ಪುರಾಣ ಪ್ರಸಂಗದ ತೊಟ್ಟಿಲು ಕಾರ್ಯಕ್ರಮ
ಗುಳೇದಗುಡ್ಡ 18: ಸಮೀಪದ ಕೋಟೇಕಲ್ ಗ್ರಾಮದ ಹೊಳೆ ಹುಚ್ಚೇಶ್ವರ ಮಠದಲ್ಲಿ 111 ನೇ ವರ್ಷದ ಶ್ರಾವಣ ಮಾಸದ ನಿಮಿತ್ಯ ಒಂದು ತಿಂಗಳ ಪರ್ಯಂತ ನಡೆದಿರುವ ಪುರಾಣ ಕಾರ್ಯಕ್ರದಲ್ಲಿ ಸೋಮವಾರ ಮಗುವಿಗೆ ನಾಮಕರಣ ಮಾಡುವ ವಿನೂತನ ತೊಟ್ಟಿಲು ಕಾರ್ಯಕ್ರಮ ಜರುಗಿತು.
ಮುಳಗುಂದ ಮಹಾಂತ ಶ್ರೀಗಳ ಬಾಲಲೀಲಾ ಚರಿತ್ರೆಯಲ್ಲಿ ಬರುವ ಅವರ ತೊಟ್ಟಿಲು ಕಾರ್ಯಕ್ರಮದ ಸಂಕೇತವಾಗಿ ತೊಟ್ಟಿಲಲ್ಲಿ ನಿಜವಾದ ಗಂಡುಮಗುವನ್ನು ಹಾಕಿ ನಾಮಕರಣ ಮಾಡುವ ವಿನೂತನ ಸಾಂಪ್ರದಾಯಿಕ ಕಾರ್ಯಕ್ರಮ ಪುರಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತ ಮಹಿಳೆಯರು ಹಾಗೂ ಮಕ್ಕಳಿಂದ ವಿಶಿಷ್ಟವಾಗಿ ಜರುಗಿತು. ಪುಷ್ಪಾ ಗೌಡ್ರ, ಜ್ಯೋತಿ ವಾರಿ, ಲಕ್ಷ್ಮೀ ಅಬಕಾರಿ, ಅಶ್ವಿನಿ ಹುಚ್ಚೇಶ್ವರಮಠ, ಲಕ್ಷ್ಮೀ ಆಲೂರ ಸೇರಿದಂತೆ ಗ್ರಾಮದ ಮಹಿಳೆಯರು, ಅಕ್ಕನ ಬಳಗದ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಹಿರಿಯರಾದ ಶಾಂತಯ್ಯ ಹುಚ್ಚೇಶ್ವರಮಠ, ಶೇಖಪ್ಪ ಕಡಪಟ್ಟಿ, ಸಂಗಣ್ಣ ಪಟ್ಟಣಶೆಟ್ಟಿ, ಮೈಲಾರಲಿಂಗ ಆಲೂರ,ಮುತ್ತು ಮೊರಬದ, ಗುಂಡಣ್ಣ ಕೋಟಿ ಹಾಗೂ ಇತರರು ಇದ್ದರು.
ಮುಳಗುಂದ ಬಾಲಲೀಲಾ ಮಹಾಂತ ಶಿವಯೋಗಿಗಳ ಪುರಾಣವನ್ನು ಕೊಟೆಕಲ್ ಶ್ರೀಮಠದ 13 ನೇ ಹೊಳೆ ಹುಚ್ಚೆಶ್ವರ ಶ್ರೀಗಳು ನಡೆಸಿಕೊಡುತ್ತಿದ್ದು, ಪ್ರತಿನಿತ್ಯ ನೂರಾರು ಜನ ಮಹಿಳೆಯರು ಪಾಲ್ಗೊಳ್ಳುತ್ತಿದ್ದಾರೆ.