ಇಂಡಿ

ಬ್ರಹ್ಮಕುಮಾರಿ ವಿವಿ ಕೇಂದ್ರದಲ್ಲಿ ಅಮೃತ ಮಹೋತ್ಸವ

ಬ್ರಹ್ಮಕುಮಾರಿ ವಿವಿ ಕೇಂದ್ರದಲ್ಲಿ ಅಮೃತ ಮಹೋತ್ಸವ


ಇಂಡಿ 29: ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷದ ಅವಧಿಯಲ್ಲಿ ಸರಕಾರ ಅನುಷ್ಠಾನಗೊಳಿಸಿರುವ ಎಲ್ಲ ಯೋಜನೆಗೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿ.ವಿ ಕೈಜೋಡಿಸಲಿದೆ ಎಂದು ಸಂಸ್ಥೆಯ ಸಂಚಾಲಕಿ ಬಿ.ಕೆ.ಯಮುನಾ ಅಕ್ಕಾ ಹೇಳಿದರು. 

ಅವರು ಶನಿವಾರ ಪಟ್ಟಣದ ಬ್ರಹ್ಮಕುಮಾರಿ ವಿವಿ ಕೇಂದ್ರದಲ್ಲಿ ಅಮೃತ ಮಹೋತ್ಸವ ನಿಮಿತ್ಯ ಆಯೋಜಿಸಿರುವ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು. 

ಈಗಾಗಲೇ ಪ್ರಧಾನಿ ಮೋದಿ ಅವರು ಮೌಂಟ ಅಬು ವಿ.ವಿ ಬ್ರಹ್ಮಕುಮಾರಿಸ್ ಕೇಂದ್ರದಲ್ಲಿ ಯೋಜನೆ ಉದ್ಘಾಟಿಸಿದ್ದಾರೆ. ಅದಕ್ಕಾಗಿ ತಾಲೂಕಿನಾದಂತ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಕಾರ್ಯಕ್ರಮಗಳನ್ನು ರವಾನಿಸಲಾಗಿದೆ. 

ಪ್ರಮುಖವಾಗಿ ಯುವಪೀಳಿಗೆಗೆ ಸತ್ಯ ಮಾರ್ಗದರ್ಶನಕ್ಕಾಗಿ  20 ವರ್ಗದಿಂದ ವಾಹನ ರಾ​‍್ಯಲಿ, ಲಲಿತ ಕಲಾ ಸ್ಪರ್ಧೆ, ದೇಶ ಭಕ್ತಿ, ಸಂಗೀತ, ನೃತ್ಯ ರೂಪಕ ದರ್ಶನ ಏರಿ​‍್ಡಸಲಾಗುವದು. 

ಕಾರ್ಯಕ್ರಮವನ್ನು ಗ್ರಾಮಮಟ್ಟದಿಂದ ಆಯೋಜಿಸಲಾಗಿದೆ. ದೇಶಿಯ ಸಂಸ್ಕಾರ ಬಯಸುವ ಎಲ್ಲ ಬಗೆಯ ಚಟುವಟಿಕೆ ಆಯೋಜಿಸಿ ಯುವ ಜನತೆಗೆ ಸ್ವರ್ಣಿಮಾ ಭಾರತದೆಡೆಗೆ ಸಾಗಲು ಕಾರ್ಯಕ್ರಮ ರೂಪಿಸಲಾಗುವದು ಎಂದರು. 

ಬಿ.ಕೆ.ಶ್ರೀದೇವಿ ಅಕ್ಕನವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಮೌಲ್ಯ ಶಿಕ್ಷಣದ ಅರಿವು ಮೂಡಿಸಲು ಶಿಕ್ಷಣ ಇಲಾಖೆಯೊಂದಿಗೆ ಮಾತನಾಡಿದ್ದು ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ರೂಪಿಸಲಾಗುವದು ಎಂದರು. 

ಅರವಿಂದ ಕಠಾರೆ, ರಾಜಶ್ರೀ ಕೋಳೆಕರ, ಶಿವಲಿಂಗಪ್ಪ ಪಟ್ಟದಕಲ್ಲ, ಲಲಿತಾ ಹೂಗಾರ, ಸಾವಿತ್ರಿ ಜಾಮಗೊಂಡಿ ಮತ್ತಿತರಿದ್ದರು. 


ಸುದ್ದಿ ಓದಿ