ಕಾಗವಾಡ

ಅನಿಲಕುಮಾರ ಇರಾಜಗೆ ಪಿಎಚ್‌ಡಿ ಪದವಿ ಪ್ರದಾನ

ಅನಿಲಕುಮಾರ ಇರಾಜಗೆ ಪಿಎಚ್‌ಡಿ ಪದವಿ ಪ್ರದಾನ

ಕಾಗವಾಡ 28: ಮೂಲತಃ ತಾಲೂಕಿನ ಶೇಡಬಾಳ ಪಟ್ಟಣದ ಅನಿಲಕುಮಾರ ಬಾಬಾಸಾಹೇಬ ಇರಾಜ ಅವರು ವಿಜಯಪುರ ಜಿಲ್ಕೆಯ ತಾಳಿಕೋಟೆ ಪಟ್ಟಣದ ಪ್ರತಿಷ್ಠಿತ ಎಸ್‌ಕೆ ಜ್ಯೂನಿಯರ್ ಕಾಲೇಜಿನ ಅಧ್ಯಾಪಕರಾಗಿ 1992 ಸೇವೆ ಪ್ರಾರಂಭಿಸಿ, ನಿರಂತರ ಅಧ್ಯಯನದಲ್ಲಿ ತೊಡಗಿ ಎಂಎ., ಎಂಫಿಲ್, ಪಿಎಚ್‌ಡಿ ಮುಗಿಸಿದ್ದಾರೆ. 

ಇಂದೋರನ ಖ್ಯಾತ ಹಿಂದಿ ಕಾದಂಬರಿಕಾರ ಅಲೋಕ ಶರ್ಮಾರ ಕಾದಂಬರಿಗಳ ಮೇಲೆ ಅಧ್ಯಯನ ನಡೆಸಿ, ಧಾರವಾಡದ ಬಿಎಡ್‌. ಕಾಲೇಜಿನ ಪ್ರಾ. ಡಾ.ಸಿ.ಎಮ್‌. ಅಡಕಿ ಅವರ ಮಾರ್ಗದರ್ಶನದಲ್ಲಿ ಅವರು ಮಂಡಿಸಿದ "ಅಲೋಕ ಶರ್ಮಾಕೆ ಉಪನ್ಯಾಸ: ಸಮೀಕ್ಷಾತ್ಮಕ ಅಧ್ಯಯನ" ಪ್ರಬಂಧಕ್ಕೆ ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಡಾಕ್ಟರೇಟ್ ಪದವಿಯನ್ನು ನೀಡಿದೆ. 

ಸಾಹಿತಿ, ವಾಗ್ಮಿ, ಸಂಶೋಧಕ, ಮಿತಭಾಷಿ ಹಾಗೂ ವಿದ್ಯಾರ್ಥಿಗಳ ಮನಸ್ಸನ್ನು ಗೆದ್ದಿರುವ ಮತ್ತು ವಿದ್ವತ್ ಪೂರ್ಣ ಬೋಧನೆಯಿಂದ ಆದರ್ಶ ಶಿಕ್ಷಕರೆಂದು ಹೆಸರಮಾಡಿರುವ ಅವರಿಗೆ ಬೆಳಗಾವಿ ವಿಭಾಗಮಟ್ಟದ ಶ್ರೀ ಜ್ಞಾನೇಶ್ವರ ಮಹಾರಾಜರ ಆದರ್ಶ ಶಿಕ್ಷಕ ಪ್ರಶಸ್ತಿ, ಹಿಂದಿ ಶಿಕ್ಷಕ ರತ್ನ ಪ್ರಶಸ್ತಿ ಲಭಿಸಿವೆ. 

ಅವರಿಗೆ ಖ್ಯಾತ ವೈದ್ಯ ಡಾ.ಎ.ಬಿ. ಪಾಟೀಲ, ಕೃಷ್ಣಾ ಶಿಕ್ಷಣ ಅಭಿವೃದ್ಧಿ ಸಮಿತಿಯ ಸಂಸ್ಥಾಪಕ ಜೆ.ಎನ್‌. ನಾಂದನಿ, ಸನ್ಮತಿ ಶಿಕ್ಷಣ ಸಮಿತಿ ಅಧ್ಯಕ್ಷ ವಿನೋದ ಬರಗಾಲೆ, ಪ್ರೊ. ಅಪ್ಪಾಸಾಬ ನಾಂದನಿ, ಬಾಬಾಸಾಬ ಸೌದತ್ತಿ, ಸುರೇಶ ಅರವಾಡೆ, ದೇವೆಂದ್ರ ಚೌಗಲಾ, ವೃಷಭ ಚೌಗಲಾ, ವಿದ್ಯಾನಂದ ಇಂಗ್ಲಿಷ್ ಮಾಧ್ಯಮ ಶಾಲೆಯ ಅಧ್ಯಕ್ಷ ನಿರಂಜನ ನರಸಗೌಡರ ಹಾಗೂ ಗೆಳೆಯರು, ಶಾಂತಿ ಸಾಗರ ಆಶ್ರಮ ಮಂತ್ರಿಗಳಾದ ರಾಜು ನಾಂದ್ರೆ, ಶಿಕ್ಷಕ ಸುನೀಲ ಇರಾಜ ಅಭಿನಂದಿಸಿದ್ದಾರೆ. 

ಸುದ್ದಿ ಓದಿ