ರಾಣೆಬೆನ್ನೂರ

ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸಾಧನೆಗೆ ಸಾಕಷ್ಟು ಅವಕಾಶ: ಡಾ. ರಾಜಶೇಖರ ಚಕ್ಕಿ

ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸಾಧನೆಗೆ ಸಾಕಷ್ಟು ಅವಕಾಶ: ಡಾ. ರಾಜಶೇಖರ ಚಕ್ಕಿ

ರಾಣೇಬೆನ್ನೂರು 19:  ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ, ಬಹುಮಾಧ್ಯಮ, ಜ್ಞಾನ,ತಂತ್ರಜ್ಞಾನ ಮತ್ತು ಹೊಸ ಹೊಸ ಆವಿಷ್ಕಾರಗಳ ವಿಷಯಗಳು ಶಿಕ್ಷಣ ಸಾಧನೆಗೆ ಸಹಕಾರಿಯಾಗಿವೆ ಎಂದು ಸರಕಾರಿ ಪದವಿ ಕಾಲೇಜು ಉಪನ್ಯಾಸಕ  ಡಾ. ರಾಜಶೇಖರ ಚಕ್ಕಿ ಹೇಳಿದರು. 

ರವಿವಾರ ಇಲ್ಲಿನ ಕೆಇಬಿ  ವಿನಾಯಕ ದೇವಸ್ಥಾನದ ಆವರಣದಲ್ಲಿ ಡಾಕ್ಟರ್ ಚಕ್ಕಿ ವಿದ್ಯಾರ್ಥಿ ಅಭಿಮಾನಿ ಬಳಗವು  ಫಾದರ್ಸ್‌  ಡೇ  ನಿಮಿತ್ತ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿನಂದನಾ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ  ಮಾತನಾಡಿದರು.          ಎಸ್ ಎಸ್ ಎಲ್ ಸಿ ನಂತರ ದೊರೆಯಬಹುದಾದ ಎಲ್ಲ ಶಿಕ್ಷಣಕ್ಕೂ ಪ್ರಾಥಮಿಕ ಶಿಕ್ಷಣವು ಎಲ್ಲ ವಿದ್ಯಾರ್ಥಿಗಳಿಗೂ ಭದ್ರಬುನಾದಿಯಾಗಿರುತ್ತದೆ. ಎಂದ ಅವರು ಸಾಧನೆಗೆ ಗುರಿ ಮತ್ತು ಗುರುವಿನ ಮಾರ್ಗದರ್ಶನ ಅಗತ್ಯವಿದ್ದು, ಪಾಲಕರ ಸಹಕಾರ ಬಹುಮುಖ್ಯವಾಗಿರುತ್ತದೆ ಎಂದರು.  

ಸಮಾಜದಲ್ಲಿ ಸಮಾನತೆ ಕಾಣಲು ಬಡವ, ಶ್ರೀಮಂತ, ಜಾತಿ, ಮತ, ಎನ್ನುವ  ಯಾವುದೇ ಭೇದ ಭಾವ ಅಡ್ಡಿ ಬರಲಾರದು. ಸಮಾನತೆಗೆ ಶಿಕ್ಷಣದಲ್ಲಿ ಮಾಡುವ ಸಾಧನೆಯೇ  ಬಹು ಮುಖ್ಯವಾಗುತ್ತದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ, ಯುವ ಮುಖಂಡ ಯುವರಾಜ ಬಾರಾಟಕ್ಕಿ  ಅವರು, ಕಳೆದ ಎಂಟು ವರ್ಷಗಳ ಹಿಂದೆ, ಶೈಕ್ಷಣಿಕ ಸಾಧಕರ ವಿದ್ಯಾರ್ಥಿಗಳು  ಸೇರಿಕೊಂಡು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ವೈಜ್ಞಾನಿಕ ವಿಚಾರದೊಂದಿಗೆ ಸೇವೆ ಮಾಡಬೇಕೆನ್ನುವ ಏಕೈಕ ಉದ್ದೇಶದಿಂದ ಸಂಘವನ್ನು ಸ್ಥಾಪಿಸಲಾಗಿದೆ ಎಂದರು.      ಅಭಿಮಾನಿ ಬಳಗದ ಮೂಲಕ ಪ್ರತಿ ವರ್ಷವೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದೇವೆ. ಈ ಬಾರಿ  ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ವಿವಿಧ ವಿಷಯಗಳ ಮೂಲಕ  ಅತ್ಯುನ್ನತ ಸ್ಥಾನಗಳಿಸಿ, ತಾಲೂಕಿನ ಪ್ರಥಮ ಸಾಧಕ ವಿದ್ಯಾರ್ಥಿಗಳಾದ, ರೋಟರಿ ಕಾಲೇಜಿನ ಆದರ್ಶ ತಟಪಟ್ಟಿ,( ವಾಣಿಜ್ಯ-ಅ585) ಅನುಷಾ ಹಿತ್ತಲಮನಿ (ಕಲಾ -ಅ584) ಹಾಗೂ ವಿಜ್ಞಾನ-ಅ578) ರಕ್ಷಿತಾ ಎ. ನಾಡಿಗೇರ್, ಸಾಧಕ ವಿದ್ಯಾರ್ಥಿಗಳನ್ನು  ಅಭಿನಂದಿಸಿ, ಸನ್ಮಾನಿಸಿ, ಸಾರ್ವಜನಿಕವಾಗಿ  ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅಭಿಮಾನಿ ಬಳಗದ ಸದಸ್ಯರಾದ ಪ್ರವೀಣ್ ಚಿನ್ನಿಕಟ್ಟಿ, ಪಾಂಡುರಂಗ ರಾಂಪುರ, ರೋಹಿತ್ ಅಗರವಾಲ್, ಸಚಿನ್ ಲಿಂಗನಗೌಡ್ರ, ಕುಮಾರ ಪಾಟೀಲ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕವಿತಾ ಸಂಗಡಿಗರು ಪ್ರಾರ್ಥಿಸಿದರು, ವಿನಾಯಕ ಶಿಗ್ಲಿಕರ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