ರಾಣೆಬೆನ್ನೂರ

ಸಂಭ್ರಮದಿಂದ ಜರುಗಿದ ಆಂಜನೇಯ ಸ್ವಾಮಿ ಶ್ರಾವಣ ಸಮಾರೋಪ

ಸಂಭ್ರಮದಿಂದ ಜರುಗಿದ ಆಂಜನೇಯ ಸ್ವಾಮಿ ಶ್ರಾವಣ ಸಮಾರೋಪ

ರಾಣೇಬೆನ್ನೂರು 18: ಶ್ರಾವಣ ಮಾಸದ ಅಂಗವಾಗಿ ತಾಲೂಕಿನ ಹುಲ್ಲತ್ತಿ ಗ್ರಾಮದ ಆಂಜನೇಯ ದೇವರಿಗೆ ಕ್ಷೇತ್ರದ ವ್ಯಾಪಾರಸ್ಥರು ಹಾಗೂ ಸ್ಥಳೀಯ ಜನರು ಸೇರಿ ವಿಶೇಷ ವಿವಿಧ ಹೋಮಗಳನ್ನು ದೇವಾಲಯದಲ್ಲಿ ನೆರವೇರಿಸಲಾಯಿತು. ಜೊತೆಗೆ ಶ್ರಾವಣ ಮಾಸದ ಕೊನೆ ಶನಿವಾರ ಆಗಿದ್ದರಿಂದ ಆಂಜನೇಯ ದೇವಸ್ಥಾನದಲ್ಲಿ ಗೋಪಾಳ, ಪಡ್ಲಿಗೆಯನ್ನು ತುಂಬಿಸಲಾಯಿತು. ಶ್ರಾವಣ ಮಾಸದಲ್ಲಿ ಆಂಜನೇಯ ಉತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.ಶ್ರಾವಣ ಮಾಸದ ನಿಮಿತ್ಯ ದರ್ಶನಕ್ಕೆ ಬರುವಂತಹ ಭಕ್ತರಿಗೆ ವಿಶೇಷವಾಗಿ ಉತ್ತರ ಕರ್ನಾಟಕದ ಹೋಳಿಗೆ ಮತ್ತು ಅನ್ನ ಸಂತರೆ​‍್ಣಯ ಸೇವೆಯನ್ನು ಮಾಡಿದ್ದರು.ಕಾರ್ಯಕ್ರಮದಲ್ಲಿ ಮಂಜುನಾಥ ಕೆರೊಡಿ, ಕವಿತಾ ಕೆರೊಡಿ, ಯು, ಬಿ ಅಂಗಡಿ, ಜಗದೀಶ್ ಕೆರೋಡಿ,ಪುಟ್ಟವ್ವ ಓಲೇಕಾರ, ಮಂಜಣ್ಣ ಗುಗ್ಗರಿ, ಮಾರುತಿ ದೊಡ್ಡಮನಿ, ಪುಟ್ಟವ್ವ ಓಲೇಕಾರ, ಶಾಂತವ್ವ ಗುಲಗುಂದಿ, ಪುಟ್ಟಮ್ಮ ಕೆರೊಡಿ, ರಾಜು ಓಲೇಕಾರ,ಮಾಂತೇಶ ವಡ್ಡರ,ನೀಲವ್ವಹಳ್ಳಿ, ನಿಂಬವ್ವ ಗುತ್ತಲ, ಈರಣ್ಣ ಪೂಜಾರ,ನೀಲವ್ವ ಕಜ್ಜರಿ, ಪುಟ್ಟವ್ವ ಓಲೇಕಾರ,ಗೌರವ ಒಡ್ಡರ, ಮಲ್ಲಮ್ಮ ಕುಂಚೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು. 


ಸುದ್ದಿ ಓದಿ