ರಾಣೆಬೆನ್ನೂರ

ರಾಜ-ರಾಜೇಶ್ವರಿ ಕಲಾ, ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡಾಕೂಟ ಸಮಾರಂಭ

ರಾಜ-ರಾಜೇಶ್ವರಿ ಕಲಾ, ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡಾಕೂಟ ಸಮಾರಂಭ

ರಾಣಿಬೆನ್ನೂರ:24 ಕ್ರೀಡೆಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ.  ಕ್ರೀಡಾಪಟುಗಳು ಶಿಸ್ತನ್ನು ರೂಡಿಸಿಕೊಂಡರೆ ಮಾತ್ರ ಸಾಧನೆಯ ಉತ್ತುಂಗಕ್ಕೇರಲು ಸಾಧ್ಯ. ಗೆಲ್ಲಲು ಆಡಬೇಡಿ ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿ ಆಟವಾಡಬೇಕು ಎಂದು ಮುಂಡರಿಗಿಯ ಕೆ.ಆರ್ ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಮನೋಜ ಕೋಪರ್ಡೆ ಹೇಳಿದರು. 

ಸ್ಥಳೀಯ ಕೆ.ಎಲ್‌.ಇ. ಸಂಸ್ಥೆಯ, ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಏರಿ​‍್ಡಸಿದ್ದ  ವಾರ್ಷಿಕ ಕ್ರೀಡಾಕೂಟ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

ಕೆ.ಎಲ್‌.ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ವಿ.ಪಿ ಲಿಂಗನಗೌಡರ ಮಾತನಾಡಿ, ಉನ್ನತ ಶಿಕ್ಷಣವನ್ನು ಪಡೆದು ಭವ್ಯ ಭವಿಷತ್ತನ್ನು ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.    

ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ  ಬಿ.ಎಸ್‌. ಪಟ್ಟಣಶಟ್ಟಿ, ಜಯಣ್ಣ  ಜಂಬಗಿ, ಪ್ರಾಚಾರ್ಯ ಪ್ರೊ. ನಾರಾಯಣ ನಾಯಕ ಎ, ಪ್ರೊ ಸಾಯಿಲತಾ ಮಡಿವಾಳರ,  ಪೊ ್ರ.ಮಂಜಪ್ಪ ಸಣ್ಣಬಸಪ್ಪನವರ, ಸಂಗೀತಾ ಕಾಯಕದ,   ಭಾಗ್ಯವತಿ ದೇಶಪಾಂಡೆ,   ಶ್ರೇಯಾ ಬಣ್ಣದ,   ಪೂಜಾ ಪಾಟೀಲ,   ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು 


ಸುದ್ದಿ ಓದಿ