ವಾರ್ಷಿಕ ಸ್ನೇಹ ಸಮ್ಮೇಳನ: ಸಾಂಸ್ಕೃತಿಕ ಕಾರ್ಯಕ್ರಮ
ಲೋಕದರ್ಶನ ವರದಿ,
ಜಮಖಂಡಿ26: ದಿವಂಗತ ಸಿದ್ದಲಿಂಗಯ್ಯ ಕಂಬಿಯವರು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ 24 ವರ್ಷಗಳು ಸತತವಾಗಿ ಬಡ ವಿದ್ಯಾರ್ಥಿಗಳಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಜಿ, ಎಸ್, ನ್ಯಾಮಗೌಡ ಹೇಳಿದರು.
ನಗರದ ನಂದಿಕೇಶ್ವರ ಸಭಾ ಭವನದಲ್ಲಿ ನಂದಿಕೇಶ್ವರ ಚಾರಿಟಿ ಟ್ರಸ್ಟ್ ಜಮಖಂಡಿ ಸಂಸ್ಥೆಯ ಅಡಿಯಲ್ಲಿ ನಡೆದ ನಂದಿಕೇಶ್ವರ ವಿದ್ಯಾಭವನ ಪೂರ್ವ ಪ್ರಾಥಮಿಕ ಪ್ರಾಥಮಿಕ ಶಾಲೆಯ 24 ನೇ ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ಮಾತನಾಡಿದರು.
ಶಿಕ್ಷಣ ಸಂಯೋಜಕ ಸಂತೋಷ ತಳಕೇರಿ ಮಾತನಾಡಿ, ಸಂಸ್ಥೆಯ ಸಂಸ್ಥಾಪಕರು ದುರ್ಬಲ ವರ್ಗದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಇಂತಹ ಸಂಸ್ಥೆಗಳ ಅಗತ್ಯತೆ ಬಹಳ ಇದೆ. ಇಂತಹ ಸಂಸ್ಥೆಗಳಿಗೆ ಇಲಾಖೆಯು ಸಹಕಾರಿಯಾಗಿರುತ್ತವೆ ಎಂದರು.
ಮೌಲಾನಾ ಮಹಮ್ಮದ್ ಜುನೇದ್ ರಜಾ ಮಾತನಾಡಿ, ಈ ದಿನಮಾನಗಳಲ್ಲಿ ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸುವುದು ಬಹುದೊಡ್ಡ ಕಾರ್ಯ ಪಾಲಕರು ಹಾಗೂ ಪೋಷಕರ ಮೇಲಿರುತ್ತದೆ. ಎಲ್ಲರೂ ತಮ್ಮ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡುವ ದೃಷ್ಟಿಯಿಂದ ಶಿಕ್ಷಣ ಬಹುಮುಖ್ಯವಾದೆ ಎಂದರು.
ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತರಾದ ಶಿವಾಚಾರ್ಯರು ಆರ್ಶಿವಚನ ನೀಡಿದ ಅವರು, ಸಿದ್ದಲಿಂಗಯ್ಯ ಕಂಬಿಯವರ ಕೊಡುಗೆ ಸಮಾಜಕ್ಕೆ ಅಪಾರವಾದದ್ದು. ಅವರಂತೆಯೇ ಅವರ ಪತ್ನಿ ಹಾಗೂ ಮಕ್ಕಳು ಸಂಸ್ಥೆಯನ್ನು ಬೆಳೆಸುತ್ತಿರುವುದು ಗೌರವದ ವಿಷಯ. ಈ ಸಂಸ್ಥೆಯಿಂದ ಈಗಾಗಲೇ ಸಾಕಷ್ಟು ಜನ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದು. ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಹೊರ ಹೊಮ್ಮಲಿ ಎಂದು ಆಶಿರ್ವಚನ ನೀಡಿದರು.
ವೇದಿಕೆಯ ಮೇಲೆ ಶಂಕ್ರಯ್ಯ ಕಂಬಿ, ಮೂಲಸಿದ್ಧ ಕ್ಷೇತ್ರದ ಸಿದ್ದಮುತ್ಯಾ, ಪತ್ರಕರ್ತರಾದ ಶಿವಾನಂದ ಕೊಣ್ಣೂರ, ವಿಜಯಕುಮಾರ ಶಿವಶಿಂಪಿ ಇದ್ದರು. ಶಿಕ್ಷಕಿ ಕುಮಾರಿ ಚಂದ್ರಿಕಾ ಗೆಣ್ಣೂರ ಸ್ವಾಗತಿಸಿದರು, ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನಿಸಿ,ಸಾಗತಿಸಿದರು, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀಧರ ಕಂಬಿ ವಂದಿಸಿದರು.