ಅಂತರರಾಜ್ಯ ಮನೆಗಳ್ಳನ ಬಂಧನ: ಮೂರು ಲಕ್ಷ ರೂ. ಮೌಲ್ಯದ ನಗ ನಾಣ್ಯ ವಶ
ಅಥಣಿ 20: ಅಥಣಿ ಪಟ್ಟಣ ಹಾಗೂ ತಾಲೂಕಿನಾದ್ಯಂತ ಹೆಚ್ಚುತ್ತಿರುವ ಮನೆ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವ ಸಲುವಾಗಿ ಮಾನ್ಯ ಪೋಲೀಸ ಅಧೀಕ್ಷಞ ಲಕ್ಷಣ ನಿಂಬರಗಿ, ಐಪಿಎಸ್ ಹಾಗೂ ಹೆಚ್ಚುವರಿ ಪೋಲೀಸ ಅಧೀಕ್ಷಕ ಅಮರನಾಥ ರೆಡ್ಡಿ, ಕೆಎಸ್ಪಿಎಸ್, ಬೆಳಗಾವಿರವರ ಮಾರ್ಗದರ್ಶನದಲ್ಲಿ ಎಸ್.ವಿ ಗಿರೀಶ. ಡಿಎಸ್ಪಿ ಅಥಣಿ ಹಾಗೂ ಶಂಕರಗೌಡ ಬಸನಗೌಡರ, ಸಿ.ಪಿ.ಐ ಅಥಣಿ ರವರ ಉಸ್ತುವಾರಿಯಲ್ಲಿ ಎಮ್. ಡಿ, ಘೋರಿ, ಪಿ.ಎಸ್.ಐ. (ಅ.ವಿ.) ರವರ ನೇತೃತ್ವದಲ್ಲಿ ಅಥಣಿ ಪೋಲಿಸ್ ಠಾಣೆಯ ಎಎಸ್ಐ ವಿ ಜಿ ಆದೇರ ಹಾಗೂ ಸಿಬ್ಬಂದಿಗಳಾದ ಸಿ.ಎಚ್.ಸಿ. ಎಮ್ .3 ದೊಡಮನಿ, ಎ ಎ ಈರಕರ, ಪಿ ಆ ನಾಯಿಕ. ಪಿ.ಟಿ.ಪಾಟೀಲ, ಜೆ ತಳವಾರ ಅವರು ಅಂತರರಾಜ್ಯ ಮನೆಗಳ್ಳತನದ ಆರೊಪಿತನಾದ ಮಹಾರಾಷ್ಟದ ಜತ್ತ ನಿವಾಸಿ ರಮೇಶ ನಾಮದೇವ ಚವ್ಹಾಣ ಇವನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಅಥಣಿ ಪೋಲೀಸ ಠಾಣೆ ಹದ್ದಿಯಲ್ಲಿ 2 ಮನೆಗಳ್ಳತನ, 2 ವೈನ್ಶ್ಯಾಪ್ಗಳ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಈತನಿಂದ ಸುಮಾರು 2 ಲಕ್ಷ 99 ಸಾವಿರ 700 ರೂ ಬೆಲೆಯ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಹಾಗೂ ನಗದು ಹಣವನ್ನು ವಶಪಡಿಸಿಕೊಂಡಿದಾರೆ.
ಈತನ ಮೇಲೆ ಈಗಾಗಲೇ ಮಹಾರಾಷ್ಟ್ರದ ಜತ್ತ, ಉಮದಿ, ಕರ್ನಾಟಕದ ಅಥಣಿ, ರಾಯಭಾಗ, ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ, ಯಮಕನಮರಡಿ, ದಾವಣಗೆರೆ, ವಿಜಯಪೂರ ಪೋಲೀಸ ಠಾಣೆಗಳಲ್ಲಿ 20 ಕ್ಕೂ ಹೆಚ್ಚು ಮನೆಗಳ್ಳತನದ ಪ್ರಕರಣಗಳು ದಾಖಲಾಗಿರುತ್ತವೆ. ಸದರಿ ಪ್ರಕರಣಗಳನ್ನು ಪತ್ತೆ ಮಾಡಿದ ತನಿಖಾ ತಂಡದ ಕಾರ್ಯವನ್ನು ಆರಕ್ಷಕ ಅಧೀಕ್ಷಕರು ಶ್ಲಾಘಿಸಿದ್ದಾರೆ.