ಸಾಂಗಲಿಯ ಸಮರ್ಥ ನ್ಯೂರೋ, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ವಾರ್ಷಿಕೋತ್ಸವ
ಕಾಗವಾಡ 31: ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದ ಗ್ರಾಮೀಣ ಪ್ರದೇಶದಲ್ಲಿಯ ಮೆದುಳು ಮತ್ತು ನರರೋಗಕ್ಕೆ ಸಂಬಂಧಿಸಿದ ರೋಗಿಗಳಿಗೆ ಕಳೆದ 7 ವರ್ಷಗಳಿಂದ ಸಮರ್ಥ ಆಸ್ಪತ್ರೆಯ ಮಾಧ್ಯಮದಿಂದ ಆತ್ಯಾಧುನಿಕ ಸೇವೆ ನೀಡುತ್ತಿರುವ ಡಾ. ರವೀಂದ್ರ ಪಾಟೀಲ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಸಾಂಗಲಿ-ಮಿರಜ್-ಕುಪವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಶುಭಂ ಗುಪ್ತಾ ಅಭಿಪ್ರಾಯ ಪಟ್ಟಿದ್ದಾರೆ.
ಸೋಮವಾರ ದಿ. 30 ರಂದು ಸಾಂಗಲಿ ನಗರದ ಸಮರ್ಥ ನ್ಯೂರೋ ಮತ್ತು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ 7 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಧಕರಿಗೆ ‘ಸಮರ್ಥ ಸಾಂಗಲಿಕರ’ ಪುರಸ್ಕಾರ, ‘ಸಮರ್ಥ ಹೆಲ್ತ ಕಾರ್ಡ’ಗೆ ಚಾಲನೆ, ವಿತರಣೆ ಮತ್ತು ಉಚಿತ ಆರೋಗ್ಯ ಶಿಬಿರದಕ್ಕೆ ಚಾಲನೆ ನೀಡಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡುತ್ತಿದ್ದರು. ಡಾ. ರವೀಂದ್ರ ಪಾಟೀಲ ಅವರು 2015 ರಲ್ಲಿ ನ್ಯೂರೋ ಸರ್ಜರಿ ವೈದ್ಯಕೀಯ ಪದವಿ ಪಡೆದು, ಪುನಾ ಮಹಾನಗರದ ಪಿಂಪ್ರಿ-ಚಿಂಚವಡ ಭಾಗದಲ್ಲಿ ರೋಗಿಗಳಿಗೆ ಸೇವೆ ನೀಡಲು ಪ್ರಾರಂಭಿಸಿ, ಮಿರಜ-ಸಾಂಗಲಿ ಮಹಾನಗರದಲ್ಲಿ ಅತ್ಯಂತ ಕ್ಲಿಷ್ಟಕರವಾದ ನರ ಮತ್ತು ಮೆದುಳು ಶಸ್ತ್ರಚಿಕಿತ್ಸೆ ಸೇವೆ ಇಲ್ಲದಿರುವುದನ್ನು ಮನಗೊಂಡು, ಸಮರ್ಥ ಆಸ್ಪತ್ರೆಯನ್ನು ಇಲ್ಲಿ ಪ್ರಾರಂಭಿಸಿ, ಈ ಭಾಗದ ರೋಗಿಗಳಿಗೆ ್ರ್ರಥಮ ಬಾರಿಗೆ ಅತ್ಯಾಧುನಿಕ ಯಂತ್ರೋಪಕರಣಗಳ ಮುಖಾಂತರ ಹೈ ರಿಸ್ಕ್ ಆಪರೇಶನ್ ಮಾಡಲು ಪ್ರಾರಂಭಿಸಿ, ಈ ಭಾಗದ ಮೆದುಳು ರೋಗಿಗಳಿಗೆ ವರದಾನವಾಗಿದ್ದಾರೆ. ಅವರಿಗೆ ಅವರ ಪತ್ನಿ ಡಾ. ಶಿಲ್ಪಾ ಪಾಟೀಲ ಸಾಥ ನೀಡುತ್ತಿದ್ದಾರೆ. ಈ ಭಾಗದ ರೋಗಿಗಳಿಗೆ ಅವರ ಸೇವೆ ನಿರಂತರಾಗಿರಲಿ ಎಂದು ಶುಭ ಕೋರಿದರು.
