ವಿವಿಧ ಬೇಡಿಕೆಗಳ ಈಡೇರಿಕೆಗೆ ಅಂಗನವಾಡಿ ಕಾರ್ಯಕರ್ತೆಯರ ಮನವಿ
ಶೇಡಬಾಳ 24: ಅಂಗನವಾಡಿ ಕಾರ್ಯಕರ್ತೆಯರ ಸಂರಕ್ಷಣೆ, ಮರಣ ಪರಿಹಾರ, ಕನಿಷ್ಠ ವೇತನ, ಪಿಂಚಣಿ ಸೇರಿದಂತೆ ಹಲವಾರು ಬೇಡಿಕೆಗಳನ್ನು ಆದಷ್ಟು ಬೇಗನೆ ಈಡೇರಿಸುವಂತೆ ಕಾಗವಾಡ ತಹಶೀಲ್ದಾರ ಇವರಿಗೆ ಮನವಿ ಪತ್ರ ಅರ್ಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರನ್ನು ಒತ್ತಾಯಿಸಲಾಯಿತು.
ಶುಕ್ರವಾರ ದಿ. 24 ರಂದು ಕಾಗವಾಡದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು), ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ(ಸಿಐಟಿಯು) ಆಶಾ ಕಾರ್ಯಕರ್ತೆಯರ ಸಂಘ(ಸಿಐಟಿಯು) ಕರ್ನಾಟಕ ರಾಜ್ಯ ಜಂಟಿ ಸಮಿತಿಗಳ ಆಶ್ರಯದಲ್ಲಿ 24 ಸಪ್ಟೆಂಬರ್ 2021 ರಂದು ಸ್ಕೀಂ ನೌಕರರ ಅಖಿಲ ಭಾರತ ಮುಷ್ಕರನ್ನು ಬೆಂಬಲಿಸಿ ಮನವಿ ಪತ್ರ ಅರ್ಿಸಿ ಸರ್ಕಾರವನ್ನು ಒತ್ತಾಯಿಸಲಾಯಿತು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಕಾಗವಾಡ ಘಟಕದ ಅಧ್ಯಕ್ಷೆ ಸುವರ್ಣಾ ಕಮತಗಿ ಕಾಗವಾಡ ಉಪ ತಹಶೀಲ್ದಾರ ವಿಜಯ ಅಸೂದೆ ಅವರಿಗೆ ಮನವಿ ಪತ್ರ ಅರ್ಪಿಸಿ ಮಾತನಾಡುತ್ತಾ ಅಂಗನವಾಡಿ ಕಾರ್ಯಕರ್ತೆಯರ ಹಲವಾರು ವರ್ಷಗಳ ಬೇಡಿಕೆಗಳಾದ ಹೆಚ್ಚುವರಿಯಾಗಿ ಮಾಸಿಕ ರೂ. 10,000 ಕೋವಿಡ್-19 ರ ಭತ್ಯೆ ನೀಡುವುದು. ಕೋವಿಡ್ -19 ರ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಸೋಂಕಿಗೆ ಪೀಡಿತರಾದರೆ ಅವರಿಗೆ 10 ಲಕ್ಷ ರೂ. ಗಳ ಪರಿಹಾರ ನೀಡುವುದು. ಕಾರ್ಮಿಕ ವಿರೋಧಿ ಸಂಹಿತೆಗಳನ್ನು ವಾಪಸ್ಸು ಪಡೆಯಬೇಕು. ಯೋಜನೆಗಳ ಕೆಲಸಗಾರರನ್ನು ಕಾರ್ಮಿಕರೆಂದು ಪರಿಗಣಿಸಬೇಕು. ಕೇಂದ್ರ ಯೋಜನೆ ಸ್ಕೀಮ ನೌಕರರನ್ನು ಖಾಯಂಗೊಳಿಸಿ, ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಜೆ.ಡಿ.ಪಿ.ಯ ಶೇ. 6 ರಷ್ಟು ಹಣವನ್ನು ಆರೋಗ್ಯ ಇಲಾಖೆಗೆ ಮೀಸಲಿಟ್ಟು ಆರೋಗ್ಯ ವ್ಯವಸ್ಥೆಯನ್ನು ಬಲ ಪಡಿಸುವುದು ಹೀಗೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರದ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.
ಕಾಗವಾಡ ತಾಲೂಕಿನ ಅಂಗನವಾಡಿ ಅಧ್ಯಕ್ಷೆ ಸುವರ್ಣಾ ಕಮತಗಿ, ಕಾರ್ಯದರ್ಶಿ ಸವಿತಾ ಹಿರೇಮಠ, ರೂಪಾ ಸಲಗರ, ಸೇವಂತಾ ಕಾಂಬಳೆ, ಅಂಜನಾ ಢಾಲೆ, ಸಾವಿತ್ರಿ ಕಾಂಬಳೆ, ಸುಮನ ಪಾಟೀಲ, ಶರಾವತಿ ಬಿಢೆ, ಸುಮಿತ್ರಾ ಮುಗುಳಿ, ಛಾಯಾ ಕಲೂತಿ, ಲತಾ ಕಟಾರೆ, ಬಿಸಿಯೂಟದ ಸೀಮಾ ಬುರ್ಕೆ, ಸವಿತಾ ಬಾಲಗೊಳ, ಗ್ರಾಮ ಪಂಚಾಯತಿಯ ಅಸ್ಲಂ, ಪದಮಣ್ಣ ಕುಂಬಾರ, ಮುರಗೇಶ ಸೇರಿದಂತೆ ಅನೇಕರು ಇದ್ದರು.