ಧಾರವಾಡ - ಹುಬ್ಬಳ್ಳಿ

ಅನಾಮಧೇಯ ವ್ಯಕ್ತಿ ಸಾವು

ಅನಾಮಧೇಯ ವ್ಯಕ್ತಿ ಸಾವು

ಧಾರವಾಡ 02: ಅನಾಮಧೇಯ ವ್ಯಕ್ತಿ ದಿ. 31ರಂದು ಧಾರವಾಡದ ಹಳೆಯ ಎಲ್‌.ಇ.ಎ ಕ್ಯಾಂಟೀನ್ ಮುಂದಿನ ಪೂಟ್‌ಬಾತ್ ಮೇಲೆ ಮಲಗಿಕೊಂಡಲ್ಲಿಯೆ ಮೃತಪಟ್ಟಿದ್ದು ಮೃತನ ವಾರಸುದಾರರು ಪತ್ತೆಯಾಗಿರುವುದಿಲ್ಲ. 

ಮೃತ ಅನಾಮಧೇಯ ಭಿಕ್ಷುಕನಾಗಿದ್ದು ಪುರುಷ ಅಂದಾಜು 50-55 ವರ್ಷ ವಯಸ್ಸು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲಾ. ಈತನು ಆ. 30ರಂದು ರಾತ್ರಿ 10.30 ಗಂಟೆಯಿಂದ 31ರಂದು ಮುಂಜಾನೆ 9ಗಂಟೆಯ ನಡುವಿನ ಅವಧಿಯಲ್ಲಿ ವಯೋ ಸಹಜವಾಗಿಯೋ ಅಥವಾ ಖಾಯಲೆಯಿಂದ ಬಳಲಿ ತುಂಬಾ ಅಶಕ್ತನಾಗಿ ಮೃತಪಟ್ಟಿದ್ದಾನೆ. 

ಎತ್ತರ 5.6 ಫುಟ್, ನೀಟಾದ ಮೂಗು ಕುತ್ತಿಗೆಯಲ್ಲಿ ಒಂದು ನರುಲೆ ಇರುತ್ತದೆ. ಮೈಮೇಲೆ ಹಳೆಯ ಬಿಳಿ ಬಣ್ಣದ ತುಂಬಾ ಹೊಲಸಾದ ಪೂಲ್ ತೋಳಿನ ಅಂಗಿ ಧರಿಸಿರುತ್ತಾನೆ.  

ಈ ಪ್ರಕಾರ ಚಹರೆಯುಳ್ಳ ಮೃತ ಅನಾಮಧೇಯ ಪುರುಷನ ಬಗ್ಗೆ ನಿಮ್ಮ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಮಾಹಿತಿ ಸಿಕ್ಕಲ್ಲಿ ಕೂಡಲೇ ಹುಬ್ಬಳ್ಳಿ-ಧಾರವಾಡ ಪೊಲೀಸ ಕಂಟ್ರೋಲ ರೂಮ್ ಗೆ/ ಧಾರವಾಡದ ಉಪನಗರ ಪೊಲೀಸ ಠಾಣೆಗೆ ತಿಳಿಸಲು ಕೋರಲಾಗಿದೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಂಟ್ರೋಲ ರೂಂ -  0836-2233555/100, ಉಪನಗರ ಪೊಲೀಸ ಠಾಣೆ ಧಾರವಾಡ  - 0836-2233511/9480802033 ಸಂಪರ್ಕಿಸಲು ಕೋರಲಾಗಿದೆ. 


ಸುದ್ದಿ ಓದಿ