ಸರಕಾರಿ ಶಾಲಾ ನಂ 7ರಲ್ಲಿ ಬಾಲ್ಯ ವಿವಾಹ ವಿರೋಧಿ ದಿನಾಚರಣೆ
ರಾಣೇಬೆನ್ನೂರ 28: ನಗರದ ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನಂ7ರಲ್ಲಿ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಬಾಲ್ಯ ವಿವಾಹ ವಿರೋಧದ ದಿನ ಕಾರ್ಯಕ್ರಮ ನಡೆಯಿತು. ಶಾಲೆಯ ಪ್ರಧಾನ ಗುರು ಎಂ.ಬಿ.ಗುರ್ಪಳ್ಳವರ ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಕರಾದ ವಾಯ್. ಎಸ್.ಪಾಟೀಲ್, ಜಿ.ಎಚ್. ಮಳಗಿಮನಿ, ಎಸ್. ಹೆಚ್. ಕೆಂಚರೆಡ್ಡೇರ, ಪೂಜಾ ಕೋಡಿಹಳ್ಳಿ, ಎಸ್ ಸುಧೀಂದ್ರ ಸೇರಿದಂತೆ ಮತ್ತಿತರ, ಗಣ್ಯರು ಎಸ್. ಡಿ. ಎಂ. ಸಿ,ಸದಸ್ಯರು ಉಪಸ್ಥಿತರಿದ್ದರು.ಎಂ.ಎಫ್ ಚಕ್ರಸಾಲಿ ಸ್ವಾಗತಿಸಿ, ನಿರೂಪಿಸಿದರು. ಇನ್ನೂರ್ವ ಶಿಕ್ಷಕಿ ಆರ್.ಬಸಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಕ ಜಿ.ಜಿ. ಗವೇನವರ ವಂದಿಸಿದರು.