ಅನುಗ್ರಹ ಯೋಜನೆ ಪುನಹ ಪ್ರಾರಂಭವಾಗಿದೆ- ಪ್ರಕಾಶ್ ಕೋಳಿವಾಡ
ರಾಣೇಬೆನ್ನೂರು:ಅ 8 ಬಿಜೆಪಿ ಸರ್ಕಾರದಲ್ಲಿದ್ದಾಗ ಅನುಗ್ರಹ ಯೋಜನೆಯ ಅಡಿಯಲ್ಲಿ ಕುರಿಗಾರರ ಕುರಿಗಳಿಗೆ ಸಾವನ್ನಪ್ಪಿದರೆ ಅದರ ಪರಿಹಾರವನ್ನು ಬಂದ್ ಮಾಡಿತ್ತು. ಈಗ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅನುಗ್ರಹ ಯೋಜನೆಯನ್ನು ಮತ್ತೆ ಜಾರಿಗೆ ತಂದಿದೆ. ಮೊದಲ ಬಾರಿಗೆ ನಗರದಲ್ಲಿ ಸಾವನ್ನಪ್ಪಿದ ಕುರಿಗಳಿಗೆ ಪರಿಹಾರ ಒದಗಿಸಲು ಸರ್ಕಾರದ ಜೊತೆಗೆ ನೇರವಾಗಿ ಮಾತನಾಡಿ ಹಾವೇರಿ ಜಿಲ್ಲೆಯಿಂದಲೇ ಕುರಿಗಾರರಿಗೆ ರಾಜ್ಯಾದ್ಯಂತ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.
ನಗರದ ಹಲಗೇರಿ ರಸ್ತೆಯಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಕುರಿಗಾಹಿಗೆ ಪರಿಹಾರ ಆದೇಶ ಪತ್ರ ವಿತರಣಾ ಹಾಗೂ ಶಾಸಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರದ ಒರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 48ರ ಮಾಗೋಡ ಕ್ರಾಸ್ ಬಳಿ ವಿಷಪೂರಿತ ಕುರು ಕುರಿಯನ್ನು ಸೇವನೆ ಮಾಡಿ 32 ಕುರಿ ಸಾವನ್ನಪ್ಪಿದವು ಅದರ ಪರಿಹಾರಕ್ಕೆ ಕುರಿಗಾರರ ಜೊತೆಗೆ ನೇರವಾಗಿ ಸಂಪರ್ಕವಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಚೇರಿಗೆ ನಿಯೋಗ ಕರೆದುಕೊಂಡು ಹೋಗಿ ಪರಿಹಾರ ಕೊಡಿಸಲು ಎಲ್ಲರೂ ಸಹಕಾರ ನೀಡಿದ್ದಾರೆ.ಅದರಲ್ಲಿ ಮೃತ್ಯುಂಜಯ ಗುದಿಗೇರ ಪಾತ್ರ ದೊಡ್ಡದಾಗಿದೆ. ಈಗ 31 ಕುರಿ 1 ಮೇಕೆ ಸಾವನ್ನಪ್ಪಿದ ಪರಿಹಾರವನ್ನು ರಾಜ್ಯ ಸರ್ಕಾರ ಸಂಬಂಧಪಟ್ಟ ಇಲಾಖೆಯಿಂದ 1.60 ಲಕ್ಷ ರೂಪಾಯಿ ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ. ಸರಕಾರದ ಆದೇಶ ಪತ್ರವನ್ನು ಕುರಿಗಾಹಿ ಸೋಮಪ್ಪ ಕುರುವತ್ತಿ ಅವರಿಗೆ ನೀಡಲಾಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಮೂಲಕ ಅಭಿನಂದನೆಗಳನ್ನು ತಿಳಿಸುತ್ತೇನೆ.
