ಕಾಗವಾಡ

ಸಹಕಾರಿ ಸಂಸ್ಥೆಯ ವಾರ್ಷಿಕ ದಿನಾಚರಣೆ

ಸಹಕಾರಿ ಸಂಸ್ಥೆಯ ವಾರ್ಷಿಕ ದಿನಾಚರಣೆ

ಕಾಗವಾಡ 29: ಕಾಗವಾಡ ತಾಲೂಕಿನ ಉಗಾರ ಖುರ್ದ (ಲಕ್ಷ್ಮೀನಗರ) ಬಾಲಕ ಮಹಿಳಾ ಸಹಕಾರಿ ಸಂಸ್ಥೆ ಶೋಷಿತ ಮಹಿಳೆಯರಿಗೆ ನ್ಯಾಯ ಒದಗಿಸಿದೆ ಎಂದು ಅಧ್ಯಕ್ಷೆ ಮತ್ತು ಉದ್ಯಮಿ ಸ್ಮೀತಾತಾಯಿ ಪ್ರಫೂಲ್ ಶಿರಗಾಂವಕರ ಹೇಳಿದರು.

ಉಗಾರ ಖುರ್ದ ಸಕ್ಕರೆ ಕಾರ್ಖಾನೆ ಸಭಾ ಭವನದಲ್ಲಿ ಬಾಲಕ ಮಹಿಳಾ ಸಹಕಾರಿ ಸಂಸ್ಥೆಯ ಪ್ರಥಮ ವಾರ್ಷಿಕ ದಿನ ಎಂದು ಆಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಕಾಗವಾಡ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಸಿದ್ರಾಮ ಮೋಟಗಿ(ಗುರುಗಳು) ಮಾತನಾಡಿದರು.

ಇಂಗಳಿ ಗ್ರಾಮದ ಇಂಗಳಿಕರ ಮಹಾರಾಜ, ಅಥಣಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಮಹಾಂತೇಶ ಉಕಲಿ, ಉಗಾರ ಪುರಸಭೆ ಸದಸ್ಯ ನಂದಿಣಿ ಫರಾಕಟ್ಟೆ, ಕೀರ್ತಿ ಸರದೇಸಾಯಿ, ಸ್ನೇಹಲ್ ಥೋರುಶೆ, ಉಜ್ವಲಾ ಶೆಟ್ಟಿ, ಚಿಕ್ಕೋಡಿ ಶಿವಸೇನಾ ಅಧ್ಯಕ್ಷ ದಾದಾಸಾಹೇಬ ಪಾಟೀಲ, ರೂಪಾಲಿ ಪಾಟೀಲ, ಸೇರಿದಂತೆ ಅನೇಕರು ಇದ್ದರು.

ಸುದ್ದಿ ಓದಿ