ನಂತರ ಡಾ. ರವೀಂದ್ರ ಪಾಟೀಲ ಮಾತನಾಡಿ, ಮೊದಲು ಕೇವಲ 30 ಹಾಸಿಗೆಯ ಆಸ್ಪತ್ರೆ ಪ್ರಾರಂಭಿಸಿ, ಈಗ 80 ಹಾಸಿಗೆಗೆ ಅದನ್ನು ವಿಸ್ತರಿಸಿ, ಮೆದುಳು ರೋಗ, ಬೆನ್ನುಮೂಳೆ, ಅಪಘಾತ ಮತ್ತು ಕ್ರಿಟಿಕಲ್ ಕೆರ್, ಪಿಡ್ರಿಯಾಟಿಕ್ ನ್ಯೂರಾಲಜಿ, ಪ್ಲಾಸ್ಟಿಕ್ ಸರ್ಜರಿ, ಜನರಲ್ ಮೆಡಿಸನ್, ಚಿಕ್ಕ ಮಕ್ಕಳ ವಿಭಾಗ, ಮಹಿಳಾ ವಿಭಾಗ, ಫಿಜಿಯೋಥೆರಪಿ, ಏಕ್ಸರೇ, ಸಿಟಿಸ್ಕ್ಯಾನ್, ಲಾಬರೋಟರಿದಂತಹ ಅತ್ಯಾಧುನಿಕ ಸೇವೆಗಳನ್ನು ನೀಡಲಾಗುತ್ತಿದೆ. ಕಳೆದ 6 ವರ್ಷಗಳಲ್ಲಿ ಸುಮಾರು 25 ಸಾವಿರ ಹೊರರೋಗಿಗಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಸುಮಾರು 10 ಸಾವಿರ ಯಶಸ್ವಿ ಶಸ್ತ್ರಚಿಕಿತೆಗಳನ್ನು ಮಾಡಲಾಗಿದೆ ಎಂದರು. ಇದಲ್ಲದೇ ನೂತನವಾಗಿ ‘ಸಮರ್ಥ ಹೆಲ್ಥ ಕಾರ್ಡ’ನ್ನು ಪ್ರಾರಂಭಿಸಿದ್ದು, ರೋಗಿಗಳು ಇದರ ಲಾಭ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಮಯದಲ್ಲಿ ಸಾಂಗಲಿ ಸ್ವಚ್ಛತೆಯ ದೂತ ರಾಕೇಶ ದೊಡ್ಡನ್ನವರ ಅವರಿಗೆ ‘ಸಮರ್ಥ ಸಾಂಗಲಿಕರ’ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು.
ಶುಭಂ ಗುಪ್ತಾ, ಡಾ. ರವೀಂದ್ರ ಪಾಟೀಲ, ಡಾ. ಶಿಲ್ಪಾ ಪಾಟೀಲ, ಉದ್ಯೋಮಿ ಸುಶೀಲ ಹಡದರೆ, ಬಾಪು ಪಾರಗಾಂವಕರ, ರಾಕೇಶ ದೊಡ್ಡನ್ನವರ ಸೇರಿದಂತೆ ವೈದ್ಯಕೀಯ ಕ್ಷೇತ್ರದ ಗಣ್ಯರು, ಸುತ್ತಮುತ್ತಲಿನ ಗ್ರಾಮಗಳ ಮುಖಂಡರು, ಸಮರ್ಥ ಆಸ್ಪತ್ರೆಯ ವೈದ್ಯಕೀಯ ಮತ್ತು ಇತರೇ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.