ತಾಲೂಕಿನಲ್ಲಿ ಕುರಿಗಾರರಿಗೆ ಯಾವುದೇ ಕಾರಣಕ್ಕೂ ಅವರ ಕಷ್ಟದ ಸಮಯದಲ್ಲಿ ಭಾಗಿಯಾಗಿ ಅವರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಮುಂದಿನ ದಿನಗಳಲ್ಲಿ ಬರಗಾಲ ಬರುತ್ತದೆ ಕೆಲವು ಬೇಡಿಕೆಯನ್ನು ಇಟ್ಟಿದ್ದಾರೆ. ಕುರಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಮೇವಿನ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರ ಸಂಘದ ಮಹಾಮಂಡಳಿ ನಿಗಮದ ನಿರ್ದೇಶಕರಾದ ಜೆ ಜಯಪ್ಪ ಅವರು ಮಾತನಾಡಿ, ರಾಜ್ಯದಲ್ಲಿ ಮಹಾಮಂಡಳಿಯಿಂದ ತುಮಕೂರು, ಮೂಳಬಾಗಿಲು ಕ್ಷೇತ್ರದಲ್ಲಿ ಎರಡು ಕುರಿ ಕಸಾಯಿ ಖಾನೆಗಳನ್ನು ತೆರೆಯಲು ಸರ್ಕಾರ ಈಗಾಗಲೇ ಆದೇಶವನ್ನು ಹೊರಡಿಸಿದೆ. ಜೊತೆಗೆ ರಾಜ್ಯದಲ್ಲಿ ಎಪಿಎಂಸಿ ಕುರಿ ಮಾರುಕಟ್ಟೆಯಲ್ಲಿ ಸರ್ಕಾರದಿಂದ ವಸುಲಾತಿ ಶುಲ್ಕವನ್ನು ಐದು ರೂಪಾಯಿ ತೆಗೆದುಕೊಳ್ಳಲು ಮಹಾಮಂಡಳಿಗೆ ನೀಡಿದ್ದು. ಎಪಿಎಂಸಿಗೆ ಹಾಗೂ ಕುರಿಗಳ ತೂಕ ಮಾಡಲು ಇಲೆಕ್ಟ್ರಾನಿಕ್ ಮಿಷನ್ ವ್ಯವಸ್ಥೆಯನ್ನು ಮಾರಾಟಗಾರರಿಗೆ ಮಾಡಲು ಅನುಮತಿಯನ್ನು ಸರ್ಕಾರ ಈಗಾಗಲೇ ನೀಡಿದೆ. ಕುರಿಗಾರರು ಮೋಸ ಹೋಗದಂತೆ ತೂಕದ ವ್ಯವಸ್ಥೆಯನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಮಾಡಲು ಸರ್ಕಾರಕ್ಕೆ ಮನವಿ ನೀಡಿದ್ದೇವೆ.ಅದು ಕೂಡ ಶೀಘ್ರದಲ್ಲೇ ಆಗುತ್ತದೆ. ರಾಜ್ಯದ ಕುರಿಗಾರರ ಕುರಿಗಳಿಗೆ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಲಿದೆ ಎಂದರು.
ಕಾಂಗ್ರೆಸ್ ಲೀಗಲ್ ಸೆಲ್ ಮತ್ತು ವಕೀಲರಾದ ಮೃತ್ಯುಂಜಯ ಗುದಿಗೇರ ಮಾತನಾಡಿ, ಕಳೆದ ಮೂರು ತಿಂಗಳ ಹಿಂದೆ ನಗರದಲ್ಲಿ ಒರವಲಯದಲ್ಲಿ ವಿಷಪೂರಿತ ಆಹಾರವನ್ನು ತಿಂದ ಕುರಿಗಳ ಸಾವಿನ ಸಮಯದಲ್ಲಿ ಎಲ್ಲಾ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಎಫ್ ಐ ಆರ್ ಮಾಡಿದಾಗ 32 ಕುರಿಗಳು ಸಾವನ್ನಪ್ಪಿದ್ದವು. ಕುರಿಗಾರ ಸೋಮಪ್ಪ ಕುರುವತ್ತಿ ಅವರಿಗೆ ಸರ್ಕಾರದಿಂದ ಅನುಗ್ರಹ ಯೋಜನೆ ಅಡಿಯಲ್ಲಿ ಶಾಸಕರ ಬಹಳಷ್ಟು ಶ್ರಮವಹಿಸಿ ಅನುದಾನವನ್ನು ಬಿಡುಗಡೆ ಮಾಡಿಸಲು ಎಲ್ಲರ ಸಹಕಾರ ಮುಖ್ಯವಾಗಿತ್ತು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಹೋಗಿ ಕ್ಷೇತ್ರದ ಕುರಿಗಾರರ ಸಮಸ್ಯೆಗಳ ಬಗ್ಗೆ ಹೇಳಿ ಅದರ ಸಂಬಂಧಪಟ್ಟ ಇಲಾಖೆಗಳಿಗೆ ಆದೇಶ ಮಾಡುವಂತೆ ನಿರಂತವಾಗಿ ಸಂಪರ್ಕದಲ್ಲಿದ್ದು ಅದೇ ಎಂದು ಕುರಿಗಾರಿಕೆ ಆದೇಶ ಮಾಡಿ ಸರ್ಕಾರ ಅವರಿಗೆ ಹಣ ಬಿಡುಗಡೆ ಮಾಡಿದೆ ಈ ಮೂಲಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ತಾಲೂಕಿನ ಎಲ್ಲಾ ಕುರಿಗಾಯಿಗಳಿಂದ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ನಮ್ಮ ಶಾಸಕರು ವಿಧಾನಸಭಾ ಅಧಿವೇಶನದಲ್ಲಿ ಕುರಿಗಾರ ಸಮಸ್ಯೆ ಬಗ್ಗೆ ಚರ್ಚಿಸಿದರು. ಹಾಗೂ ಹಾವೇರಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಅವರಿಗೆ ಶಾಸಕರು ಗಮನಕ್ಕೆ ತಂದರು ಕೂಡಲೇ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ತಾಕಿತು ಮಾಡಿ ಆದೇಶವನ್ನು ಹೊರಡಿಸಲು ತಿಳಿಸಿದ್ದರು.ಎಂದರು.
ಪ್ರೊ,ಹೆಚ್. ಎಂ.ದೊಡ್ಡ ಬಿಲ್ಲ ನಿರೂಪಿಸಿದರು.
ವೇದಿಕೆಯಲ್ಲಿ ತಾಲೂಕು ಕುರುಬ ಸಂಘದ ಅಧ್ಯಕ್ಷ ಷಣ್ಮುಖಪ್ಪ ಕಂಬಳಿ, ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ, ಡಾ ನೀಲಕಂಠಪ್ಪ ಅಂಗಡಿ, ರಾಣೇಬೆನ್ನೂರು ಪಶುಸಂಗೋಪನ ಇಲಾಖೆಯ ಅಧಿಕಾರಿ ರಾಘವೇಂದ್ರ ಕಿತ್ತೂರ, ಪಶು ಸಂಗೋಪನ ಅಧಿಕಾರಿ ಡಾ: ಪರಮೇಶಪ್ಪ ಹುಬ್ಬಳ್ಳಿ, ಆನಂದ್ ಹುಲ್ಲಬನಿ, ಚಂದ್ರು ಕದರಮಂಡಲಗಿ, ನಿಂಗರಾಜ್ ಹುಲಿಹಳ್ಳಿ ಮರಿಯಪ್ಪ ಪೂಜಾರ್, ಸಿದ್ದಣ್ಣ ಬಾಗಲರ, ಗುರುರಾಜ್ ಕಂಬಳಿ, ಚಂದ್ರಶೇಖರ್ ಕಂಬಳಿ ಭೀಮಪ್ಪ ಬಾಗಲರ, ದಿಳ್ಳಪ್ಪ ಅಣ್ಣೆರ, ಬೀರೇಶ ಪೂಜಾರ, ಸಿದ್ದಪ್ಪ ಹಳ್ಳಳ್ಳಿ,,ಬಸಣ್ಣ ಕಂಬಳಿ, ಮಂಜುನಾಥ ಕಂಬಳಿ, ಮೂರ್ತ್ಯೆಪ್ಪ ಕಂಬಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸಾವು ನೋವಿನಲ್ಲಿ ಎಂದು ನಾನು ರಾಜಕೀಯ ಮಾಡುವುದಿಲ್ಲ. ಚುನಾವಣಾ ಬಂದಾಗ ಮಾತ್ರ ರಾಜಕೀಯ ಪಕ್ಷವನ್ನು ನೋಡಬೇಕು. ಒಮ್ಮೆ ಶಾಸಕನಾದ ಮೇಲೆ ಒಂದೆ ಪಕ್ಷದ ಶಾಸಕನಲ್ಲ, ಇಡೀ ತಾಲೂಕಿಗೆ ಶಾಸಕರಾಗಿರುತ್ತೇವೆ. ತಾಲೂಕಿನಲ್ಲಿ ಯಾರಿಗಾದರೂ ಅನ್ಯಾಯವಾದರೆ ಅವರಿಗೆ ಸ್ಪಂದಿಸದೆ ಇದ್ದರೆ ನನ್ನ ಶಾಸಕ ಸ್ಥಾನಕ್ಕೆ ನಾನು ಅನ್ಯಾಯ ಮಾಡಿದಂತೆ ಆಗುತ್ತದೆ. ನಮ್ಮ ತಂದೆಯವರನ್ನು 5 ಬಾರಿ ಶಾಸಕರನ್ನಾಗಿ ಮಾಡಲು ಕುರುಬ ಸಮಾಜದ ಶ್ರಮ ಬಹಳ ದೊಡ್ಡದಾಗಿದೆ. ನಮ್ಮ ತಂದೆ ಐದು ಬಾರಿ ಶಾಸಕರಾಗಿದ್ದೆ. ಇಂದು ನಾನು ಶಾಸಕನಾಗಲು ಸಾಧ್ಯವಾಗಿದೆ. 52 ವರ್ಷ ರಾಜಕೀಯದಲ್ಲಿ ಕುರುಬರ ಸಮಾಜದ ಪಾತ್ರ ಬಹುಮುಖ್ಯವಾಗಿದೆ ಎಂದರು.
ಪ್ರಕಾಶ ಕೋಳಿವಾಡ
ಶಾಸಕರು, ರಾಣೇಬೆನ್ನೂರು.