ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಟೆಂಡರ್ ಪ್ರಕ್ರಿಯೆ ಪೂರ್ಣ: ಕುಮಠಳ್ಳಿ
ಅಥಣಿ 25: ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಾರ್ಚ 28 ರಂದು ಟೆಂಡರ್ ಓಪನ್ ಮಾಡಲಾಗುವುದು ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
ಅವರು ಕಕಮರಿ ಗ್ರಾಮದಲ್ಲಿ 3 ಕೋಟಿ ವೆಚ್ಚದ ಕಕಮರಿ ಮಾಹಾರಾಷ್ಟ್ರ ಗಡಿಯ ಉಮರಾಣಿ ವರೆಗಿನ ರಸ್ತೆಗೆ, ಕಕಮರಿಯಿಂದ ರಾಮತೀರ್ಥ ಮಾಹಾರಾಜರ ತೋಟದವರೆಗಿನ, ಕೋಕಟನೂರ ದಿಂದ ಶಿರಹಟ್ಟಿ 1 ಕೋಟಿ 41 ಲಕ್ಷ ರೂ ಗಳ ಅನುದಾನದಲ್ಲಿ ಮಂಜೂರಾದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಅಮ್ಮಾಜೇಶ್ವರಿ ಏತ ನೀರಾವರಿ ಮಂಜೂರಾತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಚಿವ ಸತೀಶ ಜಾರಕಿಹೊಳಿಯವರ ಸಹಕಾರವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದರು.
ಅಥಣಿ ಮತ ಕ್ಷೇತ್ರದಲ್ಲಿ ಮಾರ್ಚ 24 ರಂದು 13 ಕೋಟಿ 48 ಲಕ್ಷ ರೂ ಅನುದಾನದಲ್ಲಿ ಜನಪರ ಹಾಗೂ ಅಭಿವೃದ್ಧಿ ಪರ ಯೋಜನೆಗಳನ್ನು ಅನುಷ್ಠಾನಗೊಳಿಸಿರುವೆ. ಜೈನ್ ಸಮುದಾಯದ ಭವನಗಳಿಗಾಗಿ 2 ಕೋಟಿ 10 ಲಕ್ಷ ಅನುದಾನ ಮಂಜೂರಾಗಿದ್ದು, ಕೆಲವೇ ದಿನಗಳಲ್ಲಿಯೇ ಈ ಭವನಗಳಿಗೂ ಭೂಮಿ ಪೂಜೆ ನೆರವೇರಿಸುವೆ ಎಂದರು.
ಗುತ್ತಿಗೆದಾರರಾದ ಶಿವಾನಂದ ಸಿಂಧೂರ, ಗುರು ಪಾಟೀಲ, ಶ್ರೀಧರ ಹಂಡಿ, ಧುರೀಣರಾ ವೆಂಕಣ್ಣಗೌಡ ಪಾಟೀಲ, ಗುರ್ಪ ದಾಶಾಳ, ಶ್ರೀಶೈಲ ಜನಗೌಡ, ಗೀರೀಶ ಬಸರಗಿ, ರಮೇಶ ಧುಮಾಳೆ, ಗೀರೀಶ ಸಜ್ಜನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.