ಹೂವಿನ ಹಡಗಲಿ

6ನೇ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ

6ನೇ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ

ಲೋಕದರ್ಶನ ವರದಿ

ಹೂವಿನ ಹಡಗಲಿ 15: ಐದು ಗ್ಯಾರಂಟಿಗಳ ಬಗ್ಗೆ ಮಾತನಾಡುವ ಕಾಂಗ್ರೆಸ್ ಸರ್ಕಾರ ತಾವೇ ಘೋಷಿಸಿದ 6ನೇ ಗ್ಯಾರಂಟಿ ಏಕೆ ಜಾರಿಗೆ ತರುತ್ತಿಲ್ಲ.ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಿಸುವ ಬಗ್ಗೆ ಯಾಕೆ ಮಾತನಾಡುತ್ತಿಲ್ಲ.ಈ ಬಜೆಟ್ನಲ್ಲಿ ತಾವು ಕೊಟ್ಟ ಮಾತಿನಂತೆ ನಮ್ಮ ವೇತನ ಹೆಚ್ಚಿಸಿ ಆದೇಶ ಹೊರಡಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಎಐಟಿಯುಸಿ ಜಿಲ್ಲಾ ಸಂಚಾಲಕ ಕಾ.ಹಲಗಿ ಸುರೇಶ, ಅಂಗನವಾಡಿ ಕಾರ್ಯಕರ್ತೆಯರ,ಸಹಾಯಕಿಯರ ಫೆಡರೇಷನ್ ಅಧ್ಯಕ್ಷೆ ಜಯಲಕ್ಷ್ಮಿ ,ಕಾ.ಎನ್.ಮಂಜುಳಾ ಮಾತನಾಡಿ ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷದವರೂ ಅಂಗನವಾಡಿ ಕಾರ್ಯಕರ್ತೆಯರಿಗೆ 15ಸಾವಿರ ರೂ.ವೇತನ,ಸಹಾಯಕಿಯರಿಗೆ 10 ಸಾವಿರು ರೂ.ವೇತನ, ನಿವೃತ್ತಿಗೆ 3ಲಕ್ಷ ರೂ.ನೀಡುವ ಭರವಸೆಯನ್ನು ಸರ್ಕಾರ 6ನೇ ಗ್ಯಾರಂಟಿ ಘೋಷಿಸಿದ್ದು, ಕೂಡಲೇ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಬೇಡಿಕೆಯ ಮನವಿಯನ್ನು ತಹಶೀಲ್ದಾರರ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಂಗನವಾಡಿ ಫಡರೇಷನ ಮೂಲಕ ಸಲ್ಲಿಸಿದರು. ಎಐಟಿಯುಸಿ ರಾಜ್ಯ ಮಂಡಳಿ ಸದಸ್ಯೆ ಬಿ.ಕಮಲಾಕ್ಷಿ, ಸಂಘಟನೆ ಉಪಾಧ್ಯಕ್ಷೆ ಪಿ.ಚಂದ್ರಮ್ಮ,ಪ್ರಧಾನ ಕಾರ್ಯದರ್ಶಿ ಸವಿತಾ ಹರವಿ,ಶಾರದಮ್ಮ, ಹೆಚ್.ಗಂಗಮ್ಮ,ಸಹಾಯಕಿಯರಾದ ಸಿ.ಶಾಂತಮ್ಮ, ನಿಂಗಮ್ಮ, ಎಂ.ಅಂಜಿನಮ್ಮ, ಮಂಜಮ್ಮ ಸೇರಿದಂತೆ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು,ಸಹಾಯಕಿಯರು ಧರಣಿಯಲ್ಲಿ ಭಾಗವಹಿಸಿದ್ದರು 

ಸುದ್ದಿ ಓದಿ