಲ್ಲಿ ಬರಪರಿಹಾರದ ಹಣವನ್ನು ರೈತರಿಗೆ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ, ಸೋಮವಾರ ತಾಲೂಕಿನ ಮೇಡ್ಲೇರಿ ಹೊಬಳಿ ಭಾಗದ ರೈತರು ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ತಾಲೂಕಿನ ಮೇಡ್ಲೇರಿ ಹೊಬಳಿ ಭಾಗದ ಜಮೀನುಗಳಲ್ಲಿ ಬೆಳೆ ಹಾಳಾದ ರೈತರಿಗೆ ಬರ ಪರಿಹಾರ ನೀಡಿಲ್ಲ ಜೊತೆಗೆ ಕಬ್ಬು ಮತ್ತು ಅಡಿಕೆ ಬೆಳದ ರೈತರಿಗೆ ಬೆಳೆ ಪರಿಹಾರ ದೊರಕಿದ್ದು ಇದು ಅವೈಜ್ಞಾನಿಕ ವಿತರಣೆಯಾಗಿರುವುದು ಸಾಕ್ಷಿಯಾಗಿದೆ. ಆದಕಾರಣ ಬರ ಪರಿಹಾರ ಅವೈಜ್ಞಾನಿಕ ವಿತರಣೆಯಲ್ಲಿ ಆಗಿರುವ ತಾರತಮ್ಯೆ ಮತ್ತು ಲೋಪದೋಷ ಸರಿಪಡಿಸಿ ವೈಜ್ಞಾನಿಕ ರೀತಿಯಲ್ಲಿ ಬರಪರಿಹಾರದ ಹಣವನ್ನು ರೈತರಿಗೆ ವಿತರಣೆ ಮಾಡಬೇಕು ಎಂದು ಮನವಿಯಲ್ಲಿ ರೈತರು ಒತ್ತಾಯಿಸಿದ್ದಾರೆ.
ಹನುಮಂತಪ್ಪ ಓಲೇಕಾರ, ನಿಂಗಪ್ಪ ನಲವಾಗಲ, ಜಯಪ್ಪ ಓಲೇಕಾರ, ಹೊನ್ನಪ್ಪ ಓಲೇಕಾರ, ಬೀಮಪ್ಪ ಓಲೇಕಾರ, ಕೃಷ್ಣಮುರ್ತಿ ನಲವಾಗಲ, ಹನುಮಂತಪ್ಪ ಜಾನಗಿರಿ, ಬೀಮಪ್ಪ ಜಾನಗಿರಿ, ವಿನಾಯಕ ನಲವಾಗಲ, ಬಸಪ್ಪ ಓಲೇಕಾರ, ಶಿವಯೋಗಿ ಜಾನಗಿರಿ, ಅಶೋಕಪ್ಪ ಜಾನಗಿರಿ ಸೇರದಂತೆ ಮತ್ತಿತರ ರೈತರು ಇದ್ದರು.