ಇಂಡಿ

ಮೈತುಂಬಿ ಹರಿಯುತ್ತಿರುವ ಭೀಮೆ

ಮೈತುಂಬಿ ಹರಿಯುತ್ತಿರುವ ಭೀಮೆ

ಇಂಡಿ 06:  ಕರ್ನಾಟಕ ಮತ್ತು ಮಹಾರಾಷ್ಟ್ರದ ಮಧ್ಯೆ ಹರಿಯುತ್ತಿರುವ ನದಿ ಭೀಮಾ ನದಿ, ಮಹಾರಾಷ್ಟ್ರದ ಪುಣೆ ಸೇರಿದಂತೆ ಅನೇಕ ಕಡೆ ಸುರಿಯುತ್ತಿರುವ ಮಳೆಯಿಂದ ಭೀಮಾ ನದಿಗೆ ಕಳೆ ಬಂದಿದೆ.ಮಾಹಾರಾಷ್ಟ್ರದ ಉಜ್ಜೇನಿ ಹಾಗೂ ವೀರಭಟಕಳ ಆಣೆಕಟ್ಟಿನಿಂದ ಸುಮಾರು ಒಂದು ಲಕ್ಷ ಅರವತ್ತು ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದ್ದು.ಇದರಿಂದ ವಿಜಯಪೂರ ಜಿಲ್ಲೆಯ ಚಡಚಣ -ಇಂಡಿ  ಹಾಗೂ ಸಿಂದಗಿ ತಾಲ್ಲೂಕಿನ ನದಿ ದಡದಲ್ಲಿ ಇರುವ ಜನರಿಗೆ ಆತಂಕ ಶುರುವಾಗಿದೆ.ಮಾಹಾರಾಷ್ಟ್ರದಿಂದ ಇನ್ನೂ ನೀರು ಬಿಟ್ಟರೆ ಚಡಚಣ -ಇಂಡಿ ಹಾಗೂ ಸಿಂದಗಿ ತಾಲ್ಲೂಕಿನ ಕೆಲ ಹಳ್ಳಿಗಳಿಗೆ ನೀರು ನುಗ್ಗಿ ಮನೆ ಹಾಗೂ ಬೆಳೆ ಕಳೆದುಕೊಳ್ಳುವ ಬಿತಿಯಲ್ಲಿ ಇದ್ದಾರೆ ರೈತರು.ಹಾಗೂ ಚಡಚಣ ತಾಲ್ಲೂಕಿನ ದಸೂರು ಹಾಗೂ ಸಿಂದಗಿ ತಾಲ್ಲೂಕಿನ ತಾರಾಪೂರ ಗ್ರಾಮ ಸಂಪರ್ಕ ಕಳೆದುಕೊಳ್ಳಲಿವೆ,ಪ್ರವಾಹವನ್ನು ಎದುರಿಸಲು ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ನೇತೃತ್ವದಲ್ಲಿ ಎಲ್ಲಾ ಅಧಿಕಾರಿಗಳು ಸನ್ನದರಾಗಿದ್ದು ನದಿ ದಡದಲ್ಲಿ ಇರುವ ಗ್ರಾಮಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಸೇರಿದಂತೆ ಸಂಬಂದಿಸಿದ ಅಧಿಕಾರಿಗಳು ವಾಸ್ತವ್ಯ ಹುಡಿದ್ದಾರೆ. 


ಸುದ್ದಿ ಓದಿ