ಕಾಗವಾಡ

ಶೇಡಬಾಳ ಕೃಷಿ ಪತ್ತಿನ ಸಂಘದ ವಾರ್ಷಿಕ ಸಭೆ

ಶೇಡಬಾಳ ಕೃಷಿ ಪತ್ತಿನ ಸಂಘದ ವಾರ್ಷಿಕ ಸಭೆ

ಕಾಗವಾಡ 07: ರೈತರ ಪ್ರಾಮಾಣಿಕತೆ, ಸಿಬ್ಬಂದಿಗೆ ಸೇವಾ ಮನೋಭಾವನೆ ಹಾಗೂ ಆಡಳಿತ ಮಂಡಳಿಯ ಶುದ್ಧ ಹಸ್ತದ ಪರಿಣಾಮ ಪ್ರಸಕ್ತ ವರ್ಷ 41.45 ಲಕ್ಷ ರೂ. ನಿವ್ವಳ ಲಾಭವಾಗಿದೆ ಎಂದು ಹೇಳಲು ನನಗೆ ಹೆಮ್ಮೆಯನಿಸುತ್ತದೆ ಎಂದು ಸಂಘದ ಅಧ್ಯಕ್ಷ ಅಜೀತ ಸವದತ್ತಿ ಹೇಳಿದರು. 

ಕಾಗವಾಡ ತಾಲುಕಿನ ಶೇಡಬಾಳದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 77 ನೇಯ ವಾರ್ಷಿಕ ಸಭೆ, ಸನ್ಮತಿ ವಿದ್ಯಾಲಯದ ಸಭಾ ಭವನದಲ್ಲಿ ರವಿವಾರ ಸಂಜೆ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿ ಅಜೀತ ಸವದತ್ತಿ ಮಾತನಾಡಿದರು. ಸಂಘದ ಕಾರ್ಯನಿರ್ವಾಹಕ ಅಪ್ಪಾಸಾಬ ಕುಂಬಾರ ಇವರು ಸಂಘದ ಪ್ರಗತಿ ಬಗ್ಗೆ ಮಾಹಿತಿ ನೀಡುತ್ತ 41.45 ಲಕ್ಷ ರೂ. ಒಟ್ಟು ಲಾಭ ಹೊಂದಿದೆ ಎಂದರು. 

ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷ ಅಜೀತ ಸವದತ್ತಿ, ಉಪಾಧ್ಯಕ್ಷ ಅಶೋಕ ಮಾಕನ್ನವರ, ಸದಸ್ಯರಾದ ವಿನೋದ ಬರಗಾಲೆ, ಶ್ರೀಕಾಂತ ಮಾಲಗಾಂವೆ, ಸುನೀಲ ಪಾಟೀಲ, ದೆವೇಂದ್ರ ಚೌಗುಲೆ, ಅಣ್ಣಾಸಾಬ ಖಾಂಡೆ, ದೀಲೀಪ ಮಾಳಿ, ಪ್ರಭಾವತಿ ಕುಡಚೆ, ಪುಷ್ಪಾವತಿ ಎಂದಗೌಡರ, ಅಂಬಾಜಿ ಗೊಂಧಳಿ, ಅನೀಲ ಕಾಂಬಳೆ ಸೇರಿದಂತೆ ಅನೇಕ ಹಿರಿಯ ಸದಸ್ಯರು ಉಪಸ್ಥಿತರಿದ್ದರು. ಅಣ್ಣಾಸಾಬ ವಂದಿಸಿದರು. 


ಸುದ್ದಿ ಓದಿ