ಕಾಗವಾಡ

ಶಿವಶರಣ ಹಡಪದ ಅಪ್ಪಣ್ಣ ಜಯಂತಿ: ಬೃಹತ್ ಸಮಾವೇಶ

ಶಿವಶರಣ ಹಡಪದ ಅಪ್ಪಣ್ಣ  ಜಯಂತಿ: ಬೃಹತ್ ಸಮಾವೇಶ

ಲೋಕದರ್ಶನ ವರದಿ

ಶೇಡಬಾಳ 04: ಶಿವಶರಣ ಹಡಪದ ಅಪ್ಪಣ್ಣನವರ 889ನೇ ಜಯಂತ್ಯೋತ್ಸವ ಹಾಗೂ ಕಾಗವಾಡ ತಾಲೂಕಾ ಹಡಪದ ಸಮಾಜದ ಬೃಹತ್ ಸಮಾವೇಶ ಕಾರ್ಯಕ್ರಮ ಇತ್ತೀಚಿಗೆ ಉಗಾರ ಖುರ್ದ ಪಟ್ಟಣದಲ್ಲಿ ವಿಜೃಂಭಣೆಯಿಂದ ಜರುಗಿತು.

ಶಿವಶರಣ ಹಡಪದ ಅಪ್ಪಣ್ಣಾ ಸಮಾಜ ಸೇವಾ ಸಂಘ ತಾಲೂಕಾ ಕಾಗವಾಡ ಇವರ ಆಶ್ರಯದಲ್ಲಿ ಉಗಾರ ಖುರ್ದ ಪಟ್ಟಣದ ಹನುಮಾನ ಮಂದಿರದ ಪ್ರಾಂಗಣದಲ್ಲಿ ಜರುಗಿದ ಈ ಬೃಹತ್ ಸಮಾವೇಶದಲ್ಲಿ ಸುಕ್ಷೇತ್ರ ತಂಗಡಗಿಯ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು, ವಿಜಯಪೂರ ಜ್ಞಾನಯೋಗಾಶ್ರಮದ ಬಸವಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ವಹಿಸಿದ್ದರು. ಮುಂ. 8ಗಂಟೆಗೆ ಅಪ್ಪಣ್ಣನವರ ಭಾವಚಿತ್ರಕ್ಕೆ, ಜಗಜ್ಯೋತಿ ಬಸವೇಶ್ವರ ಅಶ್ವಾರೂಢ ಪುತ್ಥಳಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಸುಮಂಗಲೆಯರ ಪೂರ್ಣ ಕುಂಭಮೇಳದೊಂದಿಗೆ ವಿವಿಧ ವಾದ್ಯ ವೈಭವದೊಂದಿಗೆ ಮೆರವಣಿಗೆ ಜರುಗಿ ಹನುಮಾನ ಮಂದಿರದವರೆಗೆ ಬಂದು ಸಭೆಯಾಗಿ ಮಾರ್ಪಟ್ಟಿತು.

ಭಾರತಿ ಅಪ್ಪಣ್ಣ ಮಹಾಸ್ವಾಮಿಜಿಗಳು ಮಾತನಾಡಿ 14 ಲಕ್ಷ ಜನಸಂಖ್ಯೆ ಹೊಂದಿರುವ ನಮ್ಮ ಸಮಾಜವು ಅಲ್ಪಸಂಖ್ಯಾತವಾಗಿದ್ದು, ಸಕರ್ಾರ ಈ ಸಮುದಾಯಕ್ಕೆ ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಹೆಚ್ಚಿನ ಒಲವು ನೀಡುವಂತೆ ಒತ್ತಾಯಿಸಿದರು.  ಕಾಗವಾಡ ಶಾಸಕ ರಾಜು ಕಾಗೆ ಅವರ ಬಳಿ ಮನವಿ ಮಾಡಿಕೊಂಡು ಹಡಪದ ಸಮಾಜಕ್ಕೆ ಉಗಾರ ಖುರ್ದ ಪಟ್ಟಣದಲ್ಲಿ 20 ಗುಂಟೆ ಜಾಗ ನೀಡುವಂತೆ ಮನವಿ ಮಾಡಿಕೊಂಡರು. 

ಮನವಿಗೆ ಸ್ಪಂದಿಸಿ ಶಾಸಕ ರಾಜು ಕಾಗೆ ಮಾತನಾಡುತ್ತಾ ಗ್ರಾಮದ ಸುತ್ತಮುತ್ತಲಿನ ಪರಿಸರದಲ್ಲಿ ಯಾವುದಾದರೂ ಸಕರ್ಾರಿ ಜಾಗ ಇದ್ದರೆ ನನಗೆ ತಿಳಿಸಿ ಅದನ್ನು ತತಕ್ಷಣವೇ ನಿಮ್ಮ ಸಮಾಜಕ್ಕೆ ಮಂಜೂರಾತಿ ಮಾಡುವುದಾಗಿ ಭರವಸೆ ನೀಡಿದರು. 

ಸುಭಾಸ ಶೇವಾಳೆ ಮಹಾರಾಜರು, ಅಖಿಲ ಕನರ್ಾಟಕ ಹಡಪದ ಸಮಾಜದ ರಾಜ್ಯಾಧ್ಯಕ್ಷ ಸಿದ್ದಣ್ಣ ಹಡಪದ, ಉಪಾಧ್ಯಕ್ಷ ಸಂತೋಷ ಹಡಪದ, ಕಾಯರ್ಾಧ್ಯಕ್ಷ ಬಸವರಾಜ ಹಡಪದ, ಜಿಲ್ಲಾಧ್ಯಕ್ಷ ಸುರೇಶ ಹಡಪದ, ವಿಜಯಪೂರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಭೀಮಪ್ಪ ನಾವ್ಹಿ ಮೊದಲಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಾಗವಾಡ ತಾಲೂಕಾ ಅಧ್ಯಕ್ಷರು ಹಾಗೂ ಬೆಳಗಾವಿ ಜಿಲ್ಲಾ ಸಂಘಟನೆಯ ಕಾರ್ಯದಶರ್ಿ ಅನಿಲ ನಾವಲಿಗೇರ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ಅಂಗವಾಗಿ ನಿವೃತ್ತ ಯೋಧರ, 10 ನೇ ಹಾಗೂ ಪಿ.ಯು.ಸಿ. ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸಮಾಜದ ವಿದ್ಯಾಥರ್ಿಗಳ ಸನ್ಮಾನ ಕಾರ್ಯಕ್ರಮ, ಶ್ರೀಕಾಂತ ನಾವ್ಹಿ ತಂಡದಿಂದ ಭಜನಾ ಕಾರ್ಯಕ್ರಮ ಜರುಗಿದವು.

ಕಾಗವಾಡ ತಾಲೂಕಾ ಅಧ್ಯಕ್ಷ ಅನಿಲ ನಾವಲಗೇರ, ಅಥಣಿ ತಾಲೂಕಾ ಅಧ್ಯಕ್ಷ ಶಿವಾನಂದ ಹುನ್ನೂರ, ಉಗಾರ ಖುರ್ದ ಸಮಾಜದ ಉಪಾಧ್ಯಕ್ಷ ವಿನಾಯಕ ಹಡಪದ, ಸಾಗರ ನಾವ್ಹಿ, ರಾಹುಲ ನಾವ್ಹಿ, ಶೀತಲ ನಾವ್ಹಿ, ಅಭಯ ನಾವ್ಹಿ, ಗುಂಡು ನಾವ್ಹಿ, ಶಿವಲಿಂಗ ಸಾವಳಗಿ, ಶ್ರೀಕಾಂತ ಹಡಪದ, ಗಜಾನನ ಜಾಧವ, ದತ್ತಾ ಜಾಧವ, ಶಂಭಾ ಮೋಹಿತೆ, ಗಜಾನನ ನಾವ್ಹಿ, ಅಪ್ಪು ನಾವ್ಹಿ, ಪ್ರವೀಣ ನಾವಲಿಗೇರ, ಶಿವಕುಮಾರ ನಾವ್ಹಿ, ಉಮೇಶ ನಾವ್ಹಿ, ಶಂಕರ ನಾವ್ಹಿ, ರಾಜು ಕೋರೆ, ಪ್ರವೀಣ ಕಟ್ಟಿಮನಿ ಸೇರಿದಂತೆ ತಾಲೂಕಿನ ಪ್ರತಿ ಗ್ರಾಮಗಳಿಂದ ಸರ್ವ ಸಮಾಜದ ಮುಖಂಡರು ಹಡಪದ ಸಮಾಜದ ಸ್ತ್ರೀ ಪುರುಷರು ಉಪಸ್ಥಿತರಿದ್ದರು 

ಸುದ್ದಿ ಓದಿ