ಸಿಂಧಗಿ

ಮಾರಣಾಂತಿಕ ಹಲ್ಲೆ ಖಂಡಿಸಿ ದಲಿತ ಸೇನೆ ಪದಾಧಿಕಾರಿಗಳಿಂದ ಮನವಿ

ಮಾರಣಾಂತಿಕ ಹಲ್ಲೆ ಖಂಡಿಸಿ ದಲಿತ ಸೇನೆ ಪದಾಧಿಕಾರಿಗಳಿಂದ ಮನವಿ

ಸಿಂದಗಿ; ಕಳೇದ 13 ರಂದು ಲಿಂಗಸೂರ ತಾಲೂಕಿನ ಕಿಲಾರಹಟ್ಟಿ ಗ್ರಾಮದಲ್ಲಿ ದಲಿತ(ಮಾದರ) ಸಮಾಜದ ಬೈಲಪ್ಪನನ್ನು ಅರೆಬೆತ್ತಲೆ ಮಾಡಿ ವಿದ್ಯುತ್ ಕಂಬಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ ಹಾಗೂ ದೌರ್ಜನ್ಯ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿ ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ದಲಿತ ಸೇನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಶೀಲ್ದಾರ ಸಂಜೀವಕುಮಾರ ದಾಸರ ಅವರ ಮುಖಾಂತರ ಗೃಹಸಚಿವರಿಗೆ ಮನವಿ ಸಲ್ಲಿಸಿದರು. 

          ಈ ಸಂದರ್ಭದಲ್ಲಿ ದಲಿತ ಸೇನೆಯ ರಾಜ್ಯ ಸಂ.ಕಾರ್ಯದರ್ಶಿ ಮಹಿಬೂಬ ಸಿಂದಗಿಕರ ಮಾತನಾಡಿ, ನ.13 ರಂದು ಬೈಲಪ್ಪನ ಮಗಳು ಅಪಹರಣ ಮಾಡಿಕೊಂಡು ಹೋಗಿದ್ದಾರೆ ಪೋಸ್ಕೋ ಕಾಯ್ದೆಯಡಿ ಮುದಗಲ್ ಪೊಲೀಸಠಾಣೆಗೆ ದೂರು ದಾಖಲಿಸುವಂತೆ ಅರ್ಜಿ ಸಲ್ಲಿಸಿದರೆ ಕಾಣೆಯಾಗಿದ್ದಾಳೆ ಎಂದು ಇಲಾಖೆ ಪ್ರಕರಣದ ದಾರಿ ತಪ್ಪಿಸಿದ್ದಾರೆ ಅಲ್ಲದೆ 1 ವರ್ಷದ ಹಿಂದೆ ಕುರುಬ ಸಮೂದಾಯದ ವ್ಯಕ್ತಿ ನನ್ನ ಮಗಳನ್ನು ಅಪಹರಿಸಿಕೊಂಡು ಹೋಗಿದ್ದಾನೆ ನನ್ನ ಮಗಳನ್ನು ಹುಡುಕಿಕೊಡಿ ಎಂದರೆ ಕುರುಬ ಸಮೂದಾಯದ ಲಚಮಪ್ಪ ಭೀಮಪ್ಪ ಕುರಬರ ಅವರ ಸಂಬಂಧಿಲರು ದುರಣಪ್ಪ ಗೌಡ ಮತ್ತು ಆತನ ಸಹೋದರ ಸುರೇಶ ಏಕಾಏಕಿಯಾಗಿ  ದಲಿತಕೆರಿಯೊಳಗೆ ನುಗ್ಗಿ ಮನೆಯೊಳಗೆ ಇದ್ದ ಬೈಲಪ್ಪನನ್ನು ಹಿಗ್ಗಾಮುಗ್ಗಿಯಾಗಿ ತಳಿಸಿ ಅರೆಬೆತ್ತಲೆ ಮಾಡಿ ಎಳೆದುಕೊಂಡು ಹೋಗಿ ಕಂಬಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ ಮಾಡಿದ್ದು ಇಡೀ ಮಲಕುಲವೇ ತಲೆ ತಗ್ಗಿಸುವಂತಹ ಕೃತ್ಯವಾಗಿದೆ ಇಂತಹ ಪ್ರಕರಣಗಳು ಕರ್ನಾಟಕದಲ್ಲಿ ದಿನೆ ದಿನೆ ಮರುಕಳಿಸುತ್ತಿವೆ ಆದರೆ ರಾಜ್ಯ ಸರಕಾರ ಕೈಕಟ್ಟಿ ಕುಳಿತ್ತಿದೆ ಕಾರಣ ರಾಜ್ಯ ಗ್ರಹ ಸಚಿವರು, ಮುಖ್ಯಮಂತ್ರಿಗಳು ಇಂತಹ ಘಟನೆಗಳಿಗೆ ಕಡಿವಾಣ ಹಾಕಿ ಈ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಬಂಧಿಸಿ ಹಲ್ಲೆಗೊಳಗಾದ ಬೈಲಪ್ಪನಿಗೆ ನ್ಯಾಯ ಒದಗಿಸಿಕೊಡಬೇಕು ಇಲ್ಲದಿದ್ದರೆ ರಾಜ್ಯಾಧ್ಯಂತ ದಲಿತ ಸೇನೆ ಪದಾಧಿಕಾರಿಗಳು ರೋಡಿಗೀಳೀದು ಉಗ್ರವಾದ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಏಚ್ಚರಿಕೆ ನೀಡಿದರು. 

       ಹಲ್ಲೆಗೊಳಗಾದ ಬೈಲಪ್ಪನ ಮನೆಗೆ ಸೂಕ್ತ ರಕ್ಷಣೆ ನೀಡಬೇಕು, ಸಂತ್ರಸ್ತನ ಕುಟುಂಬಕ್ಕೆ ಸರಕಾರದಿಂದ 50ಲಕ್ಷ ಪರಿಹಾರ ಒದಗಿಸಿಕೊಡಬೇಕು, ಆ ಕುಟುಂಬದ ಮಕ್ಕಳಿಗೆ ಪ್ರತಿಷ್ಟಿತ ಶಾಲೆಗಳಲ್ಲಿ ಉಚಿತವಾಗಿ ಶಿಕ್ಷಣ ಕೊಡಬೇಕು, ಸಂತ್ರಸ್ತರ ಮೇಲೆ ದೌರ್ಜನ್ಯ ವೆಸಗಿದ ಅರೋಪಿಗಳನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಜಿಲ್ಲಾ ಸಂ.ಕಾರ್ಯದರ್ಶಿ ಏಕನಾಥ ಕಟ್ಟಿಮನಿ, ರಜತ ತಾಂಬೆ, ಬಾಲಕೃಷ್ಣ ಚಲವಾದಿ, ದಸ್ತಗೀರ ಅಳಂದ, ಆಸ್ಪಾಕ ಮಕಾನದಾರ, ಅಶೋಕ ಮುರಡಿ, ಜಾವೀದ ಕರ್ಜಗಿ, ಸಲೀಂ ಜಮಾದಾರ, ಮಂಜುನಾಥ ನಾಯ್ಕೋಡಿ, ಬಾಬು ನಾಟೀಕಾರ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ. 


ಸುದ್ದಿ ಓದಿ