ರಾಣೆಬೆನ್ನೂರ

ಅಂಬುಲೆನ್ಸ್ ಸ್ಥಗಿತ: ಆಕ್ರೋಶಿತರಾದ ಕುಪ್ಪೇಲೂರು ಗ್ರಾಮದ ರೈತರು

ಅಂಬುಲೆನ್ಸ್ ಸ್ಥಗಿತ: ಆಕ್ರೋಶಿತರಾದ ಕುಪ್ಪೇಲೂರು ಗ್ರಾಮದ ರೈತರು

ರಾಣೆಬೆನ್ನೂರು 26:  ತಾಲೂಕಿನ ಕುಪ್ಪೇಲೂರ ಗ್ರಾಮದಲ್ಲಿ ಯುವ  ರೈತನು, ಸಾಲದ ಬಾಧೆಯಿಂದ, ಚೇತರಿಸಿಕೊಳ್ಳಲಾಗದೆ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿ, ಅಂತಿಮವಾಗಿ ಸಾವು ಕಂಡಿದ್ದನು. ಶವ ಮಹಜರಿಗಾಗಿ, ಅಂಬುಲೆನ್ಸ್ ಇಲ್ಲದೆ ಪರದಾಡಿದ ರೈತ ಮುಖಂಡರು, ಆಟೋದಲ್ಲಿ ಶವ ತಂದು, ಮಹಜರು ನಡೆಸಲಾಯಿತು. 

ಇದರಿಂದ ಕುಪಿತಗೊಂಡ ಗ್ರಾಮದ ನೂರಾರು ರೈತರು, ಯೋಜನೆ ಇರುವುದು ಯಾತಕ್ಕಾಗಿ,ಯಾರಿಗಾಗಿ, ಎದಕ್ಕಾಗಿ, ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಬಿಗಿ ಪಟ್ಟು ಸಡಿಲಿಸದೆ ಶವವಿಟ್ಟು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಘಟನೆ ಸುದ್ದಿ ತಿಳಿದು ತಕ್ಷಣವೇ ಸ್ಥಳಕ್ಕೆ ಧಾವಿಸಿದ, ಉಪತಹಸೀಲ್ದಾರ್ ಎಂ.ಎನ್ಹಾದಿಮನಿ ಮತ್ತು ಸಿಬ್ಬಂದಿ, ರೈತರೊಂದಿಗೆ ಸಮಾಲೋಚನೆ ನಡೆಸಿ, ರೈತ ಮುಖಂಡ ಸುರೇಶ್ ಭಾನುವಳ್ಳಿ, ರವೀಂದ್ರ ಗೌಡ ಪಾಟೀಲ ಅವರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸಂಘಟನಾ ಕಾರ್ಯದರ್ಶ ರವೀಂದ್ರಗೌಡ ಅವರು, ಅಪಘಾತ, ವಿಷ ಸೇವನೆ, ಹೆರಿಗೆ ಸೇರಿ ಹತ್ತು ಹಲವಾರು, ಸಾರ್ವಜನಿಕ ಸೇವೆಗಾಗಿ ಮೀಸಲಾಗಿರುವ 108 ಅಂಬುಲೆನ್ಸ್ ವಾಹನ  ಸ್ಥಗಿತಗೊಂಡಿದ್ದರಿಂದ, ಬಡವರು ಗ್ರಾಮೀಣ ನಾಗರಿಕರು, ಗರ್ಭಿಣಿಯರು, ಅಪಘಾತಕ್ಕೊಳಪಟ್ಟಿವರು, ವಾಹನಕ್ಕಾಗಿ ಪರದಾಡಿ ಸಾವು ಕಂಡಿದ್ದಾರೆ. ರಾಜ್ಯದಲ್ಲಿ ನಡೆದಿರುವ ಘಟನೆಗೆ ನೇರವಾಗಿ ಸರಕಾರವೇ  ಹೊಣೆಯಾಗಿದೆ, ಇಂತಹ ದುಸ್ಥಿತಿಗೆ ತಲುಪಿರುವ  ಸರಕಾರಕ್ಕೆ, ನಾಚಿಕೆಯಾಗಬೇಕು, ಕೂಡಲೇ ವ್ಯವಸ್ಥೆ ಸರಿಪಡಿಸಿ, ಗ್ರಾಮೀಣ ನಾಗರಿಕರ ಸೇವೆಗೆ ಮುಂದಾಗಬೇಕು ಇಲ್ಲವಾದಲ್ಲಿ  ಬರುವ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. 24ರಿಂದ ಗ್ರಾಮೀಣ ನಾಗರಿಕರು 108 ವಾಹನಕ್ಕೆ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ ಎಂದು ಅಧಿಕಾರಿಗಳಿಗೆ,ಶಾಸಕರಿಗೆ,ಸಚಿವರಿಗೆ ಗಮನಕ್ಕೆ ತಂದರು, ಯಾರು ಲಕ್ಷಕ್ಕೆ ತೆಗೆದುಕೊಳ್ಳದಿರುವುದು, ಈ ನಾಡಿನ ಜನರ ದುರ್ದವದ ಸಂಗತಿ. ಜಿವಿಕೆ ಸಂಸ್ಥೆಗೆ ಟೆಂಡರ್ ಪಡೆದಿದ್ದು, ಸರಕಾರದಿಂದ ಬರಬೇಕಾದ ಬಾಕಿ ಹಣ ಬಾರದೇ ಇರುವುದೇ ಈ ಅವಘಡಕ್ಕೆ ಕಾರಣವಾಗುತ್ತಿದೆ ಎಂದು ಆರೋಪಿಸಿದರು 

ಸುದ್ದಿ ಓದಿ