ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ
ರಾಣಿಬೆನ್ನೂರ 02: ಗುರುವಿನ ಅನುಗ್ರಹವಿದ್ದರೆ ಮೂಕಂ ಕರೋತಿ ವಾಚಾಲಮ್ ಎಂಬುದಕ್ಕೆ ಇಂದಿನ ಜ್ಞಾನವಾಹಿನಿ ಕಾರ್ಯಕ್ರಮ ಸಾಡ್ಷಯಾಗಿದೆ. ಸರ್ವ ಸಮಾಜಕ್ಕೆ ಜಗದ್ಗುರು ವೀರಗಂಗಾಧರರ ಕೊಡುಗೆ ಅಪಾರವಾಗಿದೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ನಗರದ ಚೆನ್ನೇಶ್ವರ ಮಠದಲ್ಲಿ ಚೆನ್ನಮಲ್ಲಕಾರ್ಜುನ ಸ್ವಾಮಿ ಸಂಸ್ಕೃತಿ ಪ್ರಸಾರ ಪರಿಷತ್ತು ವತಿಯಿಂದ ನಡೆದ ಗೌರೀ ಹುಣ್ಣಿಮೆ ಜ್ಞಾನವಾಹಿನಿ 270 ರ ಹಾಗೂ ಮಾತೆ ಗೌರೀ ಪ್ರತಿಷ್ಠಾಪನೆ ಹಾಗೂ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ಪ್ರಾಚಾರ್ಯ ಯು. ಎನ್. ಸಂಗನಾಳಮಠ, ರಾಚಯ್ಯ ಶಾಸ್ತ್ರಿ, ಹಾಲಸಿದ್ದಯ್ಯ ಶಾಸ್ತ್ರಿ, ಗೌರಿಶಂಕರಸ್ವಾಮಿ ನೆಗಳೂರುಮಠ, ಬಸವರಾಜಪ್ಪ ಪಟ್ಟಣಶೆಟ್ಟಿ, ಚನ್ನವೀರಗೌಡ ಪಾಟೀಲ, ಶಿಉಮೇಶಪ್ಪ ಗುಂಡಗಟ್ಟಿ, ಅಮೃತಗೌಡ ಹಿರೇಮಠ, ವಿಜಯಾ ಮುಂಡಾಸದ, ಪಿ.ಎಮ್. ಸಿದ್ದಯ್ಯ, ಕಸ್ತೂರೆಮ್ಮ ಪಾಟೀಲ, ಬಿದ್ದಾಡಪ್ಪ ಚಕ್ರಸಾಲಿ, ಪುಟ್ಟ್ಟನಗೌಡ ಪಾಟೀಲ, ಸೋಮನಾಥ ಹಿರೇಮಠ, ವಿ.ಎಂ. ಕರ್ಜಗಿ, ಗುಡ್ಡಪ್ಪ ಹಿಂದಲಮನಿ, ಜಗದೀಶ ಮಳಿಮಠ ಇದ್ದರು.