ಸಮಗ್ರ ಭಾರತದ ಕನಸು ಕಂಡ ಅಪ್ರತಿಮ ನಾಯಕ: ಬಂಡೆ
ಇಂಡಿ: ನವ ಭಾರತ ನಿರ್ಮಾಣದ ಬೀಜವನ್ನು ನೇತಾಜಿ ಸುಭಾಸರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲೇ ಬಿತ್ತಿ, ಸ್ವಾತಂತ್ರ್ಯೋತ್ತರ ಭಾರತ ಹೇಗಿರಬೇಕು, ಇಲ್ಲಿನ ರಾಜಕೀಯ, ಆರ್ಥಿಕ, ಸಾಮಾಜಿಕ ವ್ಯವಸ್ಥೆ ಹೇಗಿರಬೇಕು ಎಂಬ ಕುರಿತಂತೆ ದೂರದೃಷ್ಟಿತ್ವ ಹೊಂದಿ, ಸಮಗ್ರ ಭಾರತದ ಕನಸು ಕಂಡ ಅಪ್ರತಿಮ ನಾಯಕರಾಗಿದ್ದರು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಸೋಮವಾರ ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್ ಹಾಗೂ ಯುಬಿಎಸ್ ಶಾಲೆಯ ವತಿಯಿಂದ ಹಮ್ಮಿಕೊಂಡ ನೇತಾಜಿ ಸುಭಾಷ ಚಂದ್ರ ಬೋಸ ಅವರ ಜನ್ಮ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು. ಧರ್ಮ, ಮತ, ಜಾತಿ, ವರ್ಗ, ಕುಲ, ಲಿಂಗಗಳ ತಾರತಮ್ಯವಿಲ್ಲದೆ ದೇಶದ ಪ್ರತಿಯೊಬ್ಬ ನಾಗರಿಕನೂ ಈ ನೆಲದ ಕಾನೂನಿಗೆ ಸರಿಸಮಾನ ಎಂಬುದನ್ನು ಅವರು ಬಲವಾಗಿ ಪ್ರತಿಪಾದಿಸಿದ್ದರು ಎಂದು ಹೇಳಿದರು.
ಕೆಬಿಎಸ್ ಶಾಲಾ ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿ, ಪ್ರಜೆಗಳ ಹಕ್ಕು, ಕರ್ತವ್ಯಗಳು, ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ, ವಿದೇಶಗ???ಂದಿಗೆ ಭಾರತದ ಸಂಬಂಧ ವೃದ್ಧಿ, ಸಾಂಸ್ಕೃತಿಕ ಮತ್ತು ವ್ಯಾವಹಾರಿಕ ನಂಟನ್ನು ಬಲಪಡಿಸುವ ಮೂಲಕ ದೇಶದ ಘನತೆಯನ್ನು ಎತ್ತಿ ಹಿಡಿಯುವುದು ನೇತಾಜಿ ಅವರ ಮೊದಲ ಆದ್ಯತೆಯಾಗಿತ್ತು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಜಿಎಸ್ ಶಾಲಾ ಮುಖ್ಯ ಶಿಕ್ಷಕ ಎಸ್.ಎಸ್. ಅಂಕಲಗಿ, ಸುಭಾಷರ ದೇಶ ಪ್ರೇಮದ ಪ್ರಜ್ವಲ ಜ್ಯೋತಿ ಸರ್ವರಲ್ಲಿಯೂ ಬೆಳಗಿಸೋಣ. ರಾಷ್ಟ್ರಕ್ಕೆ ನೇತಾಜಿಯವರು ನೀಡಿರುವ ಅದಮ್ಯ ಮನೋಭಾವ ಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸಿ, ಎಲ್ಲರಲ್ಲಿ ಬೆಳೆಸೋಣ ಎಂದು ಹೇಳಿದರು.
ಶಿಕ್ಷಕ ಎಸ್.ಆರ್. ಚಾಳೇಕಾರ, ಸಾವಿತ್ರಿ ಸಂಗಮದ ಮಾತನಾಡಿದರು. ಶಿಕ್ಷಕರಾದ ಎಸ್.ಎಸ್. ಅರಬ, ಎಸ್.ಎಂ. ಪಂಚಮುಖಿ, ಎಸ್.ಡಿ. ಬಿರಾದಾರ, ವಿ.ವೈ. ಪತ್ತಾರ, ಎಸ್.ಎಂ. ಮಕಾನದಾರ, ಎಸ್.ಎಚ್. ಮೈದರಗಿ, ಎನ್.ಬಿ. ಚೌಧರಿ, ಎಸ್.ಪಿ. ಪೂಜಾರಿ, ಜೆ.ಎಂ. ಪತಂಗಿ, ಸುರೇಶ ದೊಡ್ಯಾಳಕರ, ಎಸ್.ಬಿ. ಕುಲಕರ್ಣಿ, ಜೆ.ಸಿ. ಗುಣಕಿ, ಎಸ್.ಎನ್. ಡಂಗಿ, ಎಂ.ಎಂ. ಪತ್ತಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್ ಹಾಗೂ ಯುಬಿಎಸ್ ಶಾಲೆಯ ವತಿಯಿಂದ ಹಮ್ಮಿಕೊಂಡ ನೇತಾಜಿ ಸುಭಾಷ ಚಂದ್ರ ಬೋಸ ಅವರ ಜನ್ಮ ದಿನಾಚರಣೆಯನ್ನು ಉದ್ದೇಶಿಸಿ ಶಿಕ್ಷಕ ಸಂತೋಷ ಬಂಡೆ ಮಾತನಾಡಿದರು